SSLC ಮುಗಿದ ನಂತರ ಮುಂದೇನು ಮಾಡಬೇಕು ಎಂದು ಯೋಚಿಸಿವಂತರವರಿಗೆ ಇಲ್ಲಿದೆ ನೋಡಿ ಮಾಹಿತಿ

SSLC ಮುಗಿದ ನಂತರ ಮುಂದೇನು ಮಾಡಬೇಕು ಎಂದು ಯೋಚಿಸಿವಂತರವರಿಗೆ ಇಲ್ಲಿದೆ ನೋಡಿ ಮಾಹಿತಿ

ನೌಕರಿಗಳು?

ಇತ್ತೀಚಿಗೆ ನೀವು ನೋಡುತ್ತಿರುವ ಹಾಗೆ 10ನೇ ತರಗತಿ ಶೈಕ್ಷಣಿಕ ವಿದ್ಯಾರ್ಹತೆಯ ಆಧಾರದ ಮೇಲೆ, ಜಿಲ್ಲಾ ನ್ಯಾಯಾಲಯಗಳಲ್ಲಿ ಅತ್ಯಂತ ಹೆಚ್ಚಿನ ನೇಮಕಾತಿ ನಡೆಯುತ್ತಿದೆ. ಜಿಲ್ಲಾ ನ್ಯಾಯಾಲಯದಲ್ಲಿ ಇತ್ತೀಚಿಗೆ ಕರೆಯುತ್ತಿರುವ ಅತಿ ಹೆಚ್ಚು ಹುದ್ದೆಗಳೆಂದರೆ ಆದೇಶ ಜಾರಿಕಾರರು, ಜವಾನರು, ಶೀಘ್ರ ಲಿಪಿಕಾರರು.

ಎಲ್ಲಾ ಸರ್ಕಾರಿ ಹುದ್ದೆಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆಯ ಏನೆಂದರೆ ಅದು 10ನೇ ತರಗತಿ. ಹೌದು 10ನೇ ತರಗತಿ ಮೇಲೆಯೂ ಕೂಡ ನೀವು ಅನೇಕ ಸರ್ಕಾರ ಹುದ್ದೆಗಳನ್ನು ಪಡೆಯಬಹುದು.

ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆಯನ್ನು ಪಡೆಯಬೇಕಾದರೆ 10ನೇ ತರಗತಿ ಅರ್ಹತೆ ಪಡೆದರೆ ಸಾಕಾಗುತ್ತದೆ. ಈ ಒಂದು ಜಿಲ್ಲಾ ನ್ಯಾಯಾಲಯದ ಹುದ್ದೆಗಳ ಉತ್ತಮ ಸಂಬಳವನ್ನು ಕೂಡ ನೀಡುತ್ತಿವೆ.

10ನೇ ತರಗತಿ ಅರ್ಹತೆಯ ಮೇಲೆ ನೀವು ಪೊಲೀಸ್ ಕೂಡ ಆಗಬಹುದು :
ಹೌದು ನೀವು ಸರಿಯಾದ ಮಾಹಿತಿಯನ್ನು ಕೇಳಿದ್ದೀರಿ. 10ನೇ ತರಗತಿ ಆಧಾರದ ಮೇಲೆ ಕೇಂದ್ರ ಸರ್ಕಾರವು ಇತ್ತೀಚಿಗೆ 25000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿತ್ತು.

ಇದೇ ರೀತಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 10ನೇ ತರಗತಿ ಆಧಾರದ ಮೇಲೆ ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಹಾಗೂ ಸಿಎಆರ್ ‌ಡಿಎಆರ್ ಎಂಬ ಹಲವಾರು ಸರ್ಕಾರಿ ಹುದ್ದೆಗಳು ಕೂಡ ನಿಮಗೆ ಕಾಯ್ದೆ ಇರುತ್ತವೆ.
ಆದ್ದರಿಂದ ಎಸ್‍ಎಸ್‍ಎಲ್‍ಸಿ ಮುಗಿದ ನಂತರ ಕೇವಲ ಪಿಯುಸಿ ಸೈನ್ಸ್ ಮಾಡಲು ಮಾತ್ರ ನೀವು ಯೋಚಿಸುತ್ತಿದ್ದರೆ ಅದರಿಂದ ಹೊರಗೆ ಬಂತು ಇಂಥವೆಲ್ಲ ಉಳಿದ ಅನೇಕ ಅವಕಾಶಗಳ ಸದುಪಯೋಗವನ್ನು ನೀವು ಪಡೆದುಕೊಳ್ಳಬಹುದು.

ಇದೇ ರೀತಿ ಸರ್ಕಾರಿ ಹುದ್ದೆಗಳು ಅನೇಕ ಹುದ್ದೆಗಳು ನಿಮಗಾಗಿ ಕಾಯ್ದಿರುತ್ತವೆ. ಕೇಂದ್ರ ಸರ್ಕಾರ ರಕ್ಷಣಾ ಸಚಿವಾಲಯದಲ್ಲಿಯೂ ಕೂಡ ಅನೇಕ ಹುದ್ದೆಗಳನ್ನು ಇತ್ತೀಚೆಗೆ ಕರೆಯಲಾಗಿತ್ತು.
ವೇಳೆ ಪಿಯುಸಿಯಲ್ಲಿ ನೀವು ಉತ್ತಮ ಅಂಕ ಗಳಿಸಿದರೆ ಅದು ಕೂಡ ಸಿಇಟಿ ರ್ಯಾಂಕಿಂಗ್ ಆಗಿ ಬಹಳ ಹೆಲ್ಪ್ ಆಗುತ್ತದೆ.

ಏಕೆಂದರೆ ಸಿಇಟಿ ಎಕ್ಸಾಮ್ನಲ್ಲಿ ಅಥವಾ ರಿಸಲ್ಟ್ ಅನ್ನು ಪಿಯುಸಿಯ ನಿಮ್ಮ ಅಂಕಗಳನ್ನು 50% ಮತ್ತು ಸಿಇಟಿ ಎಕ್ಸಾಮ್ನಲ್ಲಿ ಬರೆದ ಅಂಕಗಳನ್ನು 50% ಗಣನೆಗೆ ತೆಗೆದುಕೊಂಡು ರ‍್ಯಾಂಕ್ ತಯಾರಿ ಮಾಡಲಾಗುತ್ತದೆ. ಆದ್ದರಿಂದ ನೀವು ಪಿಯುಸಿಯಲ್ಲಿ ಕೂಡ ಉತ್ತಮ ಅಂಕ ಗಳಿಸುವುದು ಉತ್ತಮ ಕಾಲೇಜು ಪಡೆಯಲು ಬಹಳ ಉತ್ತಮವಾಗಿರುತ್ತದೆ.

ಪಿಯುಸಿ ಮುಗಿಸಿದ ನಂತರ ಮುಂದೇನು ಮಾಡಬಹುದು?

ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಮುಗಿಸಿದ ನಂತರ ಪಿಯುಸಿ ಮಾಡಿ ನಂತರ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸುತ್ತಾನೆ. ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿದ ನಂತರ ನಿಮಗೆ ಮುಂದೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ.
ನಾವು ನಿಮಗೆ ಇಂತಹ ವಿಷಯದಲ್ಲಿ ಒಂದು ಉತ್ತಮ ಸಲಹೆಯನ್ನು ಕೊಡುವುದು ಬಯಸುವುದಾದರೆ, ನೀವು ಪದವಿಯಲ್ಲಿರುವಾಗಲೇ ಯುಪಿಎಸ್‌ಸಿ ಅಥವಾ ಕೆಪಿಎಸ್‌ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾದರೆ ನಿಮಗೆ ಸರ್ಕಾರಿ ಅನೇಕ ಉನ್ನತ ಹುದ್ದೆಗಳನ್ನು ನೀವು ಪಡೆಯಬಹುದು.
ಯುಪಿಎಸ್ಸಿ ಎಕ್ಸಾಮ್ನಲ್ಲಿ ಉತ್ತಮ ಅಂಕಗಳನ್ನು ಪಡೆದರೆ ನೀವು ಜಿಲ್ಲಾಧಿಕಾರಿಯಾಗಬಹುದು ಅದೇ ರೀತಿ ಕೆಪಿಎಸ್ಸಿ ಎಕ್ಸಾಮ್ನಲ್ಲಿ ಉತ್ತಮ ಅಂಕ ಗಳಿಸಿದರೆ ನೀವು ತಹಶೀಲ್ದಾರ್ ಆಗಬಹುದು. ಇದೇ ರೀತಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಅನೇಕ ಇದ್ದು ನೀವು ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡಬೇಕೆಂದರೆ ಆದಷ್ಟು ಬೇಗ ತಯಾರಿಯನ್ನು ನಡೆಸುವುದು ಬಹಳ ಸಹಾಯಕವಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್ ಆಗುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದರಿಂದ ಕರ್ನಾಟಕ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಅನೇಕ ಸರ್ಕಾರಿ ಹುದ್ದೆಗಳನ್ನು ನೀವು ಪಡೆಯಲು ತಯಾರಿ ನಡೆಸಿದರೆ ಬಹಳ ಉತ್ತಮ ಹುದ್ದೆಗಳನ್ನು ನೀವು ಅಥವಾ ಉತ್ತಮ ಉದ್ಯೋಗವನ್ನು ನೀವು ಮಾಡಬಹುದು. ಅದೇ ರೀತಿ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಎಕ್ಸಾಮ್ ಗಳನ್ನು ಹೊರತುಪಡಿಸಿ ಆರ್ಮಿ ಪೊಲೀಸ್ ಸೇರಿದಂತೆ ಮುಂತಾದ ಹಲವಾರು ಹುದ್ದೆಗಳು ಉತ್ತಮವಾಗಿವೆ.
ಆದ್ದರಿಂದ ಕೊನೆಯದಾಗಿ ನಾವು ಹೇಳುವುದೇನೆಂದರೆ ಎಸ್ ಎಸ್ ಎಲ್ ಸಿ ಮುಗಿದ ನಂತರ ಕೇವಲ ಪಿಯುಸಿ ಸೈನ್ಸ್ ಮೆಡಿಕಲ್ ಇಂಜಿನಿಯರಿಂಗ್ ಎಂದು ಯೋಚಿಸದೆ ಇವುಗಳನ್ನು ಹೊರತುಪಡಿಸಿ ಕೂಡ ಹಲವಾರು ಆಯ್ಕೆಗಳಿದ್ದು ನಿಮ್ಮ ಇಚ್ಛೆಯ ಪ್ರಕಾರ ಅಥವಾ ನಿಮ್ಮ ಆಸಕ್ತಿಯ ಪ್ರಕಾರ ನೀವು ನಿಮ್ಮ ವೃತ್ತಿಯನ್ನು ಆಯ್ದುಕೊಂಡರೆ ಬಹಳ ಉತ್ತಮವಾಗಿರುತ್ತದೆ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು