Exam Tips: SSLC ಪರೀಕ್ಷೆಗೆ ಸಿದ್ಧತೆ ಮಾಡ್ತಿದ್ದೀರಾ? ಇಲ್ಲಿದೆ ಟಿಪ್ಸ್​

Exam Tips: SSLC ಪರೀಕ್ಷೆಗೆ ಸಿದ್ಧತೆ ಮಾಡ್ತಿದ್ದೀರಾ? ಇಲ್ಲಿದೆ ಟಿಪ್ಸ್​

10 ನೇ ತರಗತಿ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸರಳ ಸಲಹೆಗಳು ಇಲ್ಲಿವೆ. ಇವುಗಳನ್ನು ಪಾಲಿಸಿದರೆ ನೀವು ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಬಹುದು.
* ಪರೀಕ್ಷಾ ತಯಾರಿಗೆ ಕೆಲವೊಂದು ಸ್ಮಾರ್ಟ್​ ವರ್ಕ್​ ಮಾಡಲೇ ಬೇಕು. ಎಲ್ಲಾ ಪಾಠಗಳನ್ನು ಓದುವುದಕ್ಕಿಂತ ಯಾವುದು ಮುಖ್ಯ ಎನಿಸುತ್ತದೆಯೋ ಅದನ್ನು ಮಾತ್ರ ಓದಿ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಓದಿ.

* ನಿಮ್ಮ ಹಿಂದಿನ ತರಗತಿಯವರು ಅಂದರೆ ಸೀನಿಯರ್ಸ್​ಬಳಿ ಯಾವ ಪ್ರಶ್ನೆ ಪ್ರಮುಖ ಎಂದು ಕೇಳಿ ತಿಳಿದುಕೊಳ್ಳಿ. ಅವರು ಯಾವ ರೀತಿ ಪೂರ್ವತಯಾರಿ ಮಾಡುತ್ತಿದ್ದರು ಎಂದು ತಿಳಿದುಕೊಳ್ಳಿ. ಅವರು ಹೇಳಿದ ಟ್ರೀಕ್ಸ್​ ಫಾಲೋ ಮಾಡಿ.

* ಹಳೆ ಪ್ರಶ್ನೆ ಪತ್ರಿಕೆಗಳಲ್ಲಿ ಕೆಲವು ಪ್ರಶ್ನೆಗಳು ಮರುಕಳಿಸುವ ಸಾಧ್ಯತೆ ತುಂಬಾ ಇರುತ್ತದೆ ಹಾಗಾದ್ದರಿಂದ ತಪ್ಪದೇ ಹಳೆ ಪ್ರಶ್ನೆ ಪತ್ರಿಕೆ ಓದಿಕೊಳ್ಳಿ. ನೀವು ಪಾಸ್​ ಆಗಲು ಕಷ್ಟ ಪಡುತ್ತಿದ್ದರೆ ಹೀಗೆ ಮಾಡಿದರೆ ಖಂಡಿತ ಪಾಸ್​ ಆಗ್ತೀರಾ. 

* ಹೆಚ್ಚಿನ ಸಮಯ ಓದುವುದು ಮುಖ್ಯ ಅದರೊಟ್ಟಿಗೆ ಸ್ವಲ್ಪ ಸಮಯದ ನಿದ್ರೆಯೂ ಅತೀ ಅಗತ್ಯ ಅಂಶವಾಗಿದೆ. ನೀವು ಓದಿದ ತಕ್ಷಣ ಮಲಗಿದರೆ ಅದು ಹೆಚ್ಚು ನೆನಪಿನಲ್ಲಿರುತ್ತದೆ.

* ಹತ್ತನೆ ತರಗತಿ ಎನ್ನುವುದು ವಿದ್ಯಾರ್ಥಿಗಳ‌ ಜೀವನದಲ್ಲಿ ಒಂದು ಮುಖ್ಯವಾದ ಸಂಗತಿ. ಎಷ್ಟು ಪರೀಕ್ಷಾ ಸಿದ್ದತೆ ನಡೆಸಿದರೂ ಕಡಿಮೆ‌ ಎನ್ನುವಂತೆ ವಿದ್ಯಾರ್ಥಿಗಳು ಪರೀಕ್ಷಾ ಸಿದ್ದತೆ ಮಾಡುತ್ತಾರೆ. ಹಾಗಂತ ಇಡೀ ದಿನ ಓದುತ್ತಾ ಕುಳಿತರೆ ಪ್ರಯೋಜನವಿಲ್ಲ.

* ಸರಿಯಾದ ಯೋಜನೆ ಇಲ್ಲದೆ ನಿಮ್ಮ ಗುರಿಯನ್ನು ತಲುಪಲು ಅಸಾಧ್ಯ. ಆದ್ದರಿಂದ ಮುಂಬರುವ ಪರೀಕ್ಷೆಗಳಿಗೆ ಪರಿಣಾಮಕಾರಿಯಾಗಿ ತಯಾರಾಗಲು ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲು ಸರಿಯಾದ ಅಧ್ಯಯನ ವೇಳಾಪಟ್ಟಿಯನ್ನು ರಚಿಸಬೇಕು.


* ಆರೋಗ್ಯಕರವಾಗಿ ತಿನ್ನಿರಿ ಮತ್ತು ಸಾಕಷ್ಟು ನೀರು ಕುಡಿಯಿರಿ. ಜಂಕ್ ಫುಡ್ ತಿನ್ನುವುದನ್ನು ನೀವು ಸಂಪೂರ್ಣವಾಗಿ ನಿರ್ಲಕ್ಷಿಸಬೇಕು. ಜ್ಯೂಸ್ ಮತ್ತು ದಿನಕ್ಕೆ 8 ಗ್ಲಾಸ್ ನೀರಿನ ಜೊತೆಗೆ ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣುಗಳು ಮತ್ತು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇರಿಸಿ. ಪರೀಕ್ಷೆ ಬರೆಯಲು ಆರೋಗ್ಯಕೂಡ ಮುಖ್ಯ.







ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು