ಬೆಂಗಳೂರಿನಲ್ಲಿ ಇಷ್ಟೆಲ್ಲಾ ನೀರಿನ ಸಮಸ್ಯೆಗೆ ಕಾರಣ ಕಳೆದ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಡ್ಯಾಂ ನಲ್ಲಿ ನೀರು ಭರ್ತಿ ಆಗಲಿಲ್ಲ. ನದಿಗಳು ಉಕ್ಕಿ ಹರಿಯಲಿಲ್ಲ. ಅಂತರ್ಜಲ ಮಟ್ಟವೂ ಹೆಚ್ಚಾಗಲಿಲ್ಲ. ಹೀಗಾಗಿ ನೀರಿನ ಕ್ಷಾಮ ಎದುರಾಗಿದೆ.
ಮಳೆಯ ಕೊರತೆ ಮತ್ತು ಬರದಿಂದ ಬೇಸಿಗೆ ಆರಂಭದಲ್ಲೇ ಕಂಗಾಲಾಗಿರುವ ರಾಜ್ಯದ ಜನರಿಗೆ ಹವಾಮಾನ ಇಲಾಖೆ ಗುಡ್ನ್ಯೂಸ್ ಕೊಟ್ಟಿದ್ದು, ಈ ಬಾರಿ ಉತ್ತಮ ಮುಂಗಾರು ಮಳೆ ಆಗಲಿದೆ ಎಂದು ಹೇಳಿದೆ.
ಈ ಬಾರಿ ವಾಡಿಕೆಯಂತೆ ಮುಂಗಾರು ಮಳೆಯಾಗಲಿದೆ. ಜೂನ್ ವೇಳೆಗೆ ನೀರಿನ ಸಮಸ್ಯೆ ದೂರ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭೀಕರ ಬೇಸಿಗೆ ಹಾಗೂ ಬರದ ನಡುವೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಜನರು ಪರದಾಡುವಂತೆ ಆಗಿದೆ. ರಾಜ್ಯದ ಹಲವು ಜಲಾಶಗಳು ಈಗಾಗಲೇ ಬರಿದಾಗಿದ್ದು, ಬೆಂಗಳೂರಿಗೆ ನೀರು ಹೊದಗಿಸುವ ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳು ಈಗಾಗಲೇ ಬಹುತೇಕ ಖಾಲಿಯಾಗಿದೆ.
ಇದರೊಂದಿಗೆ ರಾಜಧಾನಿಯಲ್ಲಿ ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ ಎದುರಾಗಿದೆ. ಅದರಲ್ಲೂ ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ದಾಖಲೆ ಮಟ್ಟದಲ್ಲಿ ತಾಪಮಾನ ಏರಿಕೆ ಆಗಿದ್ದು, ಜನರು ಯಾವಾಗ ಮಳೆ ಆಗುತ್ತೋ ಅಂತ ಕಾಯ್ತಿದ್ದಾರೆ.
ಈ ನಡುವೆ ಹವಾಮಾನ ಇಲಾಖೆಯ ವರದಿಗೂ ಜನರಿಗೆ ತುಸು ನೆಮ್ಮದಿಯನ್ನು ನೀಡಿದೆ ಅಂತ ಹೇಳಬಹುದಾಗಿದೆ. ಆದರೆ ಜನರು ಮಳೆಗಾಗಿ ಇನ್ನು ಕಡಿಮೆ ಎಂದರೂ ಎರಡರಿಂದ ಮೂರು ತಿಂಗಳು ಕಾಯಬೇಕಿದೆ.
ಆದರೆ, ಮಳೆ ಇಲ್ಲದೇ ತಲೆ ಮೇಲೆ ಕೈ ಒತ್ತುಕೊಂಡು ಆಗಸದತ್ತ ನೋಡುತ್ತಿರುವ ರೈತರಿಗೆ ಹವಾಮಾನಾ ಇಲಾಖೆ ಸುದ್ದಿ ಸಂತೋಷವನ್ನು ತಂದಿದ್ದಾರೆ. ಮಾನ್ಸೂನ್ ಆರಂಭಕ್ಕೆ ಮೂರು ತಿಂಗಳು ಸಮಯ ಇದೆ.
ಬೇಸಿಗೆ ಬಿಸಿಲು ಜೊತೆಗೆ ದಣಿವು ನೀಗಿಸಿಕೊಳ್ಳೋಣ ಅಂದ್ರೆ ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಎಲ್ಲೆಡೆ ನೀರಿಗಾಗಿ ಪರದಾಡುವ ಸ್ಥಿತಿಯಿದೆ. ಕಾವೇರಿ ನೀರು ಪೂರೈಕೆ ಕೊರತೆ ಜೊತೆಗೆ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಆಗಿದೆ.
ಬೆಂಗಳೂರಲ್ಲಿ ತಲೆ ದೂರಿರುವ ನೀರಿನ ಅಭಾವ, ಕೈಗಾರಿಕೆಗಳ ಮೇಲೂ ಪರಿಣಾಮ ಬೀರಿದೆ. ನೀರಿನ ಕ್ಷಾಮದಿಂದಾಗಿ ನಮ್ಮ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ ಎಂದು FKCCI ಹೇಳಿದೆ. ಕೈಗಾರಿಕೆ ಪ್ರದೇಶದಲ್ಲಿ ಬೋರ್ ವೆಲ್ ಕೊರೆಯುವ ಭರವಸೆಯನ್ನು ಸರ್ಕಾರ ಕೊಟ್ಟಿದೆ. ನೀರಿನ ಸಮಸ್ಯೆಯಿಂದ ಕೈಗಾರಿಕೆಗಳಿಗೆ ಶೇಕಡ 5 ರಿಂದ 10 ರಷ್ಟು ನಷ್ಟ ಆಗುತ್ತಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಇಷ್ಟೆಲ್ಲಾ ನೀರಿನ ಸಮಸ್ಯೆಗೆ ಕಾರಣ ಕಳೆದ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಡ್ಯಾಂ ನಲ್ಲಿ ನೀರು ಭರ್ತಿ ಆಗಲಿಲ್ಲ. ನದಿಗಳು ಉಕ್ಕಿ ಹರಿಯಲಿಲ್ಲ. ಅಂತರ್ಜಲ ಮಟ್ಟವೂ ಹೆಚ್ಚಾಗಲಿಲ್ಲ. ಹೀಗಾಗಿ ನೀರಿನ ಕ್ಷಾಮ ಎದುರಾಗಿದೆ. ಹೀಗಾಗಿ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಲಾಗ್ತಿದೆ. ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ಹೋಮ- ಹವನ ಮಾಡಿದೆ.