ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ದೇಶದ ಕೋಟ್ಯಾಂತರ ರೈತರಿಗೆ ಪ್ರತಿ ವರ್ಷ ₹ 6000 ಆರ್ಥಿಕ ನೆರವನ್ನು ನೀಡುತ್ತದೆ. ವಾರ್ಷಿಕ 3 ಕಂತುಗಳಲ್ಲಿ 2000 ರೂ.ಗಳಂತೆ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು. ರೈತರು ಈ ಹಣ ತಮ್ಮ ಕೃಷಿ ವೆಚ್ಚಕ್ಕಾಗಿ ವಿನಿಯೋಗಿಸಬಹುದು.
PM Kisan Samman Nidhi Scheme ಇದುವರೆಗೂ 16 ನೇ ಕಂತುಗಳನ್ನು ಬಿಡುಗಡೆಯಾಗಿದ್ದು. ಈ ಯೋಜನೆಯಡಿ ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡಲಾಗುತ್ತಿದೆ. ಪ್ರತಿ 4 ತಿಂಗಳ ಅಂತರದಲ್ಲಿ ತಲಾ 2,000 ರೂ.ಗಳಂತೆ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ.
ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸಿಕೊಳ್ಳಲು ಈ ಸುಲಭ ಹಂತಗಳನ್ನು ಅನುಸರಿಸಿ
ಮೊದಲು, pmkisan.gov.in ನ ಪೋರ್ಟಲ್‌ನಲ್ಲಿ ‘ಫಾರ್ಮರ್ಸ್ ಕಾರ್ನರ್’ ಎಂಬುದನ್ನು ಕ್ಲಿಕ್ ಮಾಡಿ .
ಹೊಸ ರೈತ ನೋಂದಣಿ’ ಆಯ್ಕೆಯ ಎಂಬುದರ ಮೇಲೆ ಕ್ಲಿಕ್ ಮಾಡಿ.
ಇದರ ಬಳಿಕ ನಿಗದಿತ ಜಾಗದಲ್ಲಿ ಆಧಾರ್ & ಮೊಬೈಲ್ ನಂಬರ್‌ನ್ನು ನಮೂದಿಸಿ & ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ.
ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸುವ OTP ಅನ್ನು ನಮೂದಿಸಿ & ‘ನೋಂದಣಿಗಾಗಿ ಮುಂದುವರಿಯಿರಿ’ ಆಯ್ಕೆ ಆರಿಸಿಕೊಳ್ಳಿ.
ಇದರಲ್ಲಿ ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ & ಆಧಾರ್ ದೃಢೀಕರಣ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಮೊಬೈಲ್‌ನಲ್ಲಿ ಸ್ವೀಕರಿಸಲಾದ OTP ಅನ್ನು ನಮೂದಿಸಿ & ಜಮೀನಿಗೆ ಸಂಬಂಧಿಸಿದ ವಿವರಗಳು & ದಾಖಲೆಗಳನ್ನು Upload ಮಾಡಿ.
ಎಲ್ಲಾ ಪ್ರಕ್ರಿಯೆಗಳು ಪೂರ್ತಿಯಾದ ನಂತರ, ನಿಮ್ಮ ನೋಂದಣಿ ಪೂರ್ಣಗೊಂಡ ಮಾಹಿತಿ ಮೊಬೈಲ್ ಪರದೆಯಲ್ಲಿ ಗೋಚರಿಸುತ್ತದೆ. ನಂತರ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಂತರ ಮುಂದಿನ ಕಂತಿನಿಂದ ನಿಮ್ಮ ಖಾತೆಗೂ ದುಡ್ಡು ಜಮಾ ಆಗುತ್ತದೆ.