ದಾವಣಗೆರೆಯಲ್ಲಿ ನಡೆದ ಘಟನೆ
ದಾವಣಗೆರೆ (ಕರ್ನಾಟಕ) – ಚನ್ನಗಿರಿ ತಾಲೂಕಿನ ನಲ್ಲೂರು ಕ್ಯಾಂಪ್‌ನಲ್ಲಿ ನಡೆದ ಶ್ರೀರಾಮ ನವಮಿ ಹಬ್ಬದ ವೇಳೆ ಕೆಲ ಮತಾಂಧ ಮುಸ್ಲಿಂ ಯುವಕರು ಹಿಂದೂ ಯುವಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ಹನುಮಂತ್ ಮತ್ತು ಗೋಪಾಲ್ ಎಂಬ ಇಬ್ಬರು ಹಿಂದೂ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರು ಶಿವಮೊಗ್ಗದ ಮೆಕ್‌ಗ್ಯಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2022 ರ ಶ್ರೀರಾಮ ನವಮಿಯ ದಿನದಂದು ಹಿಂದೂಗಳ ಮೇಲೆ ಇದೇ ರೀತಿಯ ದಾಳಿಗಳು ಸಂಭವಿಸಿದವು.
ಗಾಯಾಳು ಗೋಪಾಲ್ ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ಮಾತನಾಡಿ, ಶ್ರೀರಾಮ ನವಮಿಯ ದಿನದಂದು ನಾವು ಜನರಿಗೆ ಶರಬತ್ತು ಮತ್ತು ಸಲಾಡ್ ಹಂಚುತ್ತಿದ್ದಾಗ ಬೇರೆ ಧರ್ಮದ ಕೆಲವು ಯುವಕರು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಏಕಾಏಕಿ ಈ ಯುವಕರು ನನ್ನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ.
Tags
ಪ್ರಮುಖ ಸುದ್ದಿಗಳು