ಮಂಗಳಗೌರಿ ಮದುವೆ' ಹಾಗೂ 'ಪಾರು' ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಆದರೆ ಕಳೆದಬಾರಿ 'ಮಂಗಳಗೌರಿ ಮದುವೆ' ಸೀರಿಯಲ್ 4ನೇ ಸ್ಥಾನದಲ್ಲಿತ್ತು. ಇತ್ತೀಚಿನ ಎಪಿಸೋಡ್‌ನಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. 'ಗಟ್ಟಿಮೇಳ' ಹಾಗೂ 'ಜೊತೆ ಜೊತೆಯಲಿ' ಧಾರಾವಾಹಿ 1 ಹಾಗೂ 2 ನೇ ಸ್ಥಾನವನ್ನು ಕಾಯ್ದುಕೊಂಡಿದೆ. ವರ್ಷಗಳಿಂದ ಈ ಧಾರಾವಾಹಿ 1 ಮತ್ತು 2ನೇ ಸ್ಥಾನದಲ್ಲಿ ಭದ್ರವಾಗಿ ಕೂತಿದೆ. 'ಗಟ್ಟಿಮೇಳ', 'ಜೊತೆ ಜೊತೆಯಲಿ', 'ಮಂಗಳಗೌರಿ ಮದುವೆ', 'ಪಾರು', 'ನಾಗಿಣಿ 2', 'ಕಮಲಿ' ಧಾರಾವಾಹಿಗಳು ಟಿಆರ್‌ಪಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿವೆ. ಇದನ್ನು ಬಿಟ್ಟು ಉಳಿದ ಧಾರಾವಾಹಿಗಳು ಅಪರೂಪಕ್ಕೆ ಟಾಪ್ 5 ಸ್ಥಾನಕ್ಕೆ ಬರುತ್ತವೆ.
