ಚಾರ್ಜ್ ಬೇಗನೆ ಖಾಲಿಯಾಗುತ್ತಿದೆಯಾ?; ಒಂದು ಬಾರಿ ಈ ಟಿಪ್ಸ್ ಬಳಸಿನೋಡಿ
✍️:Mallappa Pattanashetti
ಅದಕ್ಕಾಗಿ ಇಲ್ಲಿ 5 ಟಿಪ್ಸ್ಗಳನ್ನು ನೀಡಲಾಗಿದೆ.
ಹಲವಾರು ವಿಶೇಷತೆಗಳನ್ನು ಒಳಗೊಂಡ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅನೇಕರು RAM, ಕ್ಯಾಮೆರಾ ಮುಂತಾದ ಫೀಚರ್ ನೋಡಿ ಸ್ಮಾರ್ಟ್ಫೋನ್ ಖರೀದಿಸಿದರೆ. ಇನ್ನು ಕೆಲವರು ಬ್ಯಾಟರಿ ನೋಡಿ ಖರೀದಿಸುತ್ತಾರೆ.
ಹೌದು. ಸ್ಮಾರ್ಟ್ಫೋನ್ ಖರೀದಿಸುವಾಗ ಅದರಲ್ಲಿ ಅಳವಡಿಸಿಕೊಂಡಿರುವ ಬ್ಯಾಟರಿ ಎಷ್ಟೆಂದು ಪರಿಗಣಿಸಿ ಮತ್ತೆ ಖರೀದಿಸುತ್ತಾರೆ. ಏಕೆಂದರೆ ಕೆಲವೊಮ್ಮೆ ಬ್ಯಾಟರಿ ಬಾಳಿಕೆ ದೊಡ್ಡ ಸಮಸ್ಯೆಯಾಗುತ್ತದೆ.
ಹಾಗಾಗಿ 5 ಸಾವಿರ ಅಥವಾ 6 ಸಾವಿರ mAh ಬ್ಯಾಟರಿ ನೋಡಿ ಖರೀದಿಸುತ್ತಾರೆ. ಆದರೂ ಇಂಟರ್ನೆಟ್ ಬಳಸುವ ವೇಳೆಗೆ ಇದ್ದ ಚಾರ್ಜ್ ಕೂಡ ಖಾಲಿಯಾಗಿ ಸಮಸ್ಯೆಯಾಗುವ ಸನ್ನಿವೇಶಗಳು ಹೆಚ್ಚು.
ಸ್ಮಾರ್ಟ್ಫೋನ್ ಬಳಕೆದಾರರು ಕೆಲವೊಂದು ಟಿಪ್ಸ್ ಬಳಸಿದರೆ ಬ್ಯಾಟರಿಯನ್ನು ಉಳಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ಇಲ್ಲಿ 5 ಟಿಪ್ಸ್ಗಳನ್ನು ನೀಡಲಾಗಿದೆ.
ಬ್ಯಾಟರಿ ಬಳಕೆ ಹೆಚ್ಚಿಸಬೇಕಾದರೆ ಮೊದಲು ಸ್ಮಾರ್ಟ್ಫೋನ್ನಲ್ಲಿ ಅನಾವಶ್ಯಕವಾಗಿ ಆನ್ ಆಗಿರುವ ಬ್ಲೂಟೂತ್ ಮತ್ತು ಲೊಕೇಷನ್ ಆಯ್ಕೆಯನ್ನು ಆಫ್ ಮಾಡಿ. ಕೆಲಮೊಮ್ಮೆ ಬ್ಲೂಟೂತ್ಗೆ ಹೆಚ್ಚಿನ ಬ್ಯಾಟರಿ ಬಳಕೆಯಾಗುವ ಸಾಧ್ಯತೆಯಿದೆ. ಹಾಗಾಗಿ ಅದನ್ನು ಆಫ್ ಮಾಡಿದರೆ ಸ್ಮಾರ್ಟ್ಫೋನ್ ಚಾರ್ಜ್ ಉಳಿಸಿಕೊಳ್ಳಬಹುದಾಗಿದೆ.

