ಇಂಟರ್ನೆಟ್ ಇಲ್ಲದಿದ್ದರೂ ಹಣ ಪಾವತಿಸಬಹುದು

ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಿದ ರಿಸರ್ವ್ ಬ್ಯಾಂಕ್


ಮುಂಬೈ: ಮೊಬೈಲ್‌ನಲ್ಲಿ ಇಂಟರ್ನೆಟ್

ಇಲ್ಲದೆಯೇ ಹಣ ಪಾವತಿ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿ ಟಲ್ ರೂಪಾಯಿ ಅಥವಾ ಇ-ರುಪಿ ಯನ್ನು ಪರಿಚಯಿಸಿದೆ. ಈ ಡಿಜಿಟಲ್ ರೂಪಾಯಿ ಭಾರತದ ಸೆಂಟ್ರಲ್ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಆಗಿದ್ದು, ನಗದು ರೂಪದ ಹಣದಂತೆ ಇದು ಕೆಲಸ ಮಾಡಲಿದೆ.

ನಮ್ಮ ವ್ಯಾಲೆಟ್‌ನಲ್ಲಿರುವ ಹಣವನ್ನು ಹೇಗೆ ಖರ್ಚು ಮಾಡುತ್ತಿವೋ ಅದೇ ರೀತಿ ಡಿಜಿಟಲ್ ರೂಪದಲ್ಲಿನ ಈ ಹಣ ವನ್ನು ಖರ್ಚು ಮಾಡಬಹುದು. ಇಂಟ ರ್ನೆಟ್ ಇಲ್ಲದೆ, ಬ್ಯಾಂಕ್ ಖಾತೆ ಅನು ಮತಿ ಇಲ್ಲದೆ ಪಾವತಿ ಮಾಡಬಹುದು. ಇಂಟರ್ನೆಟ್ ವ್ಯವಸ್ಥೆಯೇ ಇಲ್ಲದ ಗ್ರಾಮೀಣ ಜನರಿಗೆ ಅನುಕೂಲವಾಗ ಲಿದೆ. ಇದನ್ನು ಎಸ್‌ಬಿಐ, ಕೆನರಾ ಸೇರಿದಂತೆ 60 ಬ್ಯಾಂಕ್‌ಗಳು

ಇ-ರುಪಿ ಹೆಸರಲ್ಲಿ ಡಿಜಿಟಲ್ ಕರೆನ್ಸಿ ಬಿಡುಗಡೆ

ಅಳವಡಿಸಿಕೊಂಡಿವೆ.

ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಡಿಜಿಟಲ್ ರೂಪಾಯಿಯಾಗಿ ಬದಲಾವಣೆ ಮಾಡಿಕೊಂಡು ಬಳಕೆ ಮಾಡಬಹುದು. ಬೇರೆ ಅವರ ಖಾತೆ ಯಿಂದಲೂ ಹಣವನ್ನು ಶೇರ್ ಮಾಡಿ ಕೊಳ್ಳಬಹುದು. ಬ್ಯಾಂಕ್ ಖಾತೆಗೂ ವರ್ಗಾಯಿಸಬಹುದು. ಆದರೆ ವರ್ಗಾವಣೆ ಸಮಯ ಎಷ್ಟು ದಿನ ಆಗುತ್ತದೆ ಎಂಬುದು ತಿಳಿದುಬಂದಿಲ್ಲ.



ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು