ನಿರಂತರವಾಗಿ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಯ ನಡುವೆ, ಬೆಂಗಳೂರಿನ ಕೆಲವು ಕಂಪನಿಗಳು ನಿಮ್ಮ ಹಳೆಯ ಪೆಟ್ರೋಲ್ ಚಾಲಿತ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಲು ಒಂದು ವಿಶಿಷ್ಟ ಉಪಕ್ರಮವನ್ನು ಆರಂಭಿಸಿವೆ. ಇದಕ್ಕಾಗಿ ನೀವು ಹೆಚ್ಚಿನ ಹಣ ಕೂಡ ಖರ್ಚು ಮಾಡಬೇಕಾಗಿಲ್ಲ.
ಬೆಂಗಳೂರಿನಲ್ಲಿ ರೈಡ್ ಶೇರಿಂಗ್ ಸೇವೆ ಒದಗಿಸುವ ಸ್ಟಾರ್ಟ್ ಅಪ್ ಕಂಪನಿ Bounce ಯೋಜನೆಯೊಂದನ್ನು ಆರಂಭಿಸಿದೆ.
ಈ ಕಂಪನಿ ಯಾವುದಾದರೊಂದು ಹಳೆ ಕಂಬಸ್ಚನ್ ಇಂಜಿನ್ (Petrol) ಸ್ಕೂಟರ್ ನಲ್ಲಿ ಇಲೆಕ್ಟ್ರಿಕ್ ಮೋಟರ್ (Electric Scooter) ಹಾಗೂ ಬ್ಯಾಟರಿ ಅಳವಡಿಸಿ ಅದನ್ನು ಇಲೆಕ್ಟ್ರಿಕ್ ಸ್ಕೂಟರ್ ಪರಿವರ್ತಿಸುವಲ್ಲಿ ತೊಡಗಿಸಿಕೊಂಡಿದೆ. ಇದಕ್ಕಾಗಿ ಕಂಪನಿ ಕೇವಲ ರೂ.20 ಸಾವಿರ ಜಾರ್ಚ್ ಮಾಡುತ್ತಿದೆ.
ಸಿಂಗಲ್ ಚಾರ್ಜ್ ನಲ್ಲಿ ಎಷ್ಟು ಮೈಲೇಜ್ ?
ಈ ಕುರಿತು ಹೇಳಿಕೆ ನೀಡಿರುವ ಬೌನ್ಸ್‌ನ ಸಹ-ಸಂಸ್ಥಾಪಕ ವಿವೇಕಾನಂದ ಹಳ್ಳೇಕರೆ, "ಇದುವರೆಗೆ ನಾವು 1000 ಕ್ಕೂ ಅಧಿಕ ಹಳೆಯ ಸ್ಕೂಟರ್‌ಗಳನ್ನು ವಿದ್ಯುತ್ ಸ್ಕೂಟರ್‌ಗಳಾಗಿ ಪರಿವರ್ತಿಸಿದ್ದೇವೆ. ಈ ಸ್ಕೂಟರ್ ಮಾಲೀಕರಿಗಾಗಿ ಕಂಪನಿಯು ಸೇವಾ ಕೇಂದ್ರಗಳನ್ನು ತೆರೆಯುತ್ತಿದೆ. ಈ ಸ್ಕೂಟರ್‌ನಲ್ಲಿ ಬರುವ ಬ್ಯಾಟರಿ ಕಿಟ್‌ನೊಂದಿಗೆ, ಒಮ್ಮೆ ಸ್ಕೂಟರ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಸ್ಕೂಟರ್ 65 ಕಿಮೀ ವರೆಗೆ ಚಲಿಸಬಲ್ಲದು. ಈ ಕಿಟ್ ಅನ್ನು ಆಟೋಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ ಪ್ರಮಾಣೀಕರಿಸಿದೆ ಎಂದು ಅವರು ಹೇಳಿದ್ದಾರೆ.

ಪೆಟ್ರೋಲ್ ಅಥವಾ ಎಲೆಕ್ಟ್ರಿಕ್ ಹೇಗೆ ಬೇಕಾದರೂ ಚಲಾಯಿಸಬಹುದು
ಆದರೆ ಇದೀಗ, ಬೌನ್ಸ್ ನಂತರ, ಅನೇಕ ಕಂಪನಿಗಳು ಉದಾಹರಣೆಗೆ Etrio ಮತ್ತು Meladath ಆಟೋಕಾಂಪೊನೆಂಟ್‌ಗಳನ್ನು ಒಳಗೊಂಡ ಕಿಟ್‌ಗಳನ್ನು (Retrofit Kit) ತಂದಿವೆ. ವರದಿಯ ಪ್ರಕಾರ, ಯಾವುದೇ ಹಳೆಯ ಪೆಟ್ರೋಲ್ ಸ್ಕೂಟರ್ ಅನ್ನು ಸುಲಭವಾಗಿ ಎಲೆಕ್ಟ್ರಿಕ್/ಹೈಬ್ರಿಡ್ ಸ್ಕೂಟರ್ ಆಗಿ ಪರಿವರ್ತಿಸಬಲ್ಲ ಈಜಿ ಹೈಬ್ರಿಡ್ ಕಿಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು Meladath ಸಿದ್ಧತೆ ನಡೆಸುತ್ತಿದೆ. ಇದು ಸಂಭವಿಸಿದಲ್ಲಿ, ಸ್ಕೂಟರ್ ಅನ್ನು ಯಾವುದೇ ಮೋಡ್ ಅಂದರೆ ಪೆಟ್ರೋಲ್ ಅಥವಾ ಎಲೆಕ್ಟ್ರಿಕ್, ಅಗತ್ಯಕ್ಕೆ ತಕ್ಕಂತೆ ಓಡಿಸಬಹುದು.