ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು

ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು ಮತ್ತು ಉತ್ತರಗಳು ✍🏻

ಮಹಿಳಾ ಸಮೃದ್ಧಿ ಯೋಜನೆಯನ್ನು ಯಾವ ರಾಜ್ಯ / ಯುಟಿ ಸರ್ಕಾರ ಪ್ರಾರಂಭಿಸಿದೆ?
[ಎ] ದೆಹಲಿ
[ಬಿ] ಉತ್ತರಾಖಂಡ
[ಸಿ] ಜಮ್ಮು ಮತ್ತು ಕಾಶ್ಮೀರ
[ಡಿ] ಬಿಹಾರ
Ans: A

ಇತ್ತೀಚೆಗೆ ಸುದ್ದಿಯಲ್ಲಿ ಉಲ್ಲೇಖಿಸಲಾದ "T-72" ಎಂದರೇನು?
[ಎ] ಟ್ಯಾಂಕ್
[ಬಿ] ಕ್ಷುದ್ರಗ್ರಹ
[ಸಿ] ಜಲಾಂತರ್ಗಾಮಿ
[ಡಿ] ಕಪ್ಪು ಕುಳಿ
Ans: A

2025 ರ ರುವಾಂಡನ್ ಚಾಲೆಂಜರ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದವರು ಯಾರು?
[ಎ] ಗೈ ಡೆನ್ ಔಡೆನ್ ಮತ್ತು ಜ್ಡೆನೆಕ್ ಕೋಲಾರ್
[ಬಿ] ಸಿದ್ಧಾಂತ್ ಬಾಂಥಿಯಾ ಮತ್ತು ಅಲೆಕ್ಸಾಂಡರ್ ಡಾನ್ಸ್ಕಿ
[ಸಿ] ಜೆಫ್ರಿ ಬ್ಲಾಂಕಾನಿಯಕ್ಸ್ ಮತ್ತು ಜ್ಡೆನೆಕ್ ಕೋಲಾರ್
[ಡಿ] ವ್ಯಾಲೆಂಟಿನ್ ಫೋಯರ್ ಮತ್ತು ಸಿದ್ಧಾಂತ್ ಬಾಂಥಿಯಾ
Ans: B

ಇತ್ತೀಚೆಗೆ ಯಾವ ದೇಶವು ಕ್ಲಸ್ಟರ್ ಬಾಂಬ್‌ಗಳನ್ನು ನಿಷೇಧಿಸುವ ಕ್ಲಸ್ಟರ್ ಮುನಿಷನ್ಸ್ (CCM) ಸಮಾವೇಶದಿಂದ ಹೊರಬಂದಿತು?
[ಎ] ಲಾಟ್ವಿಯಾ
[ಬಿ] ಎಸ್ಟೋನಿಯಾ
[ಸಿ] ಲಿಥುವೇನಿಯಾ
[ಡಿ] ಬೆಲಾರಸ್
Ans: C

ಯಾವ ಸಮಾರಂಭದಲ್ಲಿ ನಷ್ಟ ಮತ್ತು ಹಾನಿ ನಿಧಿ (LDF) ಅನ್ನು ಸ್ಥಾಪಿಸಲಾಯಿತು?
[ಎ] COP26 (ಗ್ಲಾಸ್ಗೋ, 2021)
[ಬಿ] COP27 (ಈಜಿಪ್ಟ್, 2022)
[ಸಿ] COP25 (ಮ್ಯಾಡ್ರಿಡ್, 2019)
[ಡಿ] COP28 (ದುಬೈ, 2023)
Ans: C

SIPRI ವರದಿಯ ಪ್ರಕಾರ, 2020-24ರ ಅವಧಿಯಲ್ಲಿ ಯಾವ ದೇಶವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಯಿತು?
[ಎ] ಭಾರತ
[ಬಿ] ಚೀನಾ
[ಸಿ] ಉಕ್ರೇನ್
[ಡಿ] ಜಪಾನ್
Ans: C

ಯಾವ ರಾಜ್ಯ ಸರ್ಕಾರವು ಮುಖ್ಯ ಮಂತ್ರಿ ಬಾಲಿಕಾ ಸಮೃದ್ಧಿ ಯೋಜನೆ ಮತ್ತು ಮುಖ್ಯಮಂತ್ರಿ ಕನ್ಯಾ ಆತ್ಮನಿರ್ಭರ್ ಯೋಜನೆ ಎಂಬ ಯೋಜನೆಯನ್ನು ಪ್ರಾರಂಭಿಸಿದೆ?*
[ಎ] ಮಿಜೋರಾಂ
[ಬಿ] ತ್ರಿಪುರ
[ಸಿ] ಅಸ್ಸಾಂ
[ಡಿ] ಮಣಿಪುರ
Ans: B

ಇತ್ತೀಚೆಗೆ ಯಾವ ರಾಜ್ಯದಲ್ಲಿ ಸಾರಸ್ ಕ್ರೇನ್ (ಗ್ರಸ್ ಆಂಟಿಗೋನ್) ಅಪರೂಪದ ದೃಶ್ಯ ವರದಿಯಾಗಿದೆ?
[ಎ] ನಾಗಾಲ್ಯಾಂಡ್
[ಬಿ] ಅಸ್ಸಾಂ
[ಸಿ] ಮಿಜೋರಾಂ
[ಡಿ] ಸಿಕ್ಕಿಂ
Ans: B

ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ 2025 ಅನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ?
[ಎ] ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
[ಬಿ] ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
[ಸಿ] ಕಾನೂನು ಮತ್ತು ನ್ಯಾಯ ಸಚಿವಾಲಯ
[ಡಿ] ಗೃಹ ವ್ಯವಹಾರಗಳ ಸಚಿವಾಲಯ
Ans: A

ಇತ್ತೀಚೆಗೆ ಯಾವ ದೇಶವು ಮ್ಯಾನ್ಮಾರ್ ಗಡಿಯ ಬಳಿ ಪ್ರಬಲವಾದ ಲಾರ್ಜ್ ಫೇಸ್ಡ್ ಅರೇ ರಾಡಾರ್ (LPAR) ಅನ್ನು ನಿಯೋಜಿಸಿದೆ?
[ಎ] ಚೀನಾ
[ಬಿ] ಭಾರತ
[ಸಿ] ಥೈಲ್ಯಾಂಡ್
[ಡಿ] ಬಾಂಗ್ಲಾದೇಶ
Ans: A


✅ RPF ಕೀ ಉತ್ತರಗಳ ಬಗ್ಗೆ RRB ಮೂಲಕ ಅಧಿಕೃತ ಸೂಚನೆ...

🎯 ಕೀ ಉತ್ತರಗಳನ್ನು 24/03/2025 ರಿಂದ ಸಂಜೆ 6 ಘಂಟೆಯಿಂದ 29/02/2025 ರ ತನಕ ಲಭ್ಯವಾಗಲಿವೆ...

✅ Answer Key ಲಿಂಕ್👇


ಪ್ರಮುಖ ಸ್ಥಳಗಳ ಅನ್ವರ್ಥಕ ನಾಮಗಳು

• ಗಣಿ ನಾಡು - ಬಳ್ಳಾರಿ

• ಗುಮ್ಮಟ ನಗರಿ - ವಿಜಯಪುರ

• ಪೇಡಾನಗರಿ - ಧಾರವಾಡ

• ಮುದ್ರಣ ನಗರಿ - ಗದಗ

• ಕರದಂಟು ನಗರಿ - ಗೋಕಾಕ

• ಕುಂದಾ ನಗರಿ - ಬೆಳಗಾವಿ

• ಬಂದರು ನಗರಿ - ಮಂಗಳೂರು

• ಮಂಜಿನ ನಗರಿ - ಮಡಿಕೇರಿ

• ಉದ್ಯಾನ ನಗರಿ - ಬೆಂಗಳೂರು

• ಏಲಕ್ಕಿ ನಗರಿ - ಹಾವೇರಿ

• ಕೃಷ್ಣ ನಗರಿ - ಉಡುಪಿ

• ಬೆಣ್ಣೆ ನಗರಿ - ದಾವಣಗೆರೆ

• ಭತ್ತದ ಕಣಜ - ಗಂಗಾವತಿ

• ಅರಮನೆಗಳ ನಗರಿ - ಮೈಸೂರು

• ಕೋಟೆ ನಾಡು - ಬಾಗಲಕೋಟೆ

• ದುರ್ಗ ನಾಡು - ಚಿತ್ರದುರ್ಗಾ

• ಕಲ್ಪತರು ನಾಡು - ತುಮಕೂರು

• ಚಿನ್ನದ ನಾಡು - ಕೋಲಾರ

• ಬೊಂಬೆಯನಾಡು - ಚನ್ನಪಟ್ಟಣ

• ಸಕ್ಕರೆ ನಾಡು - ಮಂಡ್ಯ

•ಸಕ್ಕರೆಯ ಜಿಲ್ಲೆ -ಬೆಳಗಾವಿ 

• ರೇಷ್ಮೆ ನಾಡು - ರಾಮನಗರ

• ಕಾಫೀ ನಾಡು - ಚಿಕ್ಕಮಗಳೂರು

• ಚಾಲುಕ್ಯರ ನಾಡು - ಬಾದಾಮಿ

• ಗಂಗರ ನಾಡು - ತಲಕಾಡು

• ಬಿಸಿಲು ನಾಡು - ರಾಯಚೂರು

• ಸೂಫಿ ಸಂತರ ನಾಡು - ಬೀದರ

• ಕದಂಬರ ನಾಡು - ಬನವಾಸಿ

• ಗಿರಿಗಳ ನಾಡು - ಯಾದಗಿರಿ

• ಜಲಪಾತಗಳ ತವರೂರು - ಕಾರವಾರ

•ಜಲಪಾತಗಳ ಜಿಲ್ಲೆ -ಉತ್ತರ ಕನ್ನಡ 

• ತೊಗರಿ ನಾಡು - ಕಲಬುರ್ಗಿ

• ಮಲೆನಾಡಿನ ಹೆಬ್ಬಾಗಿಲು - ಶಿವಮೊಗ್ಗ



ಬದುಕಿನಲ್ಲಿ ಯಶಸ್ವಿಯಾಗಬೇಕು ಅಂದರೆ ನಿಮ್ಮ ಕೆಲಸಗಳನ್ನು ಹುಚ್ಚರಂತೆ ಪ್ರೀತಿಸಿ. ನಿಂತಾಗ, ಕುಳಿತಾಗ, ಊಟ ಮಾಡುವಾಗ, ಹಾಗೆಯೇ ಮಲಗಿದಾಗ ಕೂಡ ಅದೇ ಧ್ಯಾನ ಇರಲಿ.
—ವಾಲ್ಟರ್ ಸಿಡ್ನಿ.
(ಟಾಟಾರವರಿಗೆ ಇಷ್ಟವಾದ ಮಾತು)

★ ನಾವು ಪ್ರೀತಿಸುವ ಕೆಲಸದಲ್ಲಿ ಮುಳುಗಿ ಹೋಗಬೇಕು. ಅದರಲ್ಲಿಯೇ ಸಾಧನೆ ಮಾಡಬೇಕು ದೊಡ್ಡ ಸಂಶೋಧನೆಗಳನ್ನು ಮಾಡಿದವರು, ಸಾಹಿತ್ಯ, ಸಂಗೀತ, ಕಲೆ, ಅಭಿನಯದಲ್ಲಿ ಮಹಾನ್ ಎತ್ತರವನ್ನು ಮುಟ್ಟಿದವರೆಲ್ಲ ತಮ್ಮ ಕೆಲಸಗಳಲ್ಲಿ ಹುಚ್ಚರಂತೆ ಮಗ್ನರಾಗಿದ್ದರು. ಕೆಲಸದಲ್ಲಿ ಬರೀ ಪ್ರೀತಿ ಬೆಳೆಸಿಕೊಂಡರೆ ಸಾಲದು, ಅದರೊಂದಿಗೆ ಕುಶಲತೆ ಬೆಳೆಸಿಕೊಳ್ಳಬೇಕು. ತಾದ್ಯಾತ್ಮತೆ ಹೊಂದಬೇಕು''

★ ನಿಮ್ಮ ಅಂತರಾತ್ಮ ಮತ್ತು ಉದ್ದೇಶಗಳು ಶುದ್ಧವಾಗಿದ್ದರೆ ಚಮತ್ಕಾರಗಳು ಸಂಭವಿಸುತ್ತವೆ. ಸಹಾಯ ಮಾಡಬಹುದು ಎಂದು ನಂಬಿದವರು ಕೈ ಕೊಡಬಹುದು. ಆದರೆ, ನೀವು ಕನಸು ಮನಸ್ಸಿನಲ್ಲಿಯೂ ಯೋಚಿಸದವರು ಸಹಾಯಕ್ಕೆ ಧಾವಿಸಬಹುದು. *ಸೋಲಿಗೆ ಹೆದರಬಾರದು. ಜಗತ್ತು ಮತ್ತೆ ಮತ್ತೆ ನಮಗೆ ಅವಕಾಶಗಳನ್ನು ನೀಡುವುದೇ ಬದುಕಿನ ವೈಭವ. 70-80 ವರ್ಷಗಳ ಅವಧಿಯ ಈ ಬದುಕು ಸಣ್ಣದು. ಬದುಕಿನಲ್ಲಿ ನಂಬಿಕೆ ಉತ್ಸಾಹಗಳೇ ನಮ್ಮ ಶಕ್ತಿ. ಪ್ರಯತ್ನ ಮಾಡುತ್ತಲೇ ಇರಬೇಕು.

★ ಭಯ ದೊಡ್ಡ ಶತ್ರು. ನೀವು ಭಯದ ಕೋಣೆಯಲ್ಲಿ ಕುಳಿತರೆ ಹೊರಗೆ ಬರಲಾರಿರಿ. ಆದರೆ ಜಗತ್ತು ಹೊರಗೆ ಇದೆ. ಅದು ವಿಶಾಲ ಮೈದಾನ. ನಿರ್ಭಯವಾಗಿ ಓಡುತ್ತಲೇ ಇರಬೇಕು.👍😊

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು