ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಹುದ್ದೆ ಭರ್ತಿಗೆ ಒತ್ತಾಯ

ಬೆಂಗಳೂರು: ಕೆಪಿಟಿಸಿಎಲ್ ಮತ್ತು ರಾಜ್ಯದ

ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಸ್ಪೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇರ ನೇಮಕಾತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘವು ರಾಜ್ಯಪಾಲರಿಗೆ ಪತ್ರ ಬರೆದಿದೆ.

ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಪಿಯುಸಿ ಅಂಕಗಳ ಅಧಾರದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಕೈಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕೆಪಿಟಿಸಿಎಲ್ ಅಧಿಸೂಚನೆಗೂ ಇದೇ ನಿಮಯವನ್ನು ಜಾರಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ಕಾಂತಕುಮಾ‌ರ್ ಅವರ ಪತ್ರದ ಮೂಲಕ ಥಾವರ್

ಚಂದ್ ಗೆಹಲೋತ್ ಅವರನ್ನು ಒತ್ತಾಯಿಸಿದ್ದಾರೆ.



 ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ...

 ಕರ್ನಾಟಕದ ಸಿಂಹ - ಗಂಗಾಧರಾವ್ ದೇಶಪಾಂಡೆ...

 ಕರ್ನಾಟಕದ ಹುಲಿ - ಡೆಪ್ಯುಟಿ ಚೆನ್ನಬಸಪ್ಪ...

 ಮೈಸೂರಿನ ಹುಲಿ - ಟಿಪ್ಪು ಸುಲ್ತಾನ್...

 ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲಪ್ಪ...

 ಕರ್ನಾಟಕದ ಷೆಕ್ಸ್ ಪಿಯರ್ - ಕಂದಗಲ್ ಹನುಮಂತರಾಯ...

 ಕರ್ನಾಟಕದ ( ಕನ್ನಡದ )  ಕಾಳಿದಾಸ - ಬಸಪ್ಪ ಶಾಸ್ತ್ರಿ...




ನವೆಂಬರ್ 11: ಇತಿಹಾಸದಲ್ಲಿ ಇಂದು

*1918: ಮೊದಲ ವಿಶ್ವ ಸಮರ ಅಂತ್ಯ.

*1956: ಮಧ್ಯ ಪ್ರದೇಶವನ್ನು ರಾಜ್ಯ; ದೆಹಲಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲಾಯಿತು.

*1966: ಹರಿಯಾಣ ರಾಜ್ಯದ ಉದಯ.

*1973: ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರು 

*1994: ಖ್ಯಾತ ಕವಿ ಕುವೆಂಪು ಅಸ್ತಂಗತ.


ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ನ್ಯಾ.ಸಂಜೀವ ಖನ್ನಾ ಅವರು ಪ್ರಮಾಣವಚನ ಸ್ವೀಕರಿಸಿದರು / Justice Sanjiv Khanna takes oath as 51st Chief Justice of India, succeeds DY Chandrachud

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನ್ಯಾಯಮೂರ್ತಿ ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸೋಮವಾರ ಭಾರತದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ಪ್ರಮಾಣ ವಚನ ಸ್ವೀಕರಿಸಿದರು.

ಸಂಜೀವ್ ಖನ್ನಾ ಅವರು ಚುನಾವಣಾ ಬಾಂಡ್‌ಗಳು, ಆರ್ಟಿಕಲ್ 370 ಮತ್ತು ಇತರ ಪ್ರಕರಣಗಳಲ್ಲಿ ಪ್ರಮುಖ ತೀರ್ಪುಗಳನ್ನು ನೀಡಿದರು. ಜನವರಿ 2019 ರಿಂದ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಆರು ವರ್ಷಗಳಲ್ಲಿ 117 ತೀರ್ಪುಗಳನ್ನು ನೀಡಿದ್ದಾರೆ. 456 ತೀರ್ಪುಗಳಲ್ಲಿ ಸದಸ್ಯರಾಗಿ ಭಾಗವಹಿಸಿದ್ದಾರೆ.

ನಿರ್ಗಮಿತ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಂದ ತೆರವಾದ ಸ್ಥಾನಕ್ಕೆ ಈಗ ಸಂಜೀವ್ ಖನ್ನಾ ಏರುತ್ತಿದ್ದು, ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಆರು ತಿಂಗಳ ಅಧಿಕಾರಾವಧಿಯನ್ನು ಪೂರೈಸಲಿದ್ದಾರೆ.


ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು