ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ಆಗ್ರಹ

ಮಹಾಲಿಂಗಪುರ :
ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ''ರಾಷ್ಟ್ರಧ್ವಜ ಗೌರವ ಕಾಪಾಡಲು  ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಮನವಿ ಪತ್ರ ಸಲ್ಲಿಸಿದರು.

ರಾಷ್ಟ್ರಧ್ವಜಕ್ಕೆ ಅಪಮಾನ ಸೂಚಕ ಪ್ಲಾಸ್ಟಿಕ್ ಧ್ವಜ ತಯಾರಿಕೆಯನ್ನು ನಿಷೇಧಿಸಬೇಕು, ಪ್ಲಾಸ್ಟಿಕ್ ರಾಷ್ಟ್ರ ಧ್ವಜ ತಯಾರಿಕೆ ಹಾಗೂ ಬಳಕೆ ಮಾಡುವ ಮೂಲಕ ತಿಳಿಯದೆ ಅಪಮಾನ ಮಾಡುತಿದ್ದೇವೆ. ಆಗಸ್ಟ್ 15ರಂದು ಹಾಗೂ ಜನವರಿ 26ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ರಾಷ್ಟ್ರಧ್ವಜವನ್ನು ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಬಂದಿದೆ. ಪ್ಲಾಸ್ಟಿಕ್ ಧ್ವಜಗಳು ತಕ್ಷಣ ನಾಶವಾಗುವುದಿಲ್ಲ ಆದ್ದರಿಂದ ಈ ರಾಷ್ಟ್ರ ಧ್ವಜಗಳು ಅನೇಕ ದಿನಗಳವರೆಗೆ ಅಗೌರವ ಕಾಣಬೇಕಾಗಿದೆ.

ಆದ್ದರಿಂದ ರಾಷ್ಟ್ರದ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯಿಂದ ಮುಂಬೈಕೋರ್ಟ್ ನಲ್ಲಿ ಮನವಿ ಸಲ್ಲಿಸಲಾಗಿತ್ತು, ಈ ಸಂಬಂಧ ನ್ಯಾಯಾಲಯ ರಾಷ್ಟ್ರಧ್ವಜದ ಆಗುವ ಅವಮಾನವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಪ್ಲಾಸ್ಟಿಕ್ ರಾಷ್ಟ್ರಧ್ವಜ ದಿಂದ ಆಗುವ ಅವಮಾನವನ್ನು ತಡೆಯಲು ವಿವಿಧ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸಬೇಕು, ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ ಪ್ರಶೋತ್ತರ ಸ್ಪರ್ಧೆಗಳನ್ನು ಆಯೋಜನೆ ಮಾಡಬೇಕು, ಕರಪತ್ರ ವಿತರಿಸಬೇಕು, ಪೋಸ್ಟರ್ ಪ್ಲೆಟ್ಗಳ ಮೂಲಕ ತಿಳುವಳಿಕೆ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಪಾಂಚಜನ್ಯ ದಿನಪತ್ರಿಕೆ ಸಂಪಾದಕರು ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ,ಮುತ್ತಪ್ಪಾ ಗಿರಿಮಲ್ಲಪ್ಪಾ ಪೋಜೇರಿ, ಮುತ್ತಪ್ಪಾ  ಉಳ್ಳಾಗಡ್ಡಿ 
 ಇತರರು ಇದ್ದರು.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು