ಸರಳ ವಿವಾಹಕ್ಕೆ 50,000 ಪ್ರೋತ್ಸಾಹ ಧನ.! ಮದುವೆ ಆಗುವವರಿಗೆ ರಾಜ್ಯ ಸರ್ಕಾರದ ಬಂಪರ್‌ ಕೊಡುಗೆ

ಸರಳ ವಿವಾಹಕ್ಕೆ 50,000 ಪ್ರೋತ್ಸಾಹ ಧನ.! ಮದುವೆ ಆಗುವವರಿಗೆ ರಾಜ್ಯ ಸರ್ಕಾರದ ಬಂಪರ್‌ ಕೊಡುಗೆ

ಸರಳವಾಗಿ ಮದುವೆಯಾದರೆ ಪ್ರೋತ್ಸಾಹ ಧನ :
ಮದುವೆ ಮಾಡಲು ಮುಖ್ಯವಾಗಿ ಬೇಕಾಗುವುದು ಹಣ, ಇಂದಿನ ದಿನಮಾನದಲ್ಲಿ ಎಲ್ಲರೂ ಅದ್ದೂರಿಯಾಗಿ ಅದೆಷ್ಟೋ ದುಡ್ಡನ್ನು ವೆಚ್ಚ ಮಾಡಿ ಮದುವೆಯಾಗುತ್ತಾರೆ. ಡೆಸ್ಟಿನೇಷನ್ ವೆಡ್ಡಿಂಗ್(Destination wedding) ಎಂಬ ಟ್ರೆಂಡ್ ಕೂಡ ಇದೆ. ಹೀಗಿರುವಾಗ ರಾಜ್ಯ ಸರ್ಕಾರವು ಸರಳವಾಗಿ ಮದುವೆಯಾಗುವವರಿಗೆ ಸಿಹಿ ಸುದ್ದಿ ನೀಡಿದೆ, ಸರಳ ವಿವಾಹಕ್ಕೆ ಪ್ರೋತ್ಸಾಹ ಧನ, ನೊಂದಾಯಿತ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿ ದಂಪತಿಗಳಿಗೆ ಹಣದ ನೆರವು ನೀಡಲಾಗುತ್ತದೆ. ಮದುವೆಯಾಗುವ ದಂಪತಿಗಳಿಗೆ 50,000ರೂ. ಗಳನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿದೆ.

ಅರ್ಜಿ ಸಲ್ಲಿಸುವ ವಿಧಾನ :
ಹೀಗೆ ಸರಳವಾಗಿ ಮದುವೆಯಾದ ನಂತರದಲ್ಲಿ 50,000 /- ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿಯ ದಂಪತಿಗಳು ಪ್ರೋತ್ಸಾಹಧನಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಈ ಲಿಂಕ್‌ ಮೇಲೆ ಕ್ಲಿಕ್‌ಗೆ ಭೇಟಿ ನೀಡಿ: https://swdservices.karnataka.gov.in/swincentive/HAhome.aspx

ಮದುವೆಯಾದ 1 ವರ್ಷದ ಒಳಗೆ ಅರ್ಹ ದಾಖಲೆಯೊಂದಿಗೆ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು.
ಸರಳ ವಿವಾಹವಾದ ದಂಪತಿಗಳಿಗೆ 50,000 ರೂ. ಗಳನ್ನು ನೀಡಲಾಗುವುದು ಅಷ್ಟೇ ಅಲ್ಲದೆ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿದ ಆಯೋಜಕರಿಗೆ ಪ್ರೋತ್ಸಾಹ ಧನ ಮತ್ತು ವಿವಾಹದ ಖರ್ಚು ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ.2000/- ಸಾವಿರಗಳನ್ನು ನೀಡಲಾಗುತ್ತದೆ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು