ರೈತರಿಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಹೈನುಗಾರಿಕೆಗೆ ಅರ್ಜಿ.

ನಮಸ್ಕರಾ ಪ್ರಿಯ ಸ್ನೇಹಿತರೆ, ನೀವೇನಾದರೂ ಹೈನುಗಾರಿಕೆ ಮಾಡುತ್ತಿದ್ದಲ್ಲಿ ಅಥವಾ ಹೈನುಗಾರಿಕೆ ಮಾಡಬೇಕು ಅಂತ ಇತ್ಯಾದಿ ಸರ್ಕಾರದ ಕಡೆ ಇಂದ ನೀವು ಸಹಾಯ ಧನವನ್ನ ಕೂಡಾ ಪಡೆದುಕೊಳ್ಳಬಹುದು. ಹೌದು ಇದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ಹೈನುಗಾರಿಕೆ ಮಾಡುತ್ತ ಇದ್ದಲ್ಲೇ ಇದರ ಸಲುವಾಗಿ ನೀವು ಸರ್ಕಾರದಿಂದ ಹಣ ಪಡೆದುಕೊಳ್ಳಬೇಕು ಅಂದಲ್ಲಿ ಇದಕ್ಕಾಗಿ ಏನು ಮಾಡಬೇಕು, ಇದಕ್ಕೆ ನೀವು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಇದರ ಬಗ್ಗೆ ಹೆಚ್ಚಿನ ವಿವರ ನಿಮಗೆ ಎಲ್ಲಿ ಸಿಗುತ್ತದೆ, ಎಂಬುದರ ಮಾಹಿತಿ ನೀಡುತ್ತಿವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮಾಹಿತಿ ತಿಳಿದ ನಂತರ ಬೇರೆ ಅವರಿಗೂ ಕೂಡ ಇದರ ಬಗ್ಗೆ ತಿಳಿಸಿಕೊಡಿ.

ಹೌದು ಕುರಿ ಕೋಳಿ ಸಾಕಾಣಿಕೆ ಮಾಡುವವರು ಅಥವಾ ಕುರಿ ಕೋಳಿ ಘಟಕ ಸ್ಥಾಪಿಸಬೇಕು ಎಂಬುವವರು, ಹೈನುಗಾರಿಕೆ ಮಾಡಲು ಇಚ್ಛಿಸುವವರು ಪ್ರೋತ್ಸಾಹ ಧನವನ್ನು ಸರ್ಕಾರದಿಂದ ಪಡೆದುಕೊಳ್ಳಬಹುದಾಗಿದೆ. ಸರ್ಕಾರದಿಂದ ಹಣವನ್ನು ಪಡೆಯುವುದಕ್ಕಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ, ಅರ್ಜಿ ಸಲ್ಲಿಸುವುದಕ್ಕೆ ನಿಮ್ಮ ಬಳಿ ಆಧಾರ್ ಕಾರ್ಡ್ ಪಾಸ್ ಬುಕ್ ಮತ್ತು ಗ್ರಾಮ ಪಂಚಾಯಿತಿಗಳಿಂದ ನಿಮಗೇನಾದರೂ ಜಾಬ್ ಕಾರ್ಡ್ ನೀಡಿದಲ್ಲಿ, ಈ ಒಂದು ದಾಖಲಾತಿ ಕೂಡ ಇದ್ದರೆ ಒಳ್ಳೆಯದು, ಆದರೆ ಜಾಬ್ ಕಾರ್ಡ್ ಕಡ್ಡಾಯವೇನೂ ಅಲ್ಲ. ಹಾಗಾದರೆ ಯಾರೆಲ್ಲ ಈ ಯೋಜನೆಯಡಿ ಹಣವನ್ನು ಪಡೆದುಕೊಳ್ಳಬಹುದು ಅಂದರೆ ಜಮೀನು ಇಲ್ಲದವರು, ಇನ್ನೂ ಸಣ್ಣ ರೈತರು ಅಂದರೆ ಮೂರು ಎಕರೆ ಜಮೀನನ್ನು ಹೊಂದಿರುವವರು ಹಾಗೂ ಹಿಂದುಳಿದ ವರ್ಗದವರ.
ಒಬಿಸಿ ಕೆಟಗರಿ ಅಡಿಯಲ್ಲಿ ಬರುವ ಹೆಣ್ಣು ಮಕ್ಕಳು ಸಂಕಷ್ಟದಲ್ಲಿ ಇರುವ ಹೆಣ್ಣು ಮಕ್ಕಳು ಹಾಗೂ ಅಲ್ಪಸಂಖ್ಯಾತರು ಕೂಡ ಸರ್ಕಾರದಿಂದ ಈ ಯೋಜನೆಯಡಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವುದು ಎಲ್ಲಿ ಎಂಬ ವಿವರವನ್ನ ಹೇಳಬೇಕಂದರೆ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಗೆ ಹೋಗಿ ನೀವು ಇದರ ಸಲುವಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸುವಾಗ ಈ ಮೇಲೆ ಹೇಳಿದಂಥ ದಾಖಲಾತಿಗಳು ಜೊತೆಗೆ ಪಾಸ್ ಪೋರ್ಟ್ ಸೈಜ್ ಫೋಟೊ ಅನ್ನು ಕೂಡ ನೀಡಬೇಕಾಗುತ್ತದೆ. ಇನ್ನೂ ಹೆಚ್ಚಿನ ಜನರಿಗೆ ಪಶುಪಾಲನಾ ಇಲಾಖೆ ಎಲ್ಲಿದೆ ಎಂದು ತಿಳಿದಿಲ್ಲ ಅನ್ನುವುದಾದರೆ, ನಿಮ್ಮ ಊರಿನಲ್ಲಿ ಇರುವ ವೆಟರ್ನರಿ ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ಈ ಇಲಾಖೆಯ ಬಗ್ಗೆ ಹೆಚ್ಚಿನ ವಿವರವನ್ನು ನೀವು ತಿಳಿದುಕೊಳ್ಳಬಹುದು.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು