ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಇನ್ನೂ ಎರಡು ದಿನ ಮುಂದುವರೆಯಲಿದೆ . ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯಾದ್ಯಂತ ಮಳೆಯಾಗುತ್ತಿದೆ . ಕರಾವಳಿ , ಮಲೆನಾಡಿನಲ್ಲಿ ಮಳೆ ಸುರಿಯಲಿದೆ . ಬೆಂಗಳೂರಿನಲ್ಲೂ ಇಂದು ಮಳೆ ಮುಂದುವರೆಯಲಿದೆ . ಇಂದಿನಿಂದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ , ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಬೆಂಗಳೂರು , ಚಾಮರಾಜನಗರ , ಚಿಕ್ಕಬಳ್ಳಾಪುರ , ಚಿಕ್ಕಮಗಳೂರು , ಶಿವಮೊಗ್ಗ , ಹಾಸನ , ಕೊಡಗು , ಕೋಲಾರ , ಮಂಡ್ಯ , ಮೈಸೂರು , ರಾಮನಗರ , ತುಮಕೂರು ಜಿಲ್ಲೆಯಲ್ಲಿ ಮಳೆಯಾಗಲಿದೆ.ಉತ್ತರ ಒಳನಾಡಿನ ಬಾಗಲಕೋಟೆ , ಬೆಳಗಾವಿ , ಬೀದರ್ , ಧಾರವಾಡ , ಗದಗ , ಹಾವೇರಿ , ಕಲಬುರಗಿ , ಕೊಪ್ಪಳ , ರಾಯಚೂರು , ವಿಜಯಪುರ , ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ .