ಈ ವರ್ಷದ ಮಳೆ ಭವಿಷ್ಯ ಹೇಗಿದೆ ಗೊತ್ತಾ? ರೈತರಿಗೆ ಲಾಟರಿ

ರಾಜ್ಯವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಶೇ.106ಕ್ಕಿಂತ ಅಧಿಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಐಎಂಡಿ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ. ಜೂನ್‌ನಿಂದ ಸೆಪ್ಟೆಂಬ‌ರ್ ವರೆಗೆ ದೇಶದಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಸಂತಸಕ್ಕೆ ಕಾರಣವಾಗಿದೆ

ಉಷ್ಣ ಮಾರುತದ ಅಬ್ಬರಕ್ಕೆ ಕಾರಣವಾಗಿರುವ ಎಲ್ ನಿನೋ ಪ್ರಭಾವ ಜೂನ್ ಹೊತ್ತಿಗೆ ತಗ್ಗಲಿದೆ. ಮುಂಗಾರಿಗೆ ಪೂರಕವಾದ ಲಾ ನಿನಾ ಪ್ರಭಾವ ಆಗಸ್ಟ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಹೆಚ್ಚಿರಲಿದೆ. ಈ ಬಾರಿ ಸಾಧಾರಣಕ್ಕಿಂತ ಅಧಿಕ ಮಳೆ ಆಗಲಿದೆ. ಎಂದು ಮೃತ್ಯುಂಜಯ ಮಹಾಪಾತ್ರ ವಿವರಿಸಿದ್ದಾರೆ. 

ಕರ್ನಾಟಕದ ಬಹುತೇಕ ಕಡೆ ಏ. 16 ಮತ್ತು 17ರಂದು ಒಣ ಹವೆ ಇರಲಿದ್ದು, ಏ.18ರ ನಂತರ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.









ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು