ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ

ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY), ಯಾವ ಸಚಿವಾಲಯದಿಂದ ಜಾರಿಗೊಳಿಸಲಾಗಿದೆ?
ಉತ್ತರ:- ಗ್ರಾಮೀಣಾಭಿವೃದ್ಧಿ ಸಚಿವಾಲಯ

ಇತ್ತೀಚೆಗೆ ಓಮನ್ ಯಾವ ದೇಶದೊಂದಿಗೆ “ಈಸ್ಟರ್ನ್ ಬ್ರಿಡ್ಜ್ Vll  &  ಅಲ್ ನಜಾ ವಿ ಎಕ್ಸರ್ಸೈಸ್" ಅನ್ನು ಆಯೋಜಿಸುತ್ತದೆ?
ಉತ್ತರ:- ಭಾರತ

ದೃಷ್ಟಿಹೀನ ವ್ಯಕ್ತಿಗಳು ಸೇರಿದಂತೆ ವಿಕಲಾಂಗ ವ್ಯಕ್ತಿಗಳಿಗಾಗಿ ವಿಶೇಷವಾಗಿ -------- ವಿನ್ಯಾಸಗೊಳಿಸಿದ ಸ್ಟಾರ್ ಹೆಲ್‌ನಿಂದ ಹೊಸದಾಗಿ ಪ್ರಾರಂಭಿಸಲಾದ ಆರೋಗ್ಯ ವಿಮಾ ಪಾಲಿಸಿಯ ಹೆಸರೇನು?
ಉತ್ತರ:- ಸ್ಪೆಷಲ್ ಕೇರ್ ಗೋಲ್ಡ್

ಪ್ರತಿ ವರ್ಷ ವಿಶ್ವಸಂಸ್ಥೆಯು ಯಾವ ದಿನಾಂಕದಂದು ದಕ್ಷಿಣ-ದಕ್ಷಿಣ ಸಹಕಾರದ ಅಂತಾರಾಷ್ಟ್ರೀಯ ದಿನವನ್ನು ಆಚರಿಸುತ್ತದೆ?
ಉತ್ತರ:- ಸೆಪ್ಟೆಂಬರ್ 12

ಹವಾಮಾನ ಹೊಂದಾಣಿಕೆ ಮತ್ತು ಸ್ಥಿತಿಸ್ಥಾಪಕತ್ವದಲ್ಲಿ 'ತೇವಭೂಮಿಗಳ ಪಾತ್ರ'ವನ್ನು ಎತ್ತಿ ತೋರಿಸುವ ಉದ್ದೇಶದಿಂದ ಭಾರತದ ಮೊದಲ 'ಟೀಲ್ ಕಾರ್ಬನ್ ಅಧ್ಯಯನ'ವನ್ನು ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಲಾಯಿತು?
ಉತ್ತರ:- ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ

2024ನೇ ಸಾಲಿನ 4 ನೇ 'ಗ್ಲೋಬಲ್ ಬಯೋ-ಇಂಡಿಯಾ 2024' ಕಾರ್ಯಕ್ರಮ ಕೆಳಗಿನ ಯಾವ ಸ್ಥಳದಲ್ಲಿ ನಡೆಯಿತು?
ಉತ್ತರ:- ನವದೆಹಲಿ

ಕಂದ ಪದ್ಯದಲ್ಲಿರುವ ಪಾದಗಳು
ಉತ್ತರ:- ನಾಲ್ಕು

ಪ್ರತಿ ಪಾದದಲ್ಲಿ 5 ಮಾತ್ರೆಯ 4 ಗಣಗಳಿದ್ದರೆ ಅದು
ಉತ್ತರ:- ಲಲಿತಲರಗಳೆ

'ಭರತೇಶ ವೈಭವ' ಕಾವ್ಯದ ಛಂದಸ್ಸು
ಉತ್ತರ:- ಸಾಂಗತ್ಯ

'ಷಟ್ಪ್ರತ್ಯಯ' ಕೃತಿಯ ಕರ್ತೃ
ಉತ್ತರ:- ಶಾಲ್ಯದ ಕೃಷ್ಣರಾಜ

ನಾಗವರ್ಮನ ಪ್ರಕಾರ ಕರ್ನಾಟಕ ವಿಷಯ ಜಾತಿಗಳು
ಉತ್ತರ:- ಹತ್ತು

ಕನ್ನಡದಲ್ಲಿ ಮೊತ್ತಮೊದಲು ಸಾನೆಟ್ಟನ್ನು ರಚಿಸಿದವರು
ಉತ್ತರ:- ಗೋವಿಂದ ಪೈ

ಶ್ರೀ ರಾಮಾಯಣದರ್ಶನಂ ಕೃತಿಯ ಛಂದಸ್ಸು
ಉತ್ತರ:- ಮಹಾ ಛಂದಸ್ಸು

ಮುಕ್ತ ಛಂದಸ್ಸನ್ನು ಮೊದಲಬಾರಿಗೆ ಬಳಕೆಗೆ ತಂದವರು
ಉತ್ತರ:- ಗೋಕಾಕರು

'ಎ ಕಂಪ್ಯಾರೇಟಿವ್ ಗ್ರಾಮರ್ ಆಫ್ ದಿ ದ್ರವಿಡಿಯನ್ ಲಾಂಗ್ರೇಜಸ್' ಕೃತಿ ರಚನಕಾರ:
ಉತ್ತರ:- ಕಾಲ್ಡವೆಲ್


ನಿಮಗಿದು ನೆನಪಿರಲಿ

1898 ರಲ್ಲಿ ಸರಸ್ವತಿಪುರಂನಲ್ಲಿ ರಾಜ್ಯದ ಮೊದಲ ಫೈರ್ ಸ್ಟೇಷನ್( ಅಗ್ನಿಶಾಮಕ ಠಾಣೆ)ನ್ನು ಸ್ಥಾಪಿಸಲಾಗಿದೆ.




"ಮಿಸ್‌ ಫೆಸ್ಟಿವಲ್‌ ಆಫ್‌ ನೇಶನ್ಸ್‌" ನಲ್ಲಿ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ಗೆದ್ದ ಹೆಮ್ಮೆಯ ಕನ್ನಡತಿ ಜೀವಿಕಾ ಬೆಂಕಿ /  'Miss Festival of Nations' Kannadathi Jeevika won the runner-up award

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ನಡೆದ ʼಮಿಸ್ ಫೆಸ್ಟಿವಲ್ ಆಫ್ ನೇಶನ್ಸ್ʼ ಸ್ಪರ್ಧೆಯಲ್ಲಿ 'ಮಿಸ್ ಇಂಡಿಯಾʼ ಜೀವಿಕಾ ಬೆಂಕಿ (Jeevika Benki) ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದಿದ್ದು,  ʼಮಿಸ್ ಬೋಸ್ನಿಯಾʼ ಆಜ್ರಾ ಕ್ಲಾಫಿಜಾ ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್ 2024 ಕಿರೀಟವನ್ನು ಗೆದ್ದಿದ್ದಾರೆ.

ಸುಮಾರು 30 ದೇಶಗಳು ಭಾಗವಹಿಸಿದ್ದ ಹಾಗೂ 53 ವರ್ಷಗಳ ಇತಿಹಾಸವಿರುವ ಫೆಸ್ಟಿವಲ್ ಆಫ್‌ ನೇಶನ್‌ನಲ್ಲಿ 16 ವರ್ಷದ ಜೀವಿಕ ಬೆಂಕಿ ಇಷ್ಟು ದೊಡ್ಡ ಸಾಧನೆ ಮಾಡಿದ ಮೊದಲ ಹೆಮ್ಮೆಯ ಕನ್ನಡತಿಯಾಗಿದ್ದಾರೆ.



"ಸಂವಹನ ಪತ್ರಿಕೆ-2ರಲ್ಲಿ ಈ ಕೆಳಗಿನಂತೆ ಅಂಕಗಳು ಬದಲಾಯಿಸಬೇಕೆಂದು ಕೇಳಿಕೊಂಡಿರುತ್ತೇವೆ"


1. ಕನ್ನಡ---60ಅಂಕ (ಕನ್ನಡ ವ್ಯಾಕರಣ-30 ಅಂಕ, ಕನ್ನಡ ಸಾಹಿತ್ಯ-30 ಅಂಕ ಒಟ್ಟು=60ಅಂಕ)

2. ENGLISH---20 ಅಂಕ

 3.COMPUTER---20 ಅಂಕ
                      =============
                     100 - ಅಂಕಗಳು

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು