1.'ಗಿಗ್ ಸಾಮಾಜಿಕ ಭದ್ರತೆ ಮಸೂದೆ'ಗೆ ಸಂಪುಟ ಒಪ್ಪಿಗೆ: ರಾಜ್ಯದಲ್ಲಿ 2.30 ಲಕ್ಷ ಗಿಗ್ ಕಾರ್ಮಿಕರು: ಪ್ರತಿ ವಹಿನಾಟಿನ ಮೇಲೆ ಶೇ 2ರವರೆಗೆ ಶುಲ್ಕ ಸಂಗ್ರಹ: ಕಲ್ಯಾಣ ಮಂಡಳಿ ರಚನೆ, ಕರ್ನಾಟಕ ರಾಜ್ಯ ಗಿಗ್ ವಿಮಾ ಯೋಜನೆ?



*'ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆ'ಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವುದಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು
*ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಭವಿಷ್ಯ ನಿಧಿ, ಅಪಘಾತ ಸೌಲಭ್ಯ, ವಸತಿ, ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ, ಕಾರ್ಮಿಕ ಕೌಶಲಾಭಿವೃದ್ಧಿ, ಅಂತ್ಯಸಂಸ್ಕಾರ ಧನ ಸಹಾಯ ನೀಡಲಾಗುವುದು.
"ಇದಕ್ಕಾಗಿ ಪ್ರತಿ ವಹಿವಾಟಿನ ಮೇಲೆ ಶೇ 1ರಿಂದ ಶೇ 2 ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುವುದು ಎಂದರು.
•ಪ್ಲಾಟ್ ಫಾರ್ಮ್ ಆಧಾರಿತ ಸೇವೆಗಳಾದ ಸ್ವಿಗ್ಗಿ, ಜೊಮಾಟೊಗಳಲ್ಲಿ ಫುಡ್ ಡೆಲವರಿ ಮಾಡುವ, ರೈಡ್ ಶೇರಿಂಗ್ ಸೇವೆಗಳಾದ ಓಲಾ, ಉಬರ್ ಮತ್ತು ನಮ್ಮ ಯಾತ್ರಿ ಇತ್ಯಾದಿ ಅಪ್ಲಿಕೇಷನ್ ಆಧಾರಿತ ಚಾಲಕರು, ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಸ್ಲಿಪ್ ಕಾರ್ಟ್, ಬಿಗ್ ಬಾಸ್ಕೆಟ್ ಮತ್ತಿತರ ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಅಥವಾ ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು, ಕಾರ್ಮಿಕ ಕಾನೂನುಗಳಡಿ ಲಭ್ಯವಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು
ಪಾಟೀಲ್ ತಿಳಿಸಿದರು
•ಗ್ ಕಾರ್ಮಿಕರು ಸರಕು ಸೇವೆಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಸೂಚಿಸಿದ ಸ್ಥಳಗಳಿಗೆ ವಾಹನಗಳಲ್ಲಿ ತೆರಳಿ ವಿತರಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಅಪಘಾತಕ್ಕೆ ಒಳಗಾಗಬಹುದು. ಆಪಘಾತದಿಂದ ಮರಣ, ಶಾಶ್ವತ ಅಂಗವೈಕಲ್ಯ ಹೊಂದಿದರೆ ಅವರು ಮತ್ತು ಅವರ ಅವಲಂಬಿತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಪ್ಲಾಟ್ ಫಾರ್ಮ್ ఆధార3 గిగా కామి౯ూడు గళ ఆవర కుటుంబడ వరిగి సామాజిక ಭದ್ರತೆ ಒದಗಿಸುವುದು ಸರ್ಕಾರದ ಹೊಣೆಗಾರಿಕೆ ಎಂದು ಹೇಳಿದರು.
"ದೇಶದ ದುಡಿಯುವ ವರ್ಗದಲ್ಲಿ ಶೇ 83ಕ್ಕೂ ಹೆಚ್ಚು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಇರುವುದಾಗಿ ಅಂದಾಜಿಸಲಾಗಿದೆ. ಅವರು ಶಾಸನಬದ್ದ ಸೌಲಭ್ಯಗಳಿಂದ ವಂಚಿತರಾಗದಂತೆ ಇವರ ಜೀವನ ಮಟ್ಟವನ್ನು
ಉತ್ತಮಪಡಿಸಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಕಾಯ್ದೆ ಅಗತ್ಯವಿದೆ. ರಾಜ್ಯದಲ್ಲಿ 2.30 ಲಕ್ಷ ಗಿಗ್ ಕಾರ್ಮಿಕರಿದ್ದಾರೆ ಎಂದರು.
•ಕಲ್ಯಾಣ ಮಂಡಳಿ ರಚನೆ: ನಿಧಿ ಸಂಗ್ರಹಣೆ, ನಿರ್ವಹಣೆ ಹಾಗೂ ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ 'ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಕಲ್ಯಾಣ ಮಂಡಳಿ' ಸ್ಥಾಪಿಸಲಾಗುವುದು ಎಂದು ಪಾಟೀಲ ತಿಳಿಸಿದರು.
2.ಸಂಪುಟ ಸಭೆಯಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಮಂಡನೆ: ಸಚಿವರಿಗೆ ವರದಿಯ ಪ್ರತಿ: ಏ.17ರಂದು ನಡೆಯಲಿರುವ ವಿಶೇಷ ಸಚಿದ ಸಂಪುಟ ಸಭೆಯಲ್ಲಿ ಸಮೀಕ್ಷೆ ಕುರಿತು ನಿರ್ಧಾರ; ವರದಿ ಅಧಿಕೃತ ಬಿಡುಗಡೆ ಆಗಿಲ್ಲ ?
ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ nad ಅಂದಿನ ಎಚ್. ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಸಮೀಕ್ಷೆಯ ಹೊಣೆಯನ್ನು ವಹಿಸಿದ್ದರು.
ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗವು, ಎಚ್. ಕಾಂತರಾಜ ಆಯೋಗದ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡು ನಡೆಸಿದ ಅಧ್ಯಯನ ವರದಿಯನ್ನು 2024ರ ಫೆಬ್ರುವರಿಯಲ್ಲಿ ಈಗಿನ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಅಧ್ಯಯನ ವರದಿ ಹಾಗೂ ಎಚ್. ಕಾಂತರಾಜ ಆಯೋಗದ ಸಮೀಕ್ಷೆಯ ಮಾಹಿತಿಗಳನ್ನು ಒಳಗೊಂಡ ಸಮಗ್ರ ದಾಖಲೆಗಳನ್ನು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು
ವರದಿಯ ಮುಖ್ಯಾಂಶ ಹಾಗೂ ಶಿಫಾರಸುಗಳಿರುವ ಮುಚ್ಚಿದ ಲಕೋಟೆ 1.02.566 ಯನ್ನು ಸಚಿವ ಸಂಪುಟ ಸಭೆಯಲ್ಲಿ ತೆರೆದು, ವಿವರಿಸುವ ಪ್ರಕ್ರಿಯೆ ನಡೆಯಿತು. ಬಳಿಕ, ವರದಿಯನ್ನು ಅಂಗೀಕರಿಸುವ ನಿರ್ಣಯವನ್ನು ಸಂಪುಟ
ಸಭೆ ಕೈಗೊಂಡಿತು. ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಎಲ್ಲ ಸಚಿವರಿಗೂ ವರದಿಯ ಮುಖ್ಯಾಂಶಗಳನ್ನು ಒಳಗೊಂಡ ಮಾಹಿತಿಯ ಪ್ರತಿ ನೀಡಲಾಗಿದೆ.
*ವರದಿ ಅಧಿಕೃತವಾಗಿ ಬಿಡುಗಡೆ ಆಗಿಲ್ಲವಾದರೂ ಹಲವು ಮಾಧ್ಯಮಗಳು ಲಭ್ಯವಾದ ಮಾಹಿತಿಯನ್ನು ಪ್ರಕಟಿಸಿವೆ.
*ರಾಜ್ಯದ 6.35 ಕೋಟಿ ಜನಸಂಖ್ಯೆ ಯಲ್ಲಿ 5.98 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. 1.35 ಕೋಟಿ ಕುಟುಂಬಗಳು ಅಂದರೆ, ಶೇ 94.17ರಷ್ಟು ಮಾಹಿತಿ ಸಂಗ್ರಹಣೆಯಲ್ಲಿ ಪಾಲ್ಗೊಂಡಿವೆ. 37 ಲಕ್ಷ ಜನರನ್ನು ಮಾತ್‌ರ ಸಮೀಕ್ಷೆ ಒಳಗೊಂಡಿಲ್ಲ.
'ಎಚ್.ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015 ನೇ ಏ.11ರಿಂದ ಸಮೀಕ್ಷೆ ಆರಂಭಿಸಿ 2015 ರ ಮೇ 3000 zemrTNA
*2015ರ ದತ್ತಾಂಶ ಬಳಸಿಕೊಂಡು ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ವರದಿಯನ್ನು ಸಿದ್ಧಪಡಿಸಿ, 2024ರ ಫೆಬ್ರುವರಿ 29ರಂದು ಸರ್ಕಾರಕ್ಕೆ ಸಲ್ಲಿಸಿತು.
*ಈ ಸಮೀಕ್ಷೆಯಡಿ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗಳ ಬಗ್ಗೆ 54 ಮಾನದಂಡಗಳನ್ನು ಒಳಗೊಂಡ ಕುಟುಂಬದ ಮಾಹಿತಿ ಸಂಗ್ರಹಿಸಲಾಯಿತು.
*ಲಭ್ಯವಾಗಿರುವ ಅಂಕಿ-ಅಂಶಗಳನ್ನು ಆಯಾ ಜಿಲ್ಲೆಯಲ್ಲಿಯೇ ಗಣಕೀಕರಣಗೊಳಿಸಲಾಗಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಸ್ಥೆಯ ಮೂಲಕ ಗಣಕೀಕರಣಕ್ಕಾಗಿ ₹43.09 ಕೋಟಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸಮೀಕ್ಷೆಗಾಗಿ ₹192,79 ಕೋಟಿ ಬಿಡುಗಡೆ ಮಾಡಿದ್ದು, ₹165.51 ಕೋಟಿ ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರ ₹7 ಕೋಟಿ ನೀಡಿದೆ.
*ಲಿಂಗಾಯತರು, ಒಕ್ಕಲಿಗರು, ಮುಸ್ಲಿಮರು, ಹಿಂದುಳಿದ ತಳ ಸಮುದಾಯಗಳೂ ಸೇರಿಕೊಂಡಂತೆ ಇತರೆ ಹಿಂದುಳಿದ ಜಾತಿಗಳ (ಒಬಿಸಿ) ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಮೀಸಲಾತಿಯನ್ನು ಮರುವರ್ಗೀಕರಣ ಮಾಡಿ, ಆಯಾ ಜಾತಿಯವರ ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.
*ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಈಗ ಶೇಕಡ 32 ಹಾಗೂ ಪರಿಶಿಷ್ಟ ಜಾತಿ-ಪಂಗಡದವರಿಗೆ ಶೇ 24.1ರಷ್ಟು ಮೀಸಲಾತಿ ಇದೆ, ಹಿಂದುಳಿದವರ ಮೀಸಲಾತಿಯನ್ನು ಶೇ 51ಕ್ಕೆ ಏರಿಸುವಂತೆ ಆಯೋಗ ತನ್ನ ಶಿಫಾರಸಿನಲ್ಲಿ ಹೇಳಿದೆ. ಅಲ್ಲದೆ ವರ್ಗೀಕರಣದಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ
ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಎರಡು ಸಮುದಾಯವರಿಗೆ ಮೀಸಲಾತಿ ಪ್ರಮಾಣವನ್ನು ತಲಾ ಶೇ 3ರಷ್ಟು ಹೆಚ್ಚಿಸುವಂತೆ ಆಯೋಗವು ತನ್ನ ಶಿಫಾರಸಿನಲ್ಲಿ ಹೇಳಿದೆ.
"ಕುರುಬ ಮತ್ತು ಇತರ ಕೆಲ ಸಮುದಾಯಗಳನ್ನು '2ಎ' ಯಿಂದ ತೆಗೆದು ಹೊಸತಾಗಿ ಮಾಡಿದ 'ಅತ್ಯಂತ ಹಿಂದುಳಿದ' ಪ್ರವರ್ಗ 1 'ಬಿ' ಗೆ ಸೇರಿಸಲಾಗಿದೆ.
'ಮುಸ್ಲಿಂ ಸಮುದಾಯದವರ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ 4ರಿಂದ ಶೇ 8ಕ್ಕೆ ಏರಿಸುವಂತೆ ಜಯಪ್ರಕಾಶ ಹೆಗ್ಡೆ ಆಯೋಗವು ತನ್ನ ಶಿಫಾರಸಿನಲ್ಲಿ ಹೇಳಿದೆ. ಮುಸ್ಲಿಂ ಸಮುದಾಯವರ ಜನಸಂಖ್ಯೆಯು ಒಂದು ಜಾತಿಯಾಗಿ 75.27 ಲಕ್ಷದಷ್ಟಿದೆ.
"ಮೊದಲ ಬಾರಿಗೆ ಪ್ರವರ್ಗ '" ಎ' ಗೆ ಕೆನೆಪದರ ನೀತಿ ಅನ್ವಯಿಸಲು ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ಆಧ್ಯಯನ ವರದಿಯಲ್ಲಿ ಶಿಫಾರಸು: ಇದೇ ಮೊದಲ ಬಾರಿಗೆ ಅಲೆಮಾರಿ ಹಾಗೂ ಅಲೆಮಾರಿ ಗುಣಲಕ್ಷಣಗಳಿರುವ ಅತ್ಯಂತ ಹಿಂದುಳಿದ 147 ಜಾತಿಗಳಿಗೆ ಕೆನೆಪದರ ನೀತಿ ಅನ್ವಯಿಸಬೇಕು ಹಾಗೂ ಆದಾಯ ತೆರಿಗೆಯ ಮಿತಿಯನ್ನು ಆಳವಡಿಸಬೇಕು ಎಂದು ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ತನ್ನ ಶಿಫಾರಸಿನಲ್ಲಿ ಹೇಳಿದೆ.
•ವರದಿಯ ಆಧ್ಯಾಯ-6ರಲ್ಲಿ (ಪುಟ 173) ಪ್ರವರ್ಗ 1 ಎ ಪಟ್ಟಿಯಲ್ಲಿ ಜಾತಿಯವರಿಗೆ 'ಕೆನೆಪದರ ನೀತಿ' ಜಾರಿ ಮಾಡುವುದು ಅತ್ಯಗತ್ಯ ಎಂದು ಪ್ರತಿಪಾದಿಸಲಾಗಿದೆ. ಇಲ್ಲಿಯವರೆಗೆ ಪ್ರವರ್ಗ 1 ಎ' ಎಂಬ ಪಟ್ಟಿ ಇರಲಿಲ್ಲ. ಇದೇ ಮೊದಲ ಬಾರಿಗೆ, ಪ್ರವರ್ಗ '1' ಹಾಗೂ ಪ್ರವರ್ಗ '2 ಎ' ಗಳಲ್ಲಿರುವ marivo ಅತ್ಯಂತ ಹಿಂದುಳಿದ ಮರುವರ್ಗೀಕರಿಸಲಾಗಿದೆ. ఎందు
•ಕರ್ನಾಟಕದಲ್ಲಿ ರಚಿಸಲಾಗಿದ್ದ ನಾಗನೂರು, ಎಲ್.ಜಿ. ಹಾವನೂರು, ವೆಂಕಟಸ್ವಾಮಿ, ಓ.ಚಿನ್ನಪ್ಪರೆಡ್ಡಿ, ಪ್ರೊ.ರವಿವರ್ಮಕುಮಾರ್, ಸಿ.ಎಸ್ ದ್ವಾರಕನಾಥ್, ಶಂಕರಪ್ಪ ನೇತೃತ್ವದ ಆಯೋಗಗಳು ಸೇರಿದಂತೆ ಯಾವುದೇ ಆಯೋಗವು ಪ್ರವರ್ಗ | ರಲ್ಲಿದ್ದ ಜಾತಿಗಳಿಗೆ ಕೆನೆಪದರ ನೀತಿ ಹಾಗೂ ಆದಾಯ ತೆರಿಗೆ ಮಿತಿಯನ್ನು ಹೇರುವಂತೆ ಶಿಫಾರಸು ಮಾಡಿರಲಿಲ್ಲ.
•2002ರಲ್ಲಿ ಕೆನೆಪದರ ನೀತಿಯನ್ನು ಪ್ರಕಟಿಸಿದಾಗ, ಶಿಕ್ಷಣ ಹಾಗೂ ನೇಮಕಾತಿ ಗಳಲ್ಲಿ ಮೀಸಲಾತಿಯಲ್ಲಿ ಕೆನೆಪದರದವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1ರಲ್ಲಿನ ಜಾತಿಗಳಿಗೆ ಅನ್ವಯಿಸುವು ದಿಲ್ಲ ಎಂದು ಹೇಳಲಾಗಿತ್ತು. ಆಗ, 95 ಜಾತಿ ಹಾಗೂ ಅದರ ಉಪಜಾತಿಗಳನ್ನು ಸೇರಿಸಲಾಗಿತ್ತು. ಈಗ ಜಾತಿ/ ಉಪಜಾತಿಗಳಿಗೆ ಪ್ರತ್ಯೇಕ ಸಂಖ್ಯೆ ನಮೂದಿಸಿ ಅದನ್ನು 147ಕ್ಕೆ ಹಿಗ್ಗಿಸಲಾಗಿದೆ.
3.ಕೆಐಎ ಮೈಲುಗಲ್ಲು: 4.10 ಕೋಟಿ ಮಂದಿ ಪ್ರಯಾಣ, ರಾಷ್ಟ್ರೀಯ ಪ್ರಯಾಣಿಕರ ಪ್ರಯಾಣ ಸಂಖ್ಯೆಯಲ್ಲಿ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ: ಐದು ಲಕ್ಷ ಟನ್ ಸರಕು ಸಾಗಣೆ
•ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2024-25 ಹಣಕಾಸು ವರ್ಷದಲ್ಲಿ 4.10 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಮತ್ತು ಐದು ಲಕ್ಷ ಟನ್ ಸರಕು ಸಾಗಣೆ ಮಾಡಲಾಗಿದೆ.
•ದೇಶೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ10ರಷ್ಟು ಏರಿಕೆಯಾಗುವ ಮೂಲಕ 3.60 ಕೋಟಿ ತಲುಪಿದೆ.
•ಅಂತರ ರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 25ರಷ್ಟು ಹೆಚ್ಚಳವಾಗುವ ಮೂಲಕ 50.83 ಲಕ್ಷ ತಲುಪಿದೆ.
•2023-24ರಲ್ಲಿ 3.75 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದರು. ಅದಕ್ಕೆ ಹೋಲಿಸಿದರೆ 2024-25 ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆ ಶೇ 11.6ರಷ್ಟು ಹೆಚ್ಚಳವಾಗಿದೆ.
•ಈ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದ್ದು, ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಮೈಲುಗಲ್ಲು ಸೃಷ್ಟಿಸಿದೆ.
•ನಾಲ್ಕು ತಿಂಗಳಲ್ಲಿ ಅಂತರ ರಾಷ್ಟ್ರೀಯ ಪ್ರಯಾಣಿಕರ ಪ್ರಯಾಣ ಸಂಖ್ಯೆಯಲ್ಲಿ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
•ಮಾವು ಕೊತ್ತಂಬರಿ ರವಿನಲ್ಲಿ ಮುಂಚೂಣಿ: ಬೆಂಗಳೂರು ವಿಮಾನ ನಿಲ್ದಾಣವು ಮಾವು ಮತ್ತು ಕೊತ್ತಂಬರಿ ಸೊಪ್ಪು ರಪ್ತಿನಲ್ಲಿ ಮುಂಚೂಣಿಯಲ್ಲಿದೆ.
•ಸಿದ್ಧ ಉಡುಪು, ಔಷಧ ಮತ್ತು ಯಂತ್ರೋಪಕರಣ, ಬಿಡಿ ಭಾಗಗಳ ಸಾಗಣೆ ಹೆಚ್ಚಳವಾಗಿದೆ. ಸರಕು ಸಾಗಣೆಗೆ ಮೀಸಲಾದ 12 ವಿಮಾನಯಾನ ಸಂಸ್ಥೆಗಳು ಬೆಂಗಳೂರಿನಿಂದ ಸಿಂಗಾಪುರ, ಲಂಡನ್, ಫ್ರಾಂಕ್ ಫರ್ಟ್, ಷಿಕಾಗೊ ಮತ್ತು ಮಸ್ಕತ್‌ನಂತಹ ಪ್ರಮುಖ ರಫ್ತು ಕೇಂದ್ರಿತ ನಗರಗಳನ್ನು ಸಂಪರ್ಕಿಸುತ್ತದೆ.
•ಸಿಂಗಾಪುರ, ಶಾಂಫೈ, ಹಾಂಗ್ ಕಾಂಗ್ ಮತ್ತು ಫ್ರಾಂಕ್ ಫರ್ಟ್ ನಗರಗಳು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಸರಕುಗಳು ಆಮದಾಗುವ ಪ್ರಮುಖ ತಾಣಗಳಾಗಿವೆ.
•ನೇರ ವಿಮಾನ: 33 ಅಂತರರಾಷ್ಟ್ರೀಯ ನಿಲ್ದಾಣಗಳಿಗೆ ಬೆಂಗಳೂರಿನಿಂದ ವಿಮಾನ ಸಂಚರಿಸುತ್ತವೆ. ಇದೇ ಮೇ ತಿಂಗಳಿನಿಂದ ವಿಯೆಟ್ನಾಂ రాజధాని ಹನೋಯಿಗೆ ನೇರ ವಿಮಾನ ಸಂಚಾರ ಆರಂಭವಾಗಲಿದೆ.
4.ಕನ್ನಡ ಪುಸ್ತಕ ಪ್ರಾಧಿಕಾರದಿಂದ 2022, 2023 ಮತ್ತು 2024ನೇ ಸಾಲಿನ 'ಪುಸ್ತಕ ಸೊಗಸು' ಹಾಗೂ 'ಮುದ್ರಣ ಸೊಗಸು 'ಪ್ರಶಸ್ತಿ ಪ್ರಕಟ
ಬಹುಮಾನಕ್ಕೆ 'ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್ ಗದ್ಯ ಗಾರುಡಿ'- ಕೇಶವ ಮಳಗಿ (ದೀಪಂಕರ ಪುಸ್ತಕ ಪ್ರಕಾಶನ ಸಂಸ್ಥೆ, ತುಮಕೂರು), 'ಅಧಿಷ್ಠಾನ ಬಾಯಿಪಾಠ ಪುಸ್ತಕ' -ಜಿ.ಕೆ.ದೇವರಾಜಸ್ವಾಮಿ (ಯುವಸಾಧನೆ ಪ್ರಕಾಶನ, ಬೆಂಗಳೂರು), ಅರಸು ಕುರನ್ಯರಾಯ' ರವಿಕುಮಾರ್ ನೀಹ (ಜಲಜಂಬೂ ಲಿಂಕ್ಸ್ ಪ್ರಕಾಶನ, ತುಮಕೂರು) ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಆಯ್ಕೆಯಾಗಿವೆ.
"ಮಕ್ಕಳ ಮಸ್ತಕ ಸೊಗಸು ಬಹುಮಾನಕ್ಕೆ 'ಮಲ್ಲಿಗೆ' - ಕುರುವ ಬಸವರಾಜ್ (ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು) ಮುಖಪುಟ ವಿನ್ಯಾಸ ಬಹುಮಾನಕ್ಕೆ 'ಆಮೂಲ್ಯ ಮತ್ತು ಡಾ.ರಾಜಕುಮಾರ್ ಕುರಿತ ನೂರಾರು ಚುಕ್ಕಿ ಚಿತ್ರ ಸಂಪುಟ'-ಎಚ್.ಎಚ್.ಮ್ಯಾದಾರ್ (ಬಹುಮಾನಿತ ಕಲಾವಿದೆ: రాయKOR ಎಚ್.ಎಚ್.ಮ್ಯಾದಾರ್), ಮುಖಪುಟ ಚಿತ್ರಕಲೆ ಬಹುಮಾನಕ್ಕೆ 'ಮಾಧವಿ ಕಥನ- ಕಥನ ಕಾವ್ಯ'-ಪಾರ್ವತಿ ಜಿ.ಐತಾಳ್ (ಬಹುಮಾನಿತ ಕಲಾವಿದೆ: ಮಣಿಪಾಲದ ರೇವತಿ ನಾಡಿಗೇರ್), ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಚಿಟ್ಟೆ-ಏಕವ್ಯಕ್ತಿ ಮಕ್ಕಳ ನಾಟಕ ಬೇಲೂರು ರಘುನಂದನ್ (ಯಂತ್ರೋದ್ಧಾರಕ, ಬೆಂಗ ಬೆಂಗಳೂರು) ಆಯ್ಕೆಯಾಗಿದೆ.
•2023ನೇ ವರ್ಷದ ಬಹುಮಾನ: 'ಪುಸ್ತಕ ಸೊಗಸು' ಬಹುಮಾನಕ್ಕೆ 'ದೃಶ್ಯಕಲಾ ಕಮಲ'-'ಡಾ.ಆರ್.ಎಚ್.ಕು ಕುಲಕರ್ಣಿ ఎడో.ఎ. ಕುಮಾರ್ (ಬೆಂಗಳೂರು ಆರ್ಟ್ ಫೌಂಡೇಷನ್ ಪ್ರಕಾಶನ, ಬೆಂಗಳೂರು), 'ಕಾಡುಗೊಲ್ಲ ಬುಡಕಟ್ಟು ಕುಲಕಥನ' -ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ (ಗೀತಾಂಜಲಿ ಪ್ರಕಾಶನ, ಶಿವಮೊಗ್ಗ). 'ಚಿತ್ರ ಭಿತ್ತಿ'-ಡಾ.ಮಲ್ಲಿಕಾರ್ಜುನ ಸಿ. ಬಾಗೋಡಿ (ಸರಚಂದ್ರ ಪ್ರಕಾಶನ, ಕಲಬುರಗಿ) ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಆಯ್ಕೆಯಾಗಿವೆ. ఎ. అనిలా
•'ಮಕ್ಕಳ ಪುಸ್ತಕ ಸೊಗಸು' ಬಹುಮಾನಕ್ಕೆ 'ಬಾಲ ಮಂದಾರ'-ಪರವೀನ್ ಬಾನು ಎಂ. ಶೇಖ (ಕಥಾಬಿಂದು ಪ್ರಕಾಶನ, ಮಂಗಳೂರು), ಮುಖಮಟ ವಿನ್ಯಾಸ ಬಹುಮಾನಕ್ಕೆ 'ಬ್ಯೂಟಿ ಬೆಳ್ಳಕ್ಕಿ ಮಕ್ಕಳ ಕಥೆಗಳು'-ಡಾ. ಲಲಿತಾ ಕೆ. ಹೊಸಪ್ಪಾಟಿ (ಬಹುಮಾನಿತ ಕಲಾವಿದ ಸಂತೋಷ್ ಸಸಿಹಿತ್ತು), ಮುಖಪುಟ ಚಿತ್ರಕಲೆಯ ಬಹುಮಾನಕ್ಕೆ 'ಬಿಡಾರ ಆತ್ಮಕಥೆ'-ಚಂದ್ರಕಾಂತ ಪೋಕಳೆ (ಬಹುಮಾನಿತ ಕಲಾವಿದ ಡಿ.ಕೆ.ರಮೇಶ್), ಪುಸ್ತಕ ಮುದ್ರಣ ಸೊಗಸು
ಬಹುಮಾನಕ್ಕೆ ಕಂಬದಹಳ್ಳಿ ಕಂಬಾಪುರಿಯ ಪಂಚಕೂಟ ಬಸದಿ'-ಡಾ.ಎಸ್.ಗುರುಮೂರ್ತಿ (ಜ್ವಾಲಾಮುಖಿ ಮುದ್ರಣಾಲಯ ಪ್ರೈ.ಲಿ. ಬೆಂಗಳೂರು) ಕೃತಿ ಆಯ್ಕೆಯಾಗಿವೆ.
*2024ನೇ ವರ್ಷದ ಬಹುಮಾನ: 'ಪುಸ್ತಕ ಸೊಗಸು ಬಹುಮಾನಕ್ಕೆ 'ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು ಸಂಪುಟಗಳು'-ಪ್ರೊ.ಕೆ.ಸಿ.ಶಿವಾರೆಡ್ಡಿ (ಎಂ.ಮುನಿಸ್ವಾಮಯ್ಯ ಆ್ಯಂಡ್ ಸನ್ಸ್ ಪಬ್ಲಿಷರ್ಸ್ ಆಂಡ್ ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು), 'ಶಕ್ತಿನದಿ ಶರಾವತಿ'-ಕೆ.ಸಿ.ಶ್ರೀನಾಥ್ (ಅನಿಮಿಷ ಪ್ರಕಾಶನ, ದಾವಣಗೆರೆ), 'ಕಾಡು ಹುಡುಗನ ಹಾಡು ಪಾಡು'-ಸ್ವಾಮಿ ಪೊನ್ನಾಚಿ (ಆಮೂಲ್ಯ ಪ್ರಕಾಶನ, ಬೆಂಗಳೂರು) ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಆಯ್ಕೆಯಾಗಿವೆ.
''ಮಕ್ಕಳ ಪುಸ್ತಕ ಸೊಗಸು' ಬಹುಮಾನಕ್ಕೆ 'ಕನ್ನಡ ನುಡಿ ಚಂದ ಚಿಲಿಪಿಲಿ ಶ್ರೀಗಂಧ'- ಚಂದ್ರಗೌಡ ಕುಲಕರ್ಣಿ (ಚಿಲಿಪಿಲಿ ಪ್ರಕಾಶನ, ಧಾರವಾಡ), ಮುಖಪುಟ ಚಿತ್ರವಿನ್ಯಾಸ ಬಹುಮಾನಕ್ಕೆ 'ಮಾತಿಗಿಳಿದ ಚಿತ್ರ'- ಲಕ್ಷಣ ಬಾದಾಮಿ (ಬಹುಮಾನಿತ ಕಲಾವಿದೆ: ಬಾಗಲಕೋಟೆಯ ಲಕ್ಷಣ ಬಾದಾಮಿ), ಮುಖಪುಟ ಚಿತ್ರಕಲೆಯ ಬಹುಮಾನಕ್ಕೆ 'ಬಣಮಿ'-ಕಪಿಲ.ಪಿ.ಹುಮನಾಬಾದೆ (ಬಹುಮಾನಿತ ಕಲಾವಿದ ಮದನ್ ಸಿ.ಪಿ) ಮತ್ತು 'ಪುಸ್ತಕ ಮುದ್ರಣ ಸೊಗಸು' ಬಹುಮಾನಕ್ಕೆ 'ಮತ್ತೆ ಮತ್ತೆ ಶಂಕರಗೌಡ ತಲೆಮಾರಿನಂತರದ ಮನಸುಗಳ ಇಂಕು-ನೋಟ'- ಡಾ. ಶ್ರೀನಿವಾಸಯ್ಯ ಎನ್.ವೈ ಮತ್ತು ಎಂ.ಯು.ಶ್ವೇತ (ಅವಿನಾಶ್ ಗ್ರಾಫಿಕ್ಸ್, ಮಂಡ್ಯ) ಕೃತಿ ಆಯ್ಕೆಯಾಗಿವೆ.
* 'ಪುಸ್ತಕ ಸೊಗಸು' ಪ್ರಥಮ ₹25 ಸಾವಿರ, ದ್ವಿತೀಯ * 20 ಸಾವಿರ ಮತ್ತು ತೃತೀಯ ಬಹುಮಾನ ₹10 ಸಾವಿರ ನಗದು ಒಳಗೊಂಡಿದೆ. ಮಕ್ಕಳ ಪುಸ್ತಕ ಸೊಗಸು ₹8 ಸಾವಿರ, ಮುಖಪುಟ ಚಿತ್ರ ವಿನ್ಯಾಸ ₹10 ಸಾವಿರ, ಮುಖಪುಟ ಚಿತ್ರಕಲೆ ₹8 ಸಾವಿರ ಮತ್ತು ಪುಸ್ತಕ ಮುದ್ರಣ ಸೊಗಸು ಬಹುಮಾನ 5 ಸಾವಿರ ನಗದು ಒಳಗೊಂಡಿದೆ
ರಾಷ್ಟ್ರೀಯ
5. ಹದಿನೈದು ದಿನಗಳ ಅಂತರದಲ್ಲಿ ಮೂರನೇ ಬಾರಿಗೆ ಯುಪಿಐ ಸೇವೆಯಲ್ಲಿ ಅಡ್ಡಿ
ದೇಶದಾದ್ಯಂತ ಏಪ್ರಿಲ್ 12 ರಂದು ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಪಾವತಿ ಸೇವೆಯಲ್ಲಿ ದಿಢೀರ್ ಸಮಸ್ಯೆಯಿಂದಾಗಿ ಗ್ರಾಹಕರು ಅನುಭವಿಸಿದರು. ವರ್ತಕರು ಪೇಚಾಟ
*ಗೂಗಲ್ ಪೇ, ಪೇಟಿಎಂ, ಪೋನ್ ಪೇ ಸೇರಿದಂತೆ ಡಿಜಿಟಲ್ ಪಾವತಿ ಆ್ಯಪ್‌ಗಳ ಕಾರ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಕಳೆದ ಹದಿನೈದು ದಿನಗಳ
ಅಂತರದಲ್ಲಿ ಮೂರನೇ ಬಾರಿಗೆ ಯುಪಿಐ ಸೇವೆಯಲ್ಲಿ ಅಡ್ಡಿ ಉಂಟಾಗಿದೆ. ಮಾರ್ಚ್ 26 ಮತ್ತು ಏಪ್ರಿಲ್ 2ರಂದು ತಾಂತ್ರಿಕ ಸಮಸ್ಯೆ ಇಣುಕಿತ್ತು.
"ಆನ್‌ಲೈನ್ ಸೇವೆ ಬಗ್ಗೆ ಮಾಹಿತಿ ಒದಗಿಸುವ ಡೌನ್ಡೆಕ್ಟರ್ ವೆಬ್‌ಸೈಟ್ ಪ್ರಕಾರ, ಬೆಳಿಗ್ಗೆ 11.30ರ ಸುಮಾರಿಗೆ ಯುಪಿಐ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿದ್ದು, ಸುಸ್ಥಿಗೆ ಬರಲು ಸಂಜೆಯಾಗಿದೆ.
"ಯುಪಿಐ ಅನ್ನು ರಾಷ್ಟ್ರೀಯ ಪಾವತಿ ನಿಗಮವು (ಎನ್ಪಿಸಿಐ) ಅಭಿವೃದ್ಧಿಪಡಿಸಿದೆ.
6.ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಬಗ್ಗೆ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು; ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಗೆ ಗಡುವು ನಿಗದಿಪಡಿಸಿದ ಸುಪ್ರೀಂ ಕೋರ್ಟ್
*ಸುಪ್ರೀಂ ಕೋರ್ಟ್ ಮೊದಲ ಬಾರಿಗೆ, ರಾಜ್ಯ ಶಾಸಕಾಂಗಗಳು ಮಂಡಿಸಿದ ಮಸೂದೆಗಳನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿದ ಮಸೂದೆಗಳ ಬಗ್ಗೆ ಅಂತಹ ಉಲ್ಲೇಖವನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ಅವಧಿಯೊಳಗೆ ರಾಷ್ಟ್ರಪತಿಗಳು DOFO ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
*ಈ ಅವಧಿಯನ್ನು ಮೀರಿ ಯಾವುದೇ ವಿಳಂಬವಾದರೆ, ಸೂಕ್ತ ಕಾರಣಗಳನ್ನು ದಾಖಲಿಸಿ ಸಂಬಂಧಪಟ್ಟ ರಾಜ್ಯಕ್ಕೆ ತಿಳಿಸಬೇಕು' ಎಂದು ಅದು ಹೇಳಿದೆ.
*ಮಸೂದೆಗಳ ವಿಲೇವಾರಿ ಬಗ್ಗೆ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್ ಗಡುವು ನಿಗದಿಪಡಿಸಿದೆ.
*ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗೆ ಅಂಕಿತ ಹಾಕದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿ ಕುರಿತು ತೀರ್ಪನ್ನು ನೀಡುವಾಗ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರ ಪೀಠವು, 201ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ಕಾರ್ಯನಿರ್ವಹಣೆಯು ಪರಿಶೀಲನೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿದೆ. ನ್ಯಾಯಾಂಗ
*ರಾಷ್ಟ್ರಪತಿಗಳ ಪರಿಗಣನೆಗೆ ಮಸೂದೆಯನ್ನು ಕಾಯ್ದಿರಿಸುವುದು ಪ್ರಜಾಪ್ರಭುತ್ವದ ತತ್ವಗಳಿಗೆ ದೊಡ್ಡ ಅಪಾಯದ ಆಧಾರದ ಮೇಲೆ ಮತ್ತು ಸ್ಪಷ್ಟವಾಗಿ ನಿಗದಿಪಡಿಸಿದ ಕಾರಣಗಳೊಂದಿಗೆ ಮಾತ್ರ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
*ವೈಯಕ್ತಿಕ ಅತೃಪ್ತಿ, ರಾಜಕೀಯ ಲಾಭ ಅಥವಾ ಯಾವುದೇ ಇತರ "ಬಾಹ್ಯ ಅಥವಾ ಅಪ್ರಸ್ತುತ ಪರಿಗಣನೆಗಳು' ಮುಂತಾದ ಆಧಾರದ ಮೇಲೆ ರಾಜ್ಯಪಾಲರು
ಕಾಯ್ದಿರಿಸುವುದು ಸಂವಿಧಾನದಿಂದ ಕಟ್ಟುನಿಟ್ಟಾಗಿ ಅನುಮತಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
"ರಾಜ್ಯಪಾಲರು ರಾಷ್ಟ್ರಪತಿಗಳ zoran ಮಸೂದೆಯನ್ನು ಕಾಯ್ದಿರಿಸಿದರೆ ಮತ್ತು ರಾಷ್ಟ್ರಪತಿಗಳು ಅದಕ್ಕೆ ಒಪ್ಪಿಗೆ ನೀಡದಿದ್ದರೆ, ಈ ನ್ಯಾಯಾಲಯದ ಮುಂದೆ ಅಂತಹ ಕ್ರಮವನ್ನು ಪ್ರಶ್ನಿಸಲು ರಾಜ್ಯ ಸರ್ಕಾರಕ್ಕೆ ಮುಕ್ತವಾಗಿರುತ್ತದೆ' ಎಂದು ಅದು ಹೇಳಿದೆ.
*ಪೀಠದ ಪರವಾಗಿ ಬರೆಯುತ್ತಾ ನ್ಯಾಯಮೂರ್ತಿ ಪಾರ್ದಿವಾಲಾ, 201 ನೇ ವಿಧಿಯ ಅಡಿಯಲ್ಲಿ, ರಾಜ್ಯಪಾಲರು ಮಸೂದೆಯನ್ನು ತಮ್ಮ ಪರಿಗಣನೆಗೆ ಕಾಯ್ದಿರಿಸಿದ ನಂತರ ರಾಷ್ಟ್ರಪತಿಗಳಿಗೆ ಎರಡು ಆಯ್ಕೆಗಳಿವೆ - ಒಪ್ಪಿಗೆ ನೀಡುವುದು ಅಥವಾ ತಡೆಹಿಡಿಯುವುದು ಎಂದು ಗಮನಿಸಿದರು.
*ಸರ್ಕಾರಿಯಾ ಆಯೋಗವು ಇದನ್ನು ಎತ್ತಿ ತೋರಿಸಿದೆ ಮತ್ತು '201 ನೇ ವಿಧಿಯ ಅಡಿಯಲ್ಲಿ ಉಲ್ಲೇಖಗಳ ಪರಿಣಾಮಕಾರಿ ವಿಲೇವಾರಿಗೆ ಅನುಕೂಲವಾಗುವಂತೆ ನಿರ್ದಿಷ್ಟ ಸಮಯಸೂಚಿಗಳನ್ನು ಆಳವಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ' ಮತ್ತು '201 ನೇ ವಿಧಿಯಲ್ಲಿ ಸಮಯಸೂಚಿಯನ್ನು ಓದುವುದನ್ನು ಮುಂಚಿ ಆಯೋಗವು ಸಹ ಸೂಚಿಸಿದೆ' ಎಂದು ಅದು ಹೇಳಿದೆ.
*ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಆರ್.ಎಸ್ ಸರ್ಕಾರಿಯಾ ನೇತೃತ್ವದ ಸರ್ಕಾರಿಯಾ ಆಯೋಗವನ್ನು 1983 ರಲ್ಲಿ ಸ್ಥಾಪಿಸಲಾಯಿತು. ಮಂಚಿ ಆಯೋಗವು ಕೇಂದ್ರ-ರಾಜ್ಯ ಸಂಬಂಧಗಳ ಕುರಿತಾಗಿತ್ತು ಮತ್ತು 2007 ರಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎಂಎಂ ಪುಂಚ ಅವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು.
*ಮೂರು ತಿಂಗಳ ಕಾಲಮಿತಿ ಕುರಿತು 2016 ರ ಗೃಹ ಸಚಿವಾಲಯದ ಎರಡು ಕಚೇರಿ ಸ್ಥಾಪಕ ಪತ್ರಗಳ ಉಲ್ಲೇಖ: ಈ ಸಂದರ್ಭದಲ್ಲಿ ನ್ಯಾಯಾಲಯವು, ಫೆಬ್ರವರಿ 4, 2016 ರಂದು ಗೃಹ ಸಚಿವಾಲಯವು ಭಾರತ ಸಚಿವಾಲಯಗಳು/ಇಲಾಖೆಗಳಿಗೆ "ರಾಷ್ಟ್ರಪತಿಗಳ ಅನುಮೋದನೆಗಾಗಿ ಕಾಯ್ದಿರಿಸಿದ ರಾಜ್ಯ ಮಸೂದೆಗಳ ತ್ವರಿತ ವಿಲೇವಾರಿ" ಕುರಿತು ಹೊರಡಿಸಿದ ಎರಡು ಕಚೇರಿ ಜ್ಞಾಪಕ ಪತ್ರಗಳನ್ನು (OMs) ಉಲ್ಲೇಖಿಸಿತು.
''ಕೇಂದ್ರ ಸಚಿವಾಲಯಗಳು/ಇಲಾಖೆಗಳು/ರಾಜ್ಯ ಸರ್ಕಾರಗಳು ರಾಜ್ಯ ಶಾಸಕಾಂಗ ಪ್ರಸ್ತಾವನೆಗಳನ್ನು ತ್ವರಿತವಾಗಿ ಪರಿಶೀಲಿಸಿ ವಿಲೇವಾರಿ ಮಾಡುವ ಮೊದಲ OM ಅನ್ನು ಪರಿಶೀಲಿಸುವುದರಿಂದ ರಾಷ್ಟ್ರಪತಿಗಳಿಗೆ ಮೀಸಲಾಗಿರುವ ಮಸೂದೆಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ಮೂರು ತಿಂಗಳ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸುತ್ತದೆ.
ತುರ್ತು ಸ್ವಭಾವದ ಸುಗ್ರೀವಾಜ್ಞೆಗಳ ವಿಲೇವಾರಿಗೆ ಮೂರು ವಾರಗಳ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ" ಎಂದು ಅದು ಹೇಳಿದೆ.
*ಮಾರ್ಗಸೂಚಿಗಳನ್ನು ಪರಿಶೀಲಿಸಿದ ನಂತರ, 201ನೇ ವಿಧಿಯ ತುರ್ತು ಮತ್ತು ಮಹತ್ವದ ಸ್ವರೂಪವನ್ನು ಗುರುತಿಸಿ, ಕೇಂದ್ರ ಸರ್ಕಾರವು ಸಮಯ ಮಿತಿಗಳು ಮತ್ತು 201ನೇ ವಿಧಿಯ ಅಡಿಯಲ್ಲಿ ಉಲ್ಲೇಖಗಳನ್ನು ವಿಲೇವಾರಿ ಮಾಡುವ ನಿರೀಕ್ಷೆಯ ವಿಧಾನದ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿದೆ ಎಂಬುದು ಸ್ಪಷ್ಟವಾಗುತ್ತದೆ" ಮತ್ತು "ಅದರ (OMs) ಅಸ್ತಿತ್ವ ಮತ್ತು ಸ್ವೀಕಾರದ ಸಂಗತಿಯು ತ್ವರಿತ ಅಥವಾ ಕಟ್ಟುನಿಟ್ಟಾದ ಸಮಯ-ಬದ್ಧ ಕ್ರಮದ ಅವಶ್ಯಕತೆಯು 201ನೇ ವಿಧಿಯ ಗುರಿ ಮತ್ತು ಉದ್ದೇಶಕ್ಕೆ ಅನುಗುಣವಾಗಿರುತ್ತದೆ ಎಂದು ಬಹಿರಂಗಪಡಿಸುತ್ತದೆ' ಎಂದು ತೀರ್ಪು ಹೇಳಿದೆ.
*ಸರಕಾರಿಯಾ ಮತ್ತು ಪುಂಚಿ ಆಯೋಗಗಳು ಕ್ರಮವಾಗಿ ಮಾಡಿದ ಶಿಫಾರಸುಗಳು ಮತ್ತು ಕೇಂದ್ರ ಸರ್ಕಾರವು ಸಾಮೂಹಿಕವಾಗಿ ರೂಪಿಸಿದ ಮಾರ್ಗಸೂಚಿಗಳು ರಾಷ್ಟ್ರಪತಿಗಳ ಪಾತ್ರದ ಪ್ರಾಮುಖ್ಯತೆಯ ಜೊತೆಗೆ 201 ನೇ ವಿಧಿಯ ಅಡಿಯಲ್ಲಿ ಉಲ್ಲೇಖಗಳ ವಿಲೇವಾರಿಯಲ್ಲಿ ಒಳಗೊಂಡಿರುವ ಸದುಪಯೋಗವನ್ನು ಸೂಚಿಸುತ್ತವೆ. ಈ ಹಿನ್ನೆಲೆಯಲ್ಲಿ, ಸಾಂವಿಧಾನಿಕ ಪ್ರಾಧಿಕಾರವು ತನ್ನ ಕಾರ್ಯವನ್ನು ಸಮಂಜಸವಾದ ಸಮಯದಲ್ಲಿ ನಿರ್ವಹಿಸದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಅಧಿಕಾರಹೀನವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ" ಎಂದು ಅದು ಹೇಳಿದೆ.
“ಆದ್ದರಿಂದ, ಮೇಲೆ ತಿಳಿಸಿದ ಮಾರ್ಗಸೂಚಿಗಳಲ್ಲಿ ಗೃಹ ಸಚಿವಾಲಯವು ನಿಗದಿಪಡಿಸಿದ ಸಮಯವನ್ನು ಆಳವಡಿಸಿಕೊಳ್ಳುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ ಮತ್ತು ಅಂತಹ ಉಲ್ಲೇಖವನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳ ಅವಧಿಯೊಳಗೆ ರಾಷ್ಟ್ರಪತಿಗಳು ರಾಜ್ಯಪಾಲರಿಂದ ಪರಿಗಣನೆಗೆ ಕಾಯ್ದಿರಿಸಲಾದ ಮಸೂದೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸೂಚಿಸುತ್ತೇವೆ. ಈ ಅವಧಿಯನ್ನು ಮೀರಿ ಯಾವುದೇ ವಿಳಂಬವಾದರೆ, ಸೂಕ್ತ ಕಾರಣಗಳನ್ನು ದಾಖಲಿಸಿ ಸಂಬಂಧಪಟ್ಟ ರಾಜ್ಯಕ್ಕೆ ತಿಳಿಸಬೇಕು. ರಾಜ್ಯಗಳು ಸಹ ಸಹಯೋಗದಿಂದಿರಬೇಕು ಮತ್ತು ಎತ್ತಬಹುದಾದ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸುವ ಮೂಲಕ ಸಹಕಾರವನ್ನು ವಿಸ್ತರಿಸಬೇಕು ಮತ್ತು ಕೇಂದ್ರ ಸರ್ಕಾರವು ಮಾಡಿದ ಸಲಹೆಗಳನ್ನು ತ್ವರಿತವಾಗಿ ಪರಿಗಣಿಸಬೇಕು."
"ರಾಜ್ಯಪಾಲರ ಪ್ರಕರಣದಂತೆ, ರಾಷ್ಟ್ರಪತಿಗಳಿಗೂ ಸಂಪೂರ್ಣ ವೀಟೋ ಚಲಾಯಿಸುವ ಅಧಿಕಾರವಿಲ್ಲ ಮತ್ತು ಆದ್ದರಿಂದ ಒಪ್ಪಿಗೆಯನ್ನು ತಡೆಹಿಡಿಯುವ ನಿರ್ಧಾರವು "ತಡೆಹಿಡಿಯುವಿಕೆಗೆ ಆಗತ್ಯವಿರುವ ಉತ್ತಮ ಮತ್ತು ನಿರ್ದಿಷ್ಟ ಕಾರಣಗಳೊಂದಿಗೆ" ಇರಬೇಕು ಎಂದು ತೀರ್ಪು ಹೇಳಿದೆ.
7.ಕೈಗಾರಿಕಾ ಉತ್ಪಾದನೆ ಕುಂಠಿತ
*ದೇಶದ ಕೈಗಾರಿಕಾ ಉತ್ಪಾದನಾ ಪ್ರಗತಿಯು ಫೆಬ್ರುವರಿ ತಿಂಗಳಲ್ಲಿ ಅರು ತಿಂಗಳ ಕನಿಷ್ಠ ಮಟ್ಟವಾದ ಶೇ 2.9ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ సాంక శతి (ఎనా ఎనోఒ) తెళ్ళదో.
*ಕಳೆದ ವರ್ಷದ ಫೆಬ್ರುವರಿಯಲ್ಲಿ ಶೇ 5.6ರಷ್ಟು ದಾಖಲಾಗಿತ್ತು. ತಯಾರಿಕಾ, ಗಣಿಗಾರಿಕೆ ಮತ್ತು ವಿದ್ಯುತ್ ವಲಯದಲ್ಲಿನ ಮಂದಗತಿ ಬೆಳವಣಿಗೆಯೇ ಇದಕ್ಕೆ ಕಾರಣ ಎಂದು ತಿಳಿಸಿದೆ.
*ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಈ ಪ್ರಗತಿಯನ್ನು ಲೆಕ್ಕ ಹಾಕಲಾಗುತ್ತದೆ. ಗಣಿಗಾರಿಕೆ ಶೇ 1.6, ತಯಾರಿಕೆ ಶೇ 2.9 ಮತ್ತು ವಿದ್ಯುತ್ ವಲಯದ ಪ್ರಗತಿಯು ಶೇ 3.6ಕ್ಕೆ ಇಳಿದಿದೆ.
*2024-25ನೇ ಆರ್ಥಿಕ ವರ್ಷದ ಏಪ್ರಿಲ್-ಫೆಬ್ರುವರಿಯಲ್ಲಿ ಐಐಸಿ ಬೆಳವಣಿಗೆ ಶೇ 4.1ರಷ್ಟಿದೆ. 2023-24ರ ಇದೇ ಅವಧಿಯಲ್ಲಿ ಶೇ 6ರಷ್ಟಿತ್ತು ಎಂದು ತಿಳಿಸಿದೆ.
8₹70 ಲಕ್ಷ ಕೋಟಿ ದಾಟಿದ ರಫ್ತು ಮೌಲ್ಯ: ಕೇಂದ್ರ
*2024-25ನೇ ಆರ್ಥಿಕ ವರ್ಷದಲ್ಲಿ ದೇಶದ ಸರಕು ಮತ್ತು ಸೇವೆಗಳ ರಫ್ತು ಮೌಲ್ಯವು ₹70.55 ಲಕ್ಷ ಕೋಟಿ ದಾಟಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
*2023-24ನೇ ಆರ್ಥಿಕ ವರ್ಷದಲ್ಲಿ ₹66.94 ಲಕ್ಷ ಕೋಟಿ ಆಗಿತ್ತು. ಜಾಗತಿಕ ಅನಿಶ್ಚಿತ ಸ್ಥಿತಿಯ ನಡುವೆಯೂ ರಫ್ತು ಪ್ರಮಾಣದಲ್ಲಿ ಶೇ 6ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.
*ಕೆಂಪು ಸಮುದ್ರ ಬಿಕ್ಕಟ್ಟು, ಇಸ್ರೇಲ್-ಹಮಾನ್ ಸಂಘರ್ಷ, ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆಯೂ ದೇಶದ ರಫ್ತು ಉತ್ತಮ ಬೆಳವಣಿಗೆ ದಾಖಲಿಸಿದೆ. ಇದೇ ವೇಳೆ ಅಭಿವೃದ್ಧಿ ಹೊಂದಿದ ದೇಶಗಳ ಪ್ರಗತಿ ಮಂದಗತಿಯಾಗಿದೆ ಎಂದು ಸಚಿವಾಲಯ ತಿಳಿಸಿವೆ.
9. ಯೂನುಸ್ ಚೀನಾ ಮೋಹ, ಬಾಂಗ್ಲಾದೇಶಕ್ಕೆ ನೀಡಿದ್ದ ಸರಕು ಸಾಗಣೆ ಸೌಲಭ್ಯ ಹಿಂದೆಗೆದುಕೊಂಡ ಭಾರತ
*ಈಶಾನ್ಯ ಭಾರತವು ಬಾಂಗ್ಲಾದೇಶದಿಂದ ಸುತ್ತುವರಿದಿರುವ ಭೂಪ್ರದೇಶವಾಗಿದೆ ಮತ್ತು ಸಾಗರ ಪ್ರವೇಶಕ್ಕಾಗಿ ಅದು ತನ್ನ ದೇಶವನ್ನೇ ಅವಲಂಬಿಸಿದೆ ಎಂದು ಹೇಳಿದ್ದ ಆ ದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರು ಈ ಪ್ರದೇಶದಲ್ಲಿ ತನ್ನ ಆರ್ಥಿಕ ಕನ್ನ ಉಪಸ್ಥಿತಿಯನ್ನು ಹೆಚ್ಚಿಸುವಂತೆ ತನ್ನ ಇತ್ತೀಚಿನ ಚೀನಾ ಭೇಟಿ ಸಂದರ್ಭದಲ್ಲಿ ಚೀನಾವನ್ನು ಆಹ್ವಾನಿಸಿದ್ದರು. ಈ ಹೇಳಿಕೆಯ ಹಿನ್ನಲೆಯಲ್ಲಿ ಭಾರತವು ಬಾಂಗ್ಲಾದೇಶಕ್ಕೆ ನೀಡಿದ್ದ ಪ್ರಮುಖ MON ಸೌಲಭ್ಯವನ್ನು ಹಿಂದೆಗೆದುಕೊಂಡಿದೆ. ಯೂನುಸ್ ಹೇಳಿಕೆ ತೀವ್ರ ರಾಜತಾಂತ್ರಿಕ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು.
*ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಎ.೮ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಪ್ರಕಟಿಸಿರುವ ನಿರ್ಧಾರವು ಜೂ.29.2020ರ ಒಪ್ಪಂದವನ್ನು ಪರಿಣಾಮಕಾರಿಯಾಗಿ ಅಂತಗೊಳಿಸಿದೆ. ಈ ಒಪ್ಪಂದದ ಮೂಲಕ ಬಾಂಗ್ಲಾದೇಶವು ತನ್ನ ಸರಕುಗಳನ್ನು ಭಾರತದ ಭೂ ಕಸ್ಟಮ್ಸ್ ಕೇಂದ್ರಗಳು, ನಂತರ ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ಮೂಲಕ ಮೂರನೇ ದೇಶಗಳಿಗೆ ರಫ್ತು ಮಾಡುವ ಸೌಲಭ್ಯವನ್ನು ಪಡೆದುಕೊಂಡಿತ್ತು.
ಸೌಲಭ್ಯವು ತಕ್ಷಣದಿಂದಲೇ ರದ್ದುಗೊಂಡಿದೆ. ಆದರೆ ಬಾಂಗ್ಲಾ ದೇಶದಿಂದ ಈಗಾಗಲೇ ಭಾರತವನ್ನು ಪ್ರವೇಶಿಸಿರುವ ಸರಕುಗಳ ರಪ್ತಿಗೆ ಅವಕಾಶವನ್ನು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಸೌಲಭ್ಯವು ಭೂತಾನ, ನೇಪಾಳ ಮತ್ತು ಮ್ಯಾನ್ಮಾರ್ ನೊಂದಿಗೆ ಬಾಂಗ್ಲಾದೇಶದ ವ್ಯಾಪಾರವನ್ನು ಸುಗಮಗೊಳಿಸಿತ್ತು. ಆದರೆ ಭಾರತೀಯ ರಫ್ತುದಾರರು. ವಿಶೇಷವಾಗಿ ಸಿದ್ಧ ಉಡುಪಗಳ ರಫ್ತುದಾರರು ಈ ವ್ಯವಸ್ಥೆಗೆ ಬಹು ಹಿಂದಿನಿಂದಲೂ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.
*ಪ್ರತಿದಿನ ಬಾಂಗ್ಲಾದೇಶದಿಂದ 20ರಿಂದ 30 ಟ್ರಕ್ ಗಳು ದಿಲ್ಲಿಗೆ ಆಗಮಿಸುತ್ತಿವೆ. ಇದು ಸರಕು ಟರ್ಮಿನಲ್ಗಳಲ್ಲಿ ಅಡಚಣೆಗೆ ಮತ್ತು ಸರಕು ಸಾಗಣೆ ವೆಚ್ಚ ಹೆಚ್ಚಾಗಲು ಕಾರಣವಾಗಿದೆ ಎಂದು ಉಡುಪು ರಫ್ತು ಉತ್ತೇಜನ ಮಂಡಳಿಯ ಅಧ್ಯಕ್ಷ ಸುಧೀರ್ ಸೇಖ ಅವರು ಈ ಹಿಂದೆ ಹೇಳಿದ್ದರು.
*ಈಗ ನಮ್ಮ ಸರಕುಗಳ ರಪ್ಪಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಈ ಹಿಂದೆ ಬಾಂಗ್ಲಾದೇಶಕ್ಕೆ ನೀಡಲಾಗಿದ್ದ ಸಾರಿಗೆ ಸೌಲಭ್ಯದಿಂದಾಗಿ ತಮಗೆ ಸ್ಥಳಾವಕಾಶ ಕೊರತೆಯ ಬಗ್ಗೆ ರಫ್ತುದಾರರು ದೂರುತ್ತಿದ್ದರು ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಮಹಾ ನಿರ್ದೇಶಕ ಆಜಯ ಸಹಾಯ್ ಹೇಳಿದರು.
ಸಾರಿಗೆ ಸೌಲಭ್ಯವನ್ನು ರದ್ದುಗೊಳಿಸಿರುವುದು ಬಾಂಗ್ಲಾದೇಶದ ರಫ್ತು ಲಾಜಿಸ್ಟಿಕ್ ಗೆ ಭಾರೀ ಹೊಡೆತವನ್ನು ನೀಡಲಿದೆ ಎಂದು ವ್ಯಾಪಾರ ತಜ್ಞರು ಹೇಳಿದ್ದಾರೆ. ಇನ್ನು ಮುಂದೆ ಬಾಂಗ್ಲಾದೇಶಿ ರಫ್ತುದಾರರು ವಿಳಂಬಗಳು, ಹೆಚ್ಚಿನ ವೆಚ್ಚಗಳು ಮತ್ತು ಅನಿರ್ದಿಷ್ಟತೆಯನ್ನು ಎದುರಿಸಬೇಕಾಗಬಹುದು ఎందిదార.
10 .ಭಾರತದಲ್ಲಿ ಕನಿಷ್ಠ 100 ಮಂದಿಯ ವಾಟ್ಸಾಪ್ ಖಾತೆಗಳಿಗೆ 'ಪೆಗಾಸಸ್'
*2019ರಲ್ಲಿ ಇಸ್ರೇಲಿ ಪ್ರೈವೇರ್ ಪೆಗಾಸಸ್ ಬಳಸಿಕೊಂಡು 1.223 ಮಂದಿಯ ವಾಟ್ಸಾಪ್ ಖಾತೆಗಳ ಹ್ಯಾಕಿಂಗ್ ನಡೆದಿದ್ದು, ಅವರಲ್ಲಿ ಕನಿಷ್ಠ 100 ಮಂದಿ ಭಾರತದಲ್ಲಿ ನೆಲೆಸಿರುವವರದ್ದಾಗಿದೆಯೆಂದು ಅಮೆರಿಕದ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯು ತಿಳಿಸಿದೆ.
"ಇಸ್ರೇಲಿನ ಎನ್‌ಎಸ್‌ಓ ಗ್ರೂಪ್ ವಿರುದ್ಧ ವಾಟ್ಸಾಪ್ ಸಲ್ಲಿಸಿದ ಮೊಕದ್ದಮೆಯ ವಿಚಾರಣೆ ಸಂದರ್ಭ ಎಪ್ರಿಲ್ 4ರಂದು ಸಲ್ಲಿಸಲಾದ ವಿವರಣೆಯೊಂದರಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.
*ಆಮೆರಿಕ ಮೂಲದ ತಂತ್ರಜ್ಞಾನ ಕಂಪೆನಿ ಮೆಟಾ ಒಡೆತನದ ವಾಟ್ಸಾಪ್ ಹಾಗೂ ಇಸ್ರೇಲ್ ನ ಸೈಬರ್ ಬೇಹುಗಾರಿಕಾ ಸಂಸ್ಥೆ ನಡುವೆ ಕಾನೂನು ಸಮರ ನಡೆಯುತ್ತಿದೆ. ಎಪ್ರಿಲ್ 2019ರಿಂದ ಮೇ 2019ರವರೆಗೆ ವಾಟ್ಲಾಪ್ಪ 1400 ಬಳಕೆದಾರರನ್ನು ಗುರಿಯಿರಿಸಿ ಎನ್‌ಎಸ್‌ಓ ಗ್ರೂಪ್ನ ಪೆಗಾಸಸ್ ಸೈವೇರ್ ಅನ್ನು ಬಳಸಲಾಗಿದೆ ಎಂದು ಮೆಟಾ ಆಪಾದಿಸಿದೆ.
"ಡಿಸೆಂಬರ್ 20ರಂದು ಅಮೆರಿಕದ ಜಿಲ್ಲಾ ನ್ಯಾಯಾಲಯವು ನೀಡಿದ ತೀರ್ಪೊಂದು, 2019ರಲ್ಲಿ ಪೆಗಾಸಸ್ ಪ್ರೈವೇರ್ ಬಳಸಿಕೊಂಡು 1400 ವಾಟ್ಸಾಪ್ ಖಾತೆಗಳ ಮೇಲೆ ಆನಧಿಕೃತವಾಗಿ ಕಣ್ಣಾವಲು ನಡೆದಿರುವುದಕ್ಕೆ ಎನ್ಎಸ್‌ಓ ಗ್ರೂಪ್ ಹೊಣೆಯೆಂದು ಘೋಷಿಸಿತ್ತು.
"ಸೈವೇರ್ನಿಂದಾಗಿ ವಾಟ್ಸಾಪ್ಪ ವರ್ಚಸ್ಸಿಗೆ ಧಕ್ಕೆ ಉಂಟಾಗಿರುವುದರಿಂದ ಅದಕ್ಕೆ ನೀಡಬೇಕಾದ ಪರಿಹಾರದ ಮೊತ್ತವನ್ನು ಪ್ರತ್ಯೇಕ ವಿಚಾರಣೆಯಲ್ಲಿ ನಿರ್ಧರಿಸಲಾಗುವುದೆಂದು ನ್ಯಾಯಾಲಯ ತಿಳಿಸಿದೆ.
"ವಿವಿಧ ದೇಶಗಳಲ್ಲಿ ಎರಡು ವಾರಗಳ ಅವಧಿಯಲ್ಲಿ ಪೆಗಾಸಸ್ ಪ್ರೈವೇರ್ ಬಳಸಿಕೊಂಡು 51 ದೇಶಗಳ 1400ಕ್ಕೂ ಅಧಿಕ ವ್ಯಕ್ತಿಗಳ ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆಯೆಂದು ಮೆಟಾ ಆರೋಪಿಸಿದೆ. ಗರಿಷ್ಠ 456 ವ್ಯಕ್ತಿಗಳು ಹ್ಯಾಕ್‌ಗೆ ಒಳಗಾಗಿರುವ ಮೆಕ್ಸಿಕೊ ಮೊದಲ ಸ್ಥಾನದಲ್ಲಿದೆ. ಭಾರತ (100), ಬಹರೈನ್ (82), ಮೊರೊಕ್ಕೊ (69), ಪಾಕಿಸ್ತಾನ (58), ಇಂಡೋನೇಷ್ಯ (54) ಹಾಗೂ ಇಸ್ರೇಲ್ (51) ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.