ರಾಷ್ಟ್ರೀಯ ಜಾನುವಾರು ಮಿಷನ್: ಕೋಳಿ,ಕುರಿ ಹಂದಿ ಘಟಕ ಸ್ಥಾಪನೆಗೆ ಶೇ 50% ಸಹಾಯಧನ.!
ಈ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ, ಮೇಕೆ ಹಾಗೂ ಹಂದಿ ಸಾಕಾಣಿಕೆ & ರಸಮೇವು ಉತ್ಪಾದನೆ ಘಟಕವನ್ನು ಪ್ರಾರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆ ಅಡಿಯಲ್ಲಿ ಆರ್ಥಿಕ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಪಶುಸಂಗೋಪನೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
NLM Scheme-2024: ಸಹಾಯಧನದ ವಿವರ
1) ಗ್ರಾಮೀಣ ಕೋಳಿ industry(1000 ದೇಶಿ ಮಾತೃಕೋಳಿ ಘಟಕ, ಹ್ಯಾಚರಿ ಘಟಕ,ಮರಿಗಳ ಸಾಕಾಣಿಕೆ ಘಟಕ)-
ಯೋಜನೆಯ ಗರಿಷ್ಥ ವೆಚ್ಚ:- 50 ಲಕ್ಷ, ಸಹಾಯಧನ:- ಶೇ 50% ರಷ್ಟು 1 ಘಟಕಕ್ಕೆ ಗರಿಷ್ಟ ₹ 25 ಲಕ್ಷ.
2) ಕುರಿ-ಮೇಕೆ ತಳಿ ಸಂವರ್ಧನಾ ಘಟಕ
500 ಘಟಕಕ್ಕೆ ಯೋಜನೆಯ ವೆಚ್ಚ 1 ಕೋಟಿ – 50% ಸರ್ಕಾರದ ಸಬ್ಸಿಡಿ (50 ಲಕ್ಷ ಸಿಗಲಿದೆ)
400 ಘಟಕಕ್ಕೆ ಯೋಜನೆಯ ವೆಚ್ಚ 80 ಲಕ್ಷ – 50% ಸರ್ಕಾರದ ಸಬ್ಸಿಡಿ (40 ಲಕ್ಷ)
300 ಘಟಕಕ್ಕೆ ಯೋಜನೆಯ ವೆಚ್ಚ 60 ಲಕ್ಷ – 50% ಸರ್ಕಾರದ ಸಬ್ಸಿಡಿ (30 ಲಕ್ಷ)
200 ಘಟಕಕ್ಕೆ ಯೋಜನೆಯ ವೆಚ್ಚ 40 ಲಕ್ಷ – 50% ಸರ್ಕಾರದ ಸಬ್ಸಿಡಿ (20 ಲಕ್ಷ)
100 ಘಟಕಕ್ಕೆ ಯೋಜನೆಯ ವೆಚ್ಚ 20 ಲಕ್ಷ – 50% ಸರ್ಕಾರದ ಸಬ್ಸಿಡಿ (10 ಲಕ್ಷ)
3) ಹಂದಿ ತಳಿ ಸಂವರ್ಧನಾ ಘಟಕ
100+10 ಘಟಕಕ್ಕೆ ಯೋಜನೆಯ ವೆಚ್ಚ 60 ಲಕ್ಷ -50% ಸರ್ಕಾರದ ಸಬ್ಸಿಡಿ ( 30 ಲಕ್ಷ).
50+5 ಗಘಟಕಕ್ಕೆ ಯೋಜನೆಯ ವೆಚ್ಚ 30 ಲಕ್ಷ-50% ಸರ್ಕಾರದ ಸಬ್ಸಿಡಿ ( ರೂ 15 ಲಕ್ಷ).
4) ರಸಮೇವು ಉತ್ಪಾದನಾ ಘಟಕಗಳು, ಮೇವು ಬ್ಲಾಕ್ ತಯಾರಿಕಾ ಘಟಕಗಳು/ TMR ಪ್ಲಾಂಟ್ ಸ್ಥಾಪನೆ ಘಟಕ(ವಾರ್ಷಿಕ 2000-2500 ಮೆಟ್ರಿಕ್ ಟನ್ ನಷ್ಟು ಉತ್ಪಾದನೆ)
ಯೋಜನೆ ವೆಚ್ಚ:- 1 ಕೋಟಿ, ಶೇ 50% ಸಹಾಯಧನ
ಅಗತ್ಯ ದಾಖಲೆಗಳು
ವಿಸ್ತ್ರತ ಯೋಜನಾ ವರದಿ.
ಭೂಮಿ ದಾಖಲೆ ಪಹಣಿ ಅಥವಾ RTC.
ಭೂಮಿ ಇಲ್ಲದವರು ಬಾಡಿಗೆ /ಗುತ್ತಿಗೆಗೆ ಭೂಮಿ ಪಡೆದು ಕರಾರು ಪತ್ರ .
ಆಧಾರ್ ಸಂಖ್ಯೆ
ಪ್ಯಾನ್ ಸಂಖ್ಯೆ
ಯೋಜನೆಯ ಜಿಪಿಎಸ್ ಫೋಟೋ
ಕಳೆದ 6 ತಿಂಗಳ ಬ್ಯಾಂಕ್ ವಿವರ.
ತರಬೇತಿಯ ಪ್ರಮಾಣ ಪತ್ರ / ಅನುಭವ ಹೊಂದಿರುವ ಪ್ರಮಾಣ ಪತ್ರಗಳು.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಆಸಕ್ತ ಅರ್ಜಿದಾರರು ನೇರವಾಗಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ👇