ಇನ್ಮುಂದೆ ಪೇಪರ್ ಆಧಾರಿತ ಆಸ್ತಿ ನೋಂದಣಿ ಕ್ಯಾನ್ಸಲ್;‌ ಇ-ಆಸ್ತಿ ನೋಂದಣಿ ಕಡ್ಡಾಯಗೊಳಿಸಿದ ಸರ್ಕಾರ

ಇನ್ಮುಂದೆ ಪೇಪರ್ ಆಧಾರಿತ ಆಸ್ತಿ ನೋಂದಣಿ ಕ್ಯಾನ್ಸಲ್;‌ ಇ-ಆಸ್ತಿ ನೋಂದಣಿ ಕಡ್ಡಾಯಗೊಳಿಸಿದ ಸರ್ಕಾರ

ಕಡ್ಡಾಯವಾಗಿ ಎಲ್ಲಾ ಆಸ್ತಿ ನೋಂದಣಿಗಳನ್ನು ಈಗ digital ಮೂಲಕ (ಇ-ನೋಂದಣಿ) ಮಾಡಲೇಬೇಕು. ಪೇಪರ್‌ಗಳಲ್ಲಿ ನೋಂದಣಿ ಮಾಡುತ್ತಿರುವುದು ಸರ್ಕಾರಕ್ಕೆ ಹೆಚ್ಚು ನಷ್ಟವಾಗುತ್ತಿದೆ. ಈ ಹೊಸ ರೂಲ್ಸ್ ವಿಧಾಸಭೆಯಲ್ಲಿ ಅಂಗೀಕಾರವಾಗಿದೆ. ಇನ್ನು ಮುಂದೆ ನಿಮ್ಮ ಚಿರಾಸ್ಥಿಯಾ ನೋಂದಣಿಯನ್ನು ಕಡ್ಡಾಯವಾಗಿ ಇ- ನೋಂದಣಿ ಮಾಡಬೇಕಾಗಿದೆ.
ಏನಿದು ಇ – ನೋಂದಣಿ ಪ್ರಕ್ರಿಯೆ?:
ಎಲ್ಲಾ ಕ್ಷೇತ್ರದಲ್ಲಿ ಈಗ digital ವ್ಯವಸ್ಥೆ ಬಂದಿದೆ. ಇದು digital ವ್ಯವಸ್ಥೆಗೆ ಹೊಸ ಸೇರ್ಪಡೆಯಾಗಿದೆ. ಮನೆ, ಭೂಮಿ / ಇತರ ಆಸ್ತಿಗಳ ನೋಂದಣಿಯನ್ನು digital ವೇದಿಕೆಯಲ್ಲಿ ಮಾಡುವ ಒಂದು ವ್ಯವಸ್ಥೆಯಾಗಿದ್ದು. ಈ ವ್ಯವಸ್ಥೆಯು ಪಾರದರ್ಶಕತೆ & ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಕಾವೇರಿ ತಂತ್ರಾಂಶಗಳಲ್ಲಿ ಅಟೋಮ್ಯಾಟಿಕ್ ಆಗಿ ನಗರಸಭೆ ವ್ಯಾಪ್ತಿಯ ಡೇಟಾ ಬೇಸ್ ಚೆಕ್‌ ಆಗಿದ್ದರೆ ಮಾತ್ರ ಇ – ನೋಂದಣಿಯಲ್ಲಿ ನಿಮ್ಮ ಆಸ್ತಿಯ ನೋಂದಣಿಯಾಗಲಿದೆ.
ಈ ಯೋಜನೆಯ ಉದ್ದೇಶಗಳು ಏನು?
ವ್ಯವಸ್ಥೆಯಲ್ಲಿ ಇರುವ ಭ್ರಷ್ಟಾಚಾರ & ವಂಚನೆಯನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶಗಳಿಂದ ಹೊಸ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಇ-ನೋಂದಣಿ ಪ್ರಕ್ರಿಯೆಯು ಹೆಚ್ಚು ಪಾರದರ್ಶಕ & ದಕ್ಷವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿದೆ. ಪೇಪರ್ ಮೂಲಕ ನೋಂದಣಿಯಾಗಿರುವ ಪ್ರತಿಯನ್ನು ಕಳೆದುಕೊಳ್ಳುವ ಸಂಭವವಿದ್ದು. ಈಗ ಇ-ನೋಂದಣಿ ದಾಖಲೆ ಮಾಡುವುದರಿಂದ ಕಳೆದುಕೊಳ್ಳುವ ಅಪಾಯಗಳು ಸಾಕಷ್ಟು ಕಡಿಮೆಯಾಗುತ್ತದೆ. ಪೇಪರ್ ನೋಂದಣಿ ಮಾಡಿಸುವ ಸಲುವಾಗಿ ನಾಗರಿಕರು ಹತ್ತಾರು ಬಾರಿ ಇಲಾಖೆಗಳಿಗೆ ಹೋಗಿ ನೋಂದಣಿ ಮಾಡಿಸಬೇಕಿತ್ತು ಅದನ್ನು ತಪ್ಪಿಸಿ ನಾಗರಿಕರಿಗೆ ಸುಲಭವಾಗಿ ನೋಂದಣಿ ಪ್ರಕ್ರಿಯೆಯಾಗಲಿದೆ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?: 

ಆಸ್ತಿ ನೋಂದಣಿಯನ್ನು ಈಗ ಆನ್‌ಲೈನ್‌ನಲ್ಲಿ ಸುಲಭವಾಗಿ ಮಾಡಬಹುದಾಗಿದೆ. ನೀವು ಇ ನೋಂದಣಿ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಆಸ್ತಿಯ ವಿವರ & ಮೂಲ ದಾಖಲೆಗಳನ್ನು upload ಮಾಡಬಹುದು. ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ಮೇಲೆ ನೋಂದಣಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕಾಗುತ್ತದೆ. ನಿಮಗೆ ಅನುಕೂಲಕರವಾದ ದಿನಾಂಕ & ಸಮಯವನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆಯಿದೆ. ನೀವು ಆಯ್ಕೆ ಮಾಡಿದ ದಿನಾಂಕದಂದು ನೀವು ಉಪನೋಂದಾಣಿ ಕಚೇರಿಯನ್ನು ಭೇಟಿ ನೀಡಿ, ನಿಮ್ಮ ಭಾವಚಿತ್ರ, ಸಹಿ & ಹೆಬ್ಬೆಟ್ಟಿನ ಗುರುತನ್ನು ನೀಡಿದ ಕೆಲವೇ ನಿಮಿಷದಲ್ಲಿ ನಿಮ್ಮ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ತಿಯಾಗುತ್ತದೆ..
ವ್ಯವಸ್ಥೆಯಲ್ಲಿ ಇನ್ನಷ್ಟು ಪಾರದರ್ಶಕತೆ ಕಾಯ್ದುಕೊಳ್ಳಲು DD ವ್ಯವಸ್ಥೆ ತೆಗೆದುಹಾಕಿ digital ಪಾವತಿ ವ್ಯವಸ್ಥೆ ಅನುಷ್ಠಾನ ಮಾಡಲಾಗಿದೆ.
ಈ ವ್ಯವಸ್ಥೆಯಿಂದ ಕೆಲವು ಜನರಿಗೆ ತೊಂದರೆಯಾಗಬಹುದೇ? :-
ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ / ತಂತ್ರಜ್ಞಾನವಿಲ್ಲದ ಜನರಿಗೆ ಇ-ಆಸ್ತಿ ವ್ಯವಸ್ಥೆ ಮಾಡಲು ಕಷ್ಟಕರವಾಗಬಹುದು.
smartphone, ಕಂಪ್ಯೂಟರ್‌, ಇಂಟರ್ನೆಟ್‌ಗೆ ಸೌಲಭ್ಯ ಇಲ್ಲದೆ ಇರುವವರಿಗೆ ಇದು ಕಷ್ಟವಾಗಲಿದೆ.
ಕೆಲವು ಅಧಿಕಾರಿಗಳು ಈ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಜನರಿಂದ ಹಣವನ್ನು ಸುಲಿಗೆ ಮಾಡಬಹುದು.
ಸೈಬರ್ ಸೆಂಟರ್‌ಗಳು ಜನರ ವೈಯಕ್ತಿಕ ಮಾಹಿತಿಯನ್ನು ವ್ಯವಸ್ಥೆಯಲ್ಲಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.
ಈ ಮಾಹಿತಿಯನ್ನು ಕದಿಯಬಹುದು / ಕಾನೂನುಬಾಹಿರ ಕೆಲಸಗಳಿಗೆ ಬಳಸಬಹುದು.






ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು