ಲೇಖನ : ಮಲ್ಲಪ್ಪ ಪಟ್ಟಣಶೇಟ್ಟಿ.
ಜಾತ್ಯಾತೀತ ಎಂದರೇ ಹಿಂದೂಗಳ ಅವನತಿ
ಸೆಕ್ಯೂಲರ್ ಎಂಬ ಪದ ಯುರೋಪ ನ ಕ್ರೈಸ್ತ ಸಂಕಲ್ಪನೆಯಾಗಿದೆ.
ಕ್ರೈಸ್ತ ಪಂಥದಲ್ಲಿರುವ ಉಪಪಂಥಗಳಾದ ಕ್ಯಾಥೋಲಿಕ್ ,ಪ್ರೋಟಿಸ್ಟಂಟ್ ಇನ್ನೀತರ ಉಪ ಪಂಥಗಳ ನಡುವೆ ಸಮಾನತೆಯನ್ನು ಸಾಧಿಸಲು ಯುರೋಪನಲ್ಲಿ ಮೊದಲ ಬಾರಿಗೆ ಸೆಕ್ಯೂಲರ್ ಎಂಬ ಪದವನ್ನು ಬಳಸಲಾಯಿತು.
ಸೆಕ್ಯೂಲರ್ ಎಂಬ ಪದ ಭಾರತಕ್ಕೆ ಬರುವುದಕ್ಕಿಂತ ಮುಂಚೆ ಭಾರತ ಸ್ವಯಂಭೂ ಹಿಂದೂರಾಷ್ಟ್ರವಾಗಿತ್ತು .
ಹೆಚ್ಚೇನೂ 1976 ರಲ್ಲಿ ದಿವಂಗತ ಇಂದಿರಾಗಾಂಧಿಯು ತುರ್ತು ಪರಿಸ್ಥಿತಿ ಎಂದು ಹೇಳಿ, ಸಮಾಜವಾದ ಮತ್ತು ಸೆಕ್ಯೂಲರ್ ಈ ಎರಡು ಪದವನ್ನು ಸಂವಿಧಾನದಲ್ಲಿ ಸೇರಿಸಿದರು, ಅದರ ನಂತರವಷ್ಟೇ ಭಾರತ ಒಂದು ಜಾತ್ಯಾತೀತ ಅಥವಾ ಸೆಕ್ಯೂಲರ್ ರಾಷ್ಟ್ರವಾಯಿತು.
1947 ರ ಆಚೆಗೂ ಕೂಡ ಭಾರತ ಒಂದು ಹಿಂದೂರಾಷ್ಟ್ರವಾಗಿತ್ತು .
ಜಾತ್ಯಾತೀತ ಎಂಬ ಪದವು ಹಿಂದೂಗಳನ್ನು ಧರ್ಮ ವಿಮುಖರನ್ನಾಗಿ ಮಾಡುತ್ತಿದೆ.
ಎಲ್ಲಿಯವರೆಗೆ ಸಂವಿಧಾನದಲ್ಲಿ ಜಾತ್ಯಾತೀತ ಶಬ್ದ ಇರುವವರೆಗೂ ಹಿಂದೂತ್ವ ಅಥವಾ ಹಿಂದೂಧರ್ಮಕ್ಕೆ ಪ್ರಾಧ್ಯಾನ್ಯತೆ ಸಿಗುವುದಿಲ್ಲ .
ಸಂವಿಧಾನದಲ್ಲಿ ಜಾತ್ಯಾತೀತ ಎಂಬ ಶಬ್ದ ಬಳಕೆಯಾದ ಮೇಲೆ ದೇಶದ ವ್ಯವಸ್ಥೆ ಸಂಪೂರ್ಣವಾಗಿ ಅವ್ಯವಸ್ಥೆಯಾಗಿದೆ.
ಪ್ರಸಾರಮಾಧ್ಯಮಗಳು, ಬುದ್ಧಿಜೀವಿಗಳು ಹಿಂದೂಗಳಿಗೆ ನೀವು ಸೆಕ್ಯೂಲರ್ ಇದ್ದೀರಿ, ನೀವು ಜಾತ್ಯಾತೀತರು ಎಂದು ಹೇಳಿ ಅವಮಾನವನ್ನು ಮಾಡಿದ್ದಾರೆ .ಆದರೆ ಈ ಜಾತ್ಯಾತೀತ ಎಂಬ ಪದದಿಂದ ಯಾವುದೇ ಒಬ್ಬ ಮುಸಲ್ಮಾನನು ಮಸೀದಿಗೆ ಹೋಗುವುದನ್ನು ಬಿಡಲಿಲ್ಲ ,ರಂಜಾನ್ ಉಪವಾಸವನ್ನು ಮರೆಯಲಿಲ್ಲ ,ಕ್ರೈಸ್ತರು ಚರ್ಚಗೆ ಹೋಗುವುದನ್ನು ಬಿಡಲಿಲ್ಲ ,ಏಸುವನ್ನು ಪ್ರಾರ್ಥಿಸುವುದನ್ನು ನಿಲ್ಲಿಸಲಿಲ್ಲ .
ಆದರೆ ಜಾತ್ಯಾತೀತ ಎಂಬ ಪದದಿಂದ, ಸೆಕ್ಯೂಲರ್ ವ್ಯವಸ್ಥೆಯಿಂದ ಹಿಂದೂಗಳು ಹಿಂದೂತ್ವವನ್ನು ಮರೆತಿದ್ದಾರೆ .
ಹಿಂದೂಗಳ ಹಣೆಯಲ್ಲಿ ಕುಂಕುಮ ಮರೆಯಾಗಿದೆ, ದೇವಸ್ಥಾನಕ್ಕೆ ಹೋಗುವುದನ್ನು ಮರೆತಿದ್ದಾರೆ, ದೇವರನ್ನು ಮರೆತಿದ್ದಾರೆ, ಸಂತರನ್ನು ಅವಮಾನಿಸುತ್ತಿದ್ದಾರೆ, ಹೆಚ್ಚೇನೂ ಸಂಸ್ಕಾರದ ಜೋತೆಗೆ ನಮ್ಮ ದೇಶದ ಭವ್ಯ ಪರಂಪರೆಯನ್ನೇ ಮರೆತಿದ್ದಾರೆ .
ಸ್ವಲ್ಪ ಯೋಚಿಸಬೇಕಿದೆ ,
ಜಾತ್ಯಾತೀತ ವ್ಯವಸ್ಥೆಯಲ್ಲಿ ಅನ್ಯಪಂಥಿಯರು ಧರ್ಮಾಚರಣೆ ಮಾಡಬಹುದು,ಆದರೆ ಹಿಂದೂಗಳು ಧರ್ಮಾಚರಣೆ ಮಾಡುವಂತಿಲ್ಲ .
ಇದು ನಮ್ಮ ಜಾತ್ಯಾತೀತ ವ್ಯವಸ್ಥೆಯ ಸದ್ಯದ ಪರಿಸ್ಥಿತಿ .
ನಮ್ಮ ದೇಶದ ಗತವೈಭವವನ್ನು ಒಮ್ಮೆ ನೆನಪಿಸಿಕೊಳ್ಳಿ ಎಲ್ಲಿಯೂ ನಾವು ಧರ್ಮವನ್ನು ಬಿಡಲಿಲ್ಲ , ಧರ್ಮಭೃಷ್ಟನಾದ ಮಗದದೇಶದ ರಾಜನಾದ ನಂದನನ್ನು ಪದಚ್ಯುತಿಗೊಳಿಸಿ, ಧರ್ಮದ ಆಧಾರದ ಮೇಲೆ ಚಂದ್ರಗುಪ್ತನಿಗೆ ಪಟ್ಟಕಟ್ಟಿ ಅಧರ್ಮಕ್ಕೆ ನಾಂದಿಹಾಡಿದ ಕೀರ್ತಿ ಚಾಣ್ಯಕನದು .
ಮೊಗಲರ ಆಕ್ರಮಣದಿಂದ ಹಿಂದೂಗಳನ್ನು ರಕ್ಷಿಸಲು ಶಿವಾಜಿಯನ್ನೇ ಅಸ್ತ್ರವಾಗಿ ಬಳಸಿ, ಮತ್ತೆ ಧರ್ಮವನ್ನು ರಕ್ಷಿಸಿದ ಸಮರ್ಥ ರಾಮದಾಸರು , ಮತಾಂತರವಾಗಿದ್ದ ಹಕ್ಕಬುಕ್ಕ ರಿಂದ ವಿದ್ಯಾರಣ್ಯರ ಭವ್ಯ ವಿಜಯನಗರ ಸ್ರಾಮಾಜ್ಯದ ಉಗಮ
ಹೀಗೆ ಎಲ್ಲಿಯೂ ನಾವು ಧರ್ಮವನ್ನು ಮರೆಯಲಿಲ್ಲ .
ನಮಗೆ ಧರ್ಮಾದಿಷ್ಠ ಹಿಂದೂರಾಷ್ಟ ಬೇಕು .
ಜಾತ್ಯಾತೀತ ಎಂಬ ಪದವನ್ನು ಸಂವಿಧಾನದಿಂದ ಕಿತ್ತೆಸೆಯಬೇಕು.
ಸಮಾನತೆ , ಸೌಹಾರ್ದತೆ , ಜಾತ್ಯಾತೀತ ಎಂಬ ಪದಗಳಿಂದ ಹಿಂದೂಗಳನ್ನು ಹತ್ತಿಕ್ಕಲಾಗುತ್ತಿದೆ , ಇದೇ ಬುದ್ಧಿಜೀವಿಗಳ, ಮಾಧ್ಯಮಗಳ ಅಸ್ತ್ರವಾಗಿದೆ .
ಬುದ್ಧಿಜೀವಿಗಳೆ, ಹಿಂದೂಗಳಿಗೆ ನಿಮ್ಮ ಸೌಹಾರ್ದತೆಯ ಪಾಠವನ್ನು ಕಲಿಸಲು ಬರಬೇಡಿ.
5000 ವರ್ಷಗಳಿಂದಲೂ ಹಿಂದೂಗಳು ವಿಶ್ವದ ಶಾಂತಿಯನ್ನು ಬಯಸುತ್ತಾ ಬಂದಿದ್ದಾರೆ .
ಮೊಗಲರು ಪರ್ಶಿಯಾದ ಮೇಲೆ ಆಕ್ರಮಣ ಮಾಡಿದಾಗ ಇರಾನಿಗಳಿಗೆ ಆಶ್ರಯವನ್ನು ಕೊಟ್ಟಿದ್ದೇವೆ .ಪಾರ್ಶಿಯಾದಿಂದ ಬಂದ ರತನ್ ಟಾಟರವರು ಇಂದು ವಿಶ್ವಮಟ್ಟದಲ್ಲಿ ಗುರುತಿಸಲು ನಾವು ಆಶ್ರಯದಾತರಾಗಿದ್ದೇವೆ.ಆಶ್ರಯಬಯಸಿ ಬಂದವರನ್ನು ಎಂದಿಗೂ ಅವಮಾನ ಮಾಡಿ ಕಳುಹಿಸಲಿಲ್ಲ .
ಇದು ನಮ್ಮ ಸೌಹಾರ್ದತೆ.
ಭಾರತದಿಂದ ಪಾಕಿಸ್ತಾನ ತುಂಡಾದಾಗ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ ಆಗುತ್ತದೆ, ಬಾಂಗ್ಲಾವು ಪಾಕಿಸ್ತಾನದಿಂದ ಬೇರ್ಪಟ್ಟು ಇಸ್ಲಾಮಿಕ ಸ್ಟೇಟ್ ಆಫ್ ಬಾಂಗ್ಲಾದೇಶ ಎಂದು ಘೋಷಣೆಯಾಗುತ್ತದೆ .
ಆದರೆ ಉಳಿದ ಭಾರತವು ಹಿಂದೂರಾಷ್ಟ್ರದ ಬದಲಾಗ ಜಾತ್ಯಾತೀತ ರಾಷ್ಟ್ರವೆಂದು ಘೋಷಣೆಯಾಗುತ್ತದೆ .
ಹಿಂದೂಗಳೇ ಸ್ವಲ್ಪಯೋಚಿಸಬೇಕಿದೆ ಕ್ರೈಸ್ತರ ಧಾರ್ಮಿಕ ವಿಷಯದ ಕುರಿತು ಚರ್ಚನಿಂದ ಆದೇಶಗಳು ಬರುತ್ತವೆ. ಮುಸಲ್ಮಾನರಲ್ಲಿ ಫತ್ವಾಗಳು ಹೊರಡುತ್ತವೆ.
ಆದರೆ ಹಿಂದೂಗಳ ಧಾರ್ಮಿಕ ವಿಷಯವನ್ನು ಬುದ್ಧಿಜೀವಿಗಳಿಗೆ ,ನೀತಿಗೆಟ್ಟ ರಾಜಕಾರಣಿಗಳಿಗೆ ತೀರ್ಮಾನಿಸಲು ಬಿಟ್ಟಿದ್ದೆವೆ.
ಹಿಂದೂಗಳ ದೇವಸ್ಥಾನದ ಹಣವನ್ನು ಲೂಟಿಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ
ಹಿಂದೂಗಳೇ ಜಾತ್ಯಾತೀತ ಎಂಬ ಪದವನ್ನು ನಾಶಗೊಳಿಸಿ, ಹಿಂದೂರಾಷ್ಟ್ರವನ್ನು ಸ್ಥಾಪಿಸಲು ಸಿದ್ಧರಾಗಬೇಕಿದೆ.
ಲೇಖನ :ಸನಾತನ
Tags
ಜಾತ್ಯಾತೀತ ಷಡ್ಯಂತರ