ಸಾಮಾನ್ಯ ಜ್ಞಾನ
ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳ ಕೇಂದ್ರದಲ್ಲಿ ಭಾರತದ ಅತ್ಯುತ್ತಮ ಸಂಸ್ಥೆ ಯಾವುದು?
ಉತ್ತರ:- IIM Ahmedabad
ಸುನಿಲ್ ಛೆಟ್ರಿ ಯಾವ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ?
ಉತ್ತರ:- ಫುಟ್‌ಬಾಲ್
ಯಾವ ದೇಶವು ವಿಶ್ವದ ಮೊದಲ 6G ಸಾಧನವನ್ನು ಪರಿಚಯಿಸಿದೆ?
ಉತ್ತರ:- ಜಪಾನ್
2030 ರ ವೇಳೆಗೆ ಭಾರತದ ಇಂಟರ್ನೆಟ್ ಆರ್ಥಿಕತೆಯು ಎಷ್ಟು ತಲುಪಬಹುದು?
ಉತ್ತರ:- $1000 ಬಿಲಿಯನ್
ವಿಶ್ವದ ಅತಿ ಎತ್ತರದ ಈಜು ಸ್ಪರ್ಧೆಯ ಪೂಲ್ ಅನ್ನು ಯಾವ ದೇಶದಲ್ಲಿ ತೆರೆಯಲಾಗಿದೆ?
ಉತ್ತರ:- ಭೂತಾನ್
ನಮ್ಮ ದೇಶದ ಸಂವಿಧಾನದ ಪ್ರಕಾರ ನಮ್ಮ ದೇಶದ ಹೆಸರು
ಉತ್ತರ:- ಇಂಡಿಯಾ ಎಂದರೆ ಭಾರತ
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 'ರಾಜಕೀಯ ಅಧಿಕಾರದ' ಮೂಲನೆಲೆಯಿರುವುದು
ಉತ್ತರ:- ಪ್ರಜೆಗಳಲ್ಲಿ
ನಮ್ಮ ಸಂವಿಧಾನದ ಅರವತ್ತೊಂದನೇ ತಿದ್ದುಪಡಿಯನ್ನು ಈ ಕೆಳಕಂಡ ಯಾವ ಕಲಂಗೆ ತರಲಾಯಿತು?
ಉತ್ತರ:- 326ನೇ ಕಲಂ
ಭಾರತದ ಸಂವಿಧಾನದ ಪ್ರಕಾರ 'ಜಾತ್ಯತೀತ ವಾದ' ಎಂದರೆ
ಉತ್ತರ: - ನಿರೀಶ್ವರವಾದ
ಈ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಸಂವಿಧಾನದ '243-ಇ' ಕಲಂ ವಿವರಣೆ ನೀಡಿದೆ?
ಉತ್ತರ:- ಚುನಾಯಿತ ಗ್ರಾಮಸಭೆಗಳ ಅಧಿಕಾರದ ಅವಧಿ
ಭಾರತದ ಸಂವಿಧಾನದ 123 ನೇ ಕಲಂ ಭಾರತದ ರಾಷ್ಟ್ರಪತಿಯವರಿಗೆ ಈ ಕೆಳಗಿನ ಯಾವ ಅಧಿಕಾರ ನೀಡಿದೆ?
ಉತ್ತರ:- ಸಂಸತ್ತು ಅಧಿವೇಶನದಲ್ಲಿರದ ಅವಧಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ.
ಸಂಸದೀಯ ಪರಿಭಾಷೆಯಲ್ಲಿ "ವ್ಹಿಪ್' ನೀಡುವುದು ಎಂದರೆ
ಉತ್ತರ:- ಮಸೂದೆಗಳ ಮೇಲೆ ಚರ್ಚೆ ಅಥವಾ ಮತ ನೀಡುವ ಸಂದರ್ಭ ಉಂಟಾದಾಗ ವಿವಿಧ ಪಕ್ಷಗಳು ತಮ್ಮ ಸದಸ್ಯರಿಗೆ ಕಡ್ಡಾಯವಾಗಿ ಸಭೆಗೆ ಹಾಜರಾಗಲು ನೀಡುವ ಆದೇಶ.
ವಿಶ್ವ ಸಂಸ್ಥೆಯು ಈ ಕೆಳಕಂಡ ಯಾವ ದಿನಾಂಕದಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು?
ಉತ್ತರ:- 24-10-1945
"ವರದಕ್ಷಿಣೆ ಸಾವನ್ನು" ಉಂಟುಮಾಡುವುದು ಭಾರತದ ದಂಡಸಂಹಿತೆಯ ಯಾವ ಪರಿಚ್ಛೇದದ ಪ್ರಕಾರ ಜೀವಾವಧಿ ಶಿಕ್ಷೆ ನೀಡಬಹುದಾದ ಅಪರಾಧವಾಗುತ್ತವೆ?
ಉತ್ತರ:- ಪರಿಚ್ಛೇದ-304 B