ಭಾರತದ ಯಾವ ರಾಜ್ಯದಲ್ಲಿ ಮೊದಲು ಸೂರ್ಯ ಉದಯಿಸುತ್ತಾನೆ? ಇಲ್ಲಿದೆ ಇಂಟ್ರೆಸ್ಟಿಂಗ್​ ಮಾಹಿತಿ

ಭಾರತದ ಯಾವ ರಾಜ್ಯದಲ್ಲಿ ಮೊದಲು ಸೂರ್ಯ ಉದಯಿಸುತ್ತಾನೆ? ಇಲ್ಲಿದೆ ಇಂಟ್ರೆಸ್ಟಿಂಗ್​ ಮಾಹಿತಿ

ಆದರೆ ಈಗ ಅಂಥದ್ದೊಂದು ಪ್ರಶ್ನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಯಾವ ರಾಜ್ಯದಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆ ಎಂದು ಕೆಲವರು ಪ್ರಶ್ನೆ ಹುಟ್ಟು ಹಾಕುತ್ತಿದ್ದಾರೆ. ಆದರೆ ಅನೇಕರಿಗೆ ಇದಕ್ಕೆ ಉತ್ತರ ತಿಳಿದಿಲ್ಲ. ಹೌದು, ಹಾಗಿದ್ದರೆ ಮೊದಲು ಭಾರತದಲ್ಲಿ ಎಲ್ಲಿ ಸೂರ್ಯ ಹುಟ್ಟುತ್ತಾನೆ ನೋಡೋಣ ಬನ್ನಿ.
ಅರುಣಾಚಲ ಪ್ರದೇಶ ಭಾರತದ ಮೊದಲ ಸೂರ್ಯೋದಯ ರಾಜ್ಯವಾಗಿದೆ. ಇಲ್ಲಿನ ಅಂಜೌ ಜಿಲ್ಲೆಯ ಡ್ಯಾಂಗ್ ಎಂಬ ಹಳ್ಳಿಯಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆ. ಈ ಪಟ್ಟಣವನ್ನು ಭಾರತದ ಜಪಾನ್ ಎಂದು ಕರೆಯಲಾಗುತ್ತದೆ. ಡಾಂಗ್​ ಅರುಣಾಚಲ ಪ್ರದೇಶದ ಅಂಜೋದಲ್ಲಿ ಸಮುದ್ರ ಮಟ್ಟದಿಂದ 1,200 ಮೀಟರ್ ಎತ್ತರದಲ್ಲಿದೆ.
ನದಿ ಮತ್ತು ಪರ್ವತಗಳಿಂದ ಆವೃತವಾದ ಹಳ್ಳಿ ಇದಾಗಿದೆ. ಇದು ಚೀನಾ ಮತ್ತು ಮ್ಯಾನ್ಮಾರ್ ನಡುವೆ ಇದೆ. ಬ್ರಹ್ಮಪುತ್ರದ ಉಪನದಿಯಾದ ಲೋಹಿತ್‌ನ ಸಂಗಮವು ಅದರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಈ ಡಾಂಗ್​ ಗ್ರಾಮದಲ್ಲಿ ದೇಶದ ಎಲ್ಲಕ್ಕಿಂತ ಒಂದು ಗಂಟೆ ಮುಂಚಿತವಾಗಿ ಸೂರ್ಯ ಉದಯಿಸುತ್ತಾನೆ

ಅಂತೆಯೇ, ಸೂರ್ಯ ಒಂದು ಗಂಟೆ ಮುಂಚಿತವಾಗಿ ಅಸ್ತಮಿಸುತ್ತಾನೆ. ಅದಕ್ಕಾಗಿಯೇ ಈ ಪ್ರದೇಶವು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ಇನ್ನು, ಭೂಮಿಯು ತನ್ನ ಸ್ವಂತ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದೇ ಇದಕ್ಕೆ ಕಾರಣ. ಗುಜರಾತ್ ಭಾರತದ ಪಶ್ಚಿಮ ಭಾಗದಲ್ಲಿದೆ ಆದ್ದರಿಂದ ಭಾರತದ ಪೂರ್ವ ಮತ್ತು ಮಧ್ಯ ಭಾಗದ ನಂತರ ಸೂರ್ಯ ಉದಯಿಸುತ್ತಾನೆ

ಇದರ ನಡುವೆ ಇನ್ನೊಂದು ಪ್ರಶ್ನೆಯೂ ಹೆಚ್ಚು ಕೇಳಲ್ಪಡುತ್ತಿದೆ. ಅದು ಯಾವುದೆಂದರೆ, ಸೂರ್ಯೋದಯ, ಸೂರ್ಯಾಸ್ತ ಆಗುವಾಗ ಸೂರ್ಯ ಕೇಸರಿ ಬಣ್ಣವಾಗಿರೋದು ಯಾಕೆ ಎಂದು. ಇದರ ಉತ್ತರ ನೋಡುವುದಾದರೆ, ನೇರಳೆ ಮತ್ತು ನೀಲಿ ಕಿರಣಗಳು ತಮ್ಮ ಕಡಿಮೆ ತರಂಗಾಂತರದ ಕಾರಣದಿಂದಾಗಿ ಬಹಳ ದೂರದವರೆಗೆ ಪ್ರಯಾಣಿಸಲು ಸಾಧ್ಯವಿಲ್ಲ.
ಅದು ಸಾಕಷ್ಟು ಚದುರಿ ಹೋಗುತ್ತದೆ. ಆದರೆ ಕಿತ್ತಳೆ ಮತ್ತು ಕೆಂಪು ಬಣ್ಣದ ಕಿರಣಗಳು ಹೆಚ್ಚು ದೂರವನ್ನು ಆವರಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಆಕಾಶವು ಕೆಂಪು ಅಥವಾ ಕೆಂಪು ಬಣ್ಣದಿಂದ ಅನೇಕ ಬಣ್ಣಗಳ ಸುಂದರ ದೃಶ್ಯವಾಗುತ್ತದೆ. ಈ ವೇಳೆ ನಮಗೆ ಸೂರ್ಯ ಕೇಸರಿ ಬಣ್ಣದಲ್ಲಿ ಕಂಡುಬರುತ್ತಾನೆ.




ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು