ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಗ್ರಾಮೀಣ ಮಹಿಳೆಯರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಗ್ರಾಮೀಣ ಮಹಿಳೆಯರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ.

ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳ ಪೂರೈಕೆಗಾಗಿ ಗ್ರಾಮೀಣ ಮಹಿಳಾ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2025-26ನೇ ಸಾಲಿಗೆ  ಗ್ರಾಮೀಣ ಪ್ರದೇಶಗಳಲ್ಲಿ ತರಬೇತಿ ಪಡೆದ/ವೃತ್ತಿಪರ ಮಹಿಳಾ ಕುಶಲಕರ್ಮಿಗಳಿಗೆ ಇದನ್ನು ಉಚಿತವಾಗಿ ವಿತರಿಸಲಾಗುವುದು.


ಅಪ್ಲೋಡ್ ಮಾಡಬೇಕಾದ ದಾಖಲೆಗಳು (ಸ್ವಯಂ ದೃಢೀಕೃತ ಪ್ರತಿಗಳು):-

1) ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ಅಂಕಪಟ್ಟ ಅಥವಾ ವರ್ಗಾವಣೆ ಪ್ರಮಾಣ ಪತ್ರ) 2) ಶೈಕ್ಷಣಿಕ ಅರ್ಹತ: ಕನಿಷ್ಠ 7ನೇ ತರಗತಿ ಪಾಸಾಗಿರಬೇಕು (ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ)

3) ಜಾತಿ ಪ್ರಮಾಣ ಪತ್ರ (ಪ.ಜಾತಿ, ಪಂ.ಪಂಗಡ & ಅಲ್ಪಸಂಖ್ಯಾತರಿಗೆ ಮಾತ್ರ)

4) ವಿಕಲಚೇತನ/ವಿಧವೆ ಪ್ರಮಾಣ ಪತ್ರ (ವಿಕಲಚೇತನ/ವಿಧವೆಯರಾಗಿದ್ದಲ್ಲ)

5) ಚಾಲ್ತಿಯಲ್ಲಿರುವ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್.

6) ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ.

7) ವೃತ್ತಿ ದೃಢೀಕರಣ ಪತ್ರ (ಲೇಬರ್ ಕಾರ್ಡ್/ತರಬೇತಿ ಸಂಸ್ಥೆಯವರು ನೀಡಿದ ಪತ್ರ/ಪಂಚಾಯತ್ ಅಭಿವೃದ್ಧಿ


ಷರತ್ತು(ಸೂಚನೆ)ಗಳು:

1) ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು. (ಮಹಾನಗರಪಾಲಿಕೆ/ನಗರಸಭೆ ಮತ್ತು ಪುರಸಭೆಗೊಳಪಡುವ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ)

2) ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. (ಒಂದು ವೇಳೆ ಅರ್ಜಿ ಸ್ವೀಕೃತವಾದಲ್ಲಿ ಅಂತಹವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ)



3) ಈ ಮುಂಚೆ ಈ ಇಲಾಖೆಯಿಂದ ಹೊಲಿಗೆಯಂತ್ರ ಪಡೆದಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ (ಒಂದು ವೇಳೆ ಅರ್ಜಿ ಸ್ವೀಕೃತವಾದಲ್ಲಿ ಅಂತಹವರನ್ನು ಅಯ್ಕೆಗೆ ಪರಿಗಣಿಸಲಾಗುವುದಿಲ್ಲ)

4) ಹೊಲಿಗೆಯಂತ್ರಕ್ಕಾಗಿ ಅರ್ಜಿ ಸಲ್ಲಿಸುವ ಮಹಿಳೆಯರು ಲೇಬರ್ ಕಾರ್ಡ್/ ತರಬೇತಿ ಹೊಂದಿದ ಬಗ್ಗೆ ತರಬೇತಿ ಸಂಸ್ಥೆಯವರು ನೀಡಿದ ಪ್ರಮಾಣ ಅಥವಾ ಆಯಾ ಗ್ರಾಮ ಪಂಚಾಯತಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ವೃತ್ತಿ ನಿರ್ವಹಿಸುತ್ತಿರುವ ಬಗ್ಗೆ ವೃತ್ತಿ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸುವುದು (ವಮೂನೆಗಾಗಿ ವೆಬ್‌ ಸೈಟ್ ಮೋಡಿ)

5) ಹೊಲಿಗೆಯಂತ್ರಕ್ಕಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಹೊಲಿಗೆ ವೃತ್ತಿ ತರಬೇತಿ ಪಡೆದ/ವೃತ್ತಿನಿರತ ಮಹಿಳೆಯರು ಮಾತ್ರ ಅರ್ಜಿ ಸಲ್ಲಸತಕ್ಕದ್ದು. (ಒಂದು ವೇಳೆ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳು ಸ್ವೀಕೃತವಾದಲ್ಲಿ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ)

6) ಒಬ್ಬ ಫಲಾನುಭವಿಯು ಕೇವಲ ಒಂದು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

7 ) ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

(ಒಂದೇ ಕುಟುಂಬದಿಂದ/ಒಬ್ಬರಿಂದ ಒಂದಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಕಂಡುಬಂದಲ್ಲಿ ಅಂತಹವರ ಅರ್ಜಿಗಳನ್ನು ತಿರಸ್ಕರಿಸಲಾಗುವುದು)

8) ಅಪ್ಲೋಡ್ ಮಾಡುವ ಮೂಲ ದಾಖಲಾತಿಗಳು ಸ್ಪಷ್ಟವಾಗಿರಬೇಕು ಇಲ್ಲವಾದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.

9) ಆಯಾ ತಾಲೂಕಿನ ಅರ್ಜಿದಾರರು ತಮ್ಮದೇ ತಾಲೂಕಿನಲ್ಲಿ ಅರ್ಜಿ ಸಲ್ಲಿಸಬೇಕು ತಾಲೂಕಾ ಹೆಸರು ಬದಲಾವಣೆಯಾದಲ್ಲಿ ಅಂತಹವರ ಅರ್ಜಿಯನ್ನು ತಿರಸ್ಕರಿಸಲಾಗುವುದು.

10) ವಯಸ್ಸು: ಅರ್ಜಿ ಸಲ್ಲಿಸುವವರು ಕನಿಷ್ಠ 18 ವರ್ಷ ತುಂಬಿರಬೇಕು, ಗರಿಷ್ಠ 45 ವರ್ಷ ಮೀರಿರಬಾರದು. (ನಿಗದಿಪಡಿಸಿದ ವಯಸ್ಸಿಗಿಂತ ಕಡಿಮೆ ಅಥವಾ ಹೆಚ್ಚು ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದ)

11) ನಿಗದಿಪಡಿಸಲಾದ ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾದಲ್ಲ ಆಯ್ಕೆ ಸಮಿತಿ ವತಿಯಿಂದ ಲಾಟರಿ ಎತ್ತುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು (ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ)

12) ಅರ್ಜಿದಾರರು ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯ ಮೂಲ ಪ್ರತಿಯನ್ನು ಮತ್ತು ಅಪ್ಲೋಡ್ ಮಾಡಿದ ದಾಖಲಾತಿಗಳ ಒಂದು ಝರಾಕ್ಸ್ ಪ್ರತಿಯನ್ನು ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೆ ತಮ್ಮಲ್ಲಿ ಕಾಯ್ದಿರಿಸಿಕೊಳ್ಳತಕ್ಕದ್ದು ಹಾಗೂ ಅಂತಿಮ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರು ಆಯ್ಕೆಯಾದಲ್ಲಿ ಹೊಲಿಗೆಯಂತ್ರ ಪಡೆದುಕೊಳ್ಳುವಾಗ ಅನ್‌ಲೈನ್‌ನಿಂದ ಸ್ವೀಕೃರಿಸಿದೆ ಅರ್ಜಿಯೊಂದಿಗೆ ಅಪ್ಲೋಡ್ ಮಾಡಿದ ಮೂಲ ದಾಖಲಾತಿಗಳ ತೋರಿಸಿ, ಒಂದು ಸೆಟ್ ಝರಾಕ್ಸ್ ಪ್ರತಿಯನ್ನು ಹಂಚಿಕೆ ಮಾಡುವ ಅಧಿಕಾರಿ/ಸಿಬ್ಬಂದಿಗಳಿಗೆ ಒದಗಿಸುವುದು.

ಹೆಚ್ಚಿನ ಮಾಹಿತಿಗಾಗಿ, ಉಪ ನಿರ್ದೇಶಕರು (ಗ್ರಾಮೀಣ ಕೈಗಾರಿಕೆ) ರವರ ಕಛೇರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಿಲ್ಲಾ ಪಂಚಾಯತ್, ಹೈದಾರಬಾದ ರಸ್ತೆ, ರಾಯಚೂರು ದೂರವಾಣಿ-08532 200946 ಇವರಿಗೆ ಸಂಪರ್ಕಿಸಬಹುದಾಗಿದೆ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು