ಮಹಾನಾಯಕ' ಧಾರಾವಾಹಿ ವಿಚಾರವಾಗಿ ಕೊಟ್ಟ ಮಾತು ಉಳಿಸಿಕೊಂಡ ಪ್ರೇಕ್ಷಕರು!
ಮಹಾನಾಯಕ ಧಾರಾವಾಹಿ ಮಾಧ್ಯಮಲೋಕದಲ್ಲಿ ಈಗಾಗಲೇ ಸೃಷ್ಟಿಸಿರುವ ಚರಿತ್ರೆ ಬಹುಶಃ ಯಾವುದೇ ಧಾರಾವಾಹಿಗಳು ಕೂಡ ಈ ಮಟ್ಟಕ್ಕೆ ದಾಖಲೆ ಮಾಡಿಲ್ಲ. ಇದರ ವಿರುದ್ಧ ಷಡ್ಯಂತ್ರ ಹಾಗೂ ಅಂಬೇಡ್ಕರ್ ವಿರೋಧಿಗಳು, ಮನುವಾದಿಗಳು ಎಷ್ಟೇ ಪ್ರಬಲವಾಗಿದ್ದರೂ ನಿಮ್ಮ ಕೆಲಸ ಮುಂದುವರಿಸಿ. ಈಗಾಗಲೇ ನೀವು ಜನಮನವನ್ನು ಗೆದ್ದಿದ್ದೀರಾ' ಅಂತ ರಾಘವೇಂದ್ರ ಹುಣಸೂರು ಟ್ವೀಟ್‌ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದರು. ಅಂತೆಯೇ ಈಗ ಮಹಾನಾಯಕ ಧಾರಾವಾಹಿಯು ಟಿಆರ್‌ಪಿಯಲ್ಲಿಯೂ ಗೆದ್ದಿದೆ.
