Google ಬದಲಾಗಿ ಬರುತ್ತಾ ಮತ್ತೊಂದು ಸರ್ಚ್ ಇಂಜಿನ್

ಸದ್ಯ ಗೂಗಲ್‌ ಕಂಪನಿಯು ತನ್ನ ಸರ್ಚ್ ಎಂಜಿನ್ನೇ ಆ್ಯಪಲ್‌ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ ಹಾಗೂ ಟ್ಯಾಬ್‌ಗಳಲ್ಲಿ ಬಳಕೆಯಾಗಲಿ ಎಂದು ಪ್ರತಿ ವರ್ಷ ಆ್ಯಪಲ್‌ ಕಂಪನಿಗೆ 10 ಬಿಲಿಯನ್‌ ಡಾಲರ್‌ (ಸುಮಾರು 75 ಸಾವಿರ ಕೋಟಿ ರು.) ನೀಡುತ್ತದೆ. ಈ ಒಪ್ಪಂದ ಮುಕ್ತಾಯವಾಗುವ ಸಮಯ ಸಮೀಪಿಸಿದೆ. ಜೊತೆಗೆ, ಅಮೆರಿಕ ಸರ್ಕಾರವು ಈ ಒಪ್ಪಂದ ಕಾನೂನುಬಾಹಿರವಾಗಿರುವ ಬಗ್ಗೆ ತನಿಖೆ ನಡೆಸುತ್ತಿದೆ. ಹೀಗಾಗಿ ತನ್ನದೇ ಸರ್ಚ್ ಎಂಜಿನ್‌ ರೂಪಿಸಿ ಬಿಡುಗಡೆ ಮಾಡಲು ಆ್ಯಪಲ್‌ ಕಂಪನಿ ನಿರ್ಧರಿಸಿದೆ ಎಂದು ಹೇಳಲಾಗಿದೆ.
 

ಈಗಾಗಲೇ ಆ್ಯಪಲ್‌ ಬಳಿ ಸ್ವಂತ ಸರ್ಚ್ ಎಂಜಿನ್‌ ಇದೆ. ಆದರೆ ಅದನ್ನು ವ್ಯಾಪಕವಾಗಿ ಬಳಸುವಂತೆ ಮಾಡಲು ಆ್ಯಪಲ್‌ ಕಂಪನಿಯೇ ಪ್ರಯತ್ನಿಸುತ್ತಿಲ್ಲ. ಇನ್ನು, ಜಾಹೀರಾತಿನಿಂದ ಹಣ ಗಳಿಸುವ ಗೂಗಲ್‌ನ ನೀತಿ ಆ್ಯಪಲ್‌ ಕಂಪನಿಯ ನೀತಿಗೆ ವಿರುದ್ಧವಾಗಿದೆ. ಆದರೆ, ಈಗ ತನ್ನದೇ ಸರ್ಚ್ ಎಂಜಿನ್‌ ರೂಪಿಸಿದರೆ ಗೂಗಲ್‌ನಿಂದ ಬರುತ್ತಿದ್ದ ದೊಡ್ಡ ಮೊತ್ತದ ಆದಾಯಕ್ಕೆ ಪ್ರತಿಯಾಗಿ ಆ್ಯಪಲ್‌ ಕಂಪನಿ ಕೂಡ ಜಾಹೀರಾತಿನಿಂದ ಹಣ ಗಳಿಸಲು ಆರಂಭಿಸುತ್ತದೆಯೇ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು