ಮಹಾಲಿಂಗಪೂರ:ಸಮಿಪ ಮಾರಾಪೂರ ಗ್ರಾಮದ ಮಹಾದೇವ ಪಟ್ಟಣಶೇಟ್ಟಿ ಎಂಬುವರ ಜಮಿನಿಗೆ ಒಳಚರಂಡಿ ನೀರು ಜಮಿನಿಗೆ ಹರಿದು ಬರುತ್ತಿದೆ. ಇದರಿಂದ ನಿತ್ಯ ಗಬ್ಬು ವಾಸನೆಯಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿನ ಜಮಿನ ಮಾಲಿಕರು ಆರೋಪಿಸಿದ್ದಾರೆ.
ಮೊದಲೆಲ್ಲ ಮಳೆ ನೀರು ಹರಿದು ಚರಂಡಿ ಮೂಲಕ ಹಳ್ಳ ಸೇರುತ್ತಿತ್ತು. ಆದರೆ ಕಳೆದ ವರ್ಷ ರಸ್ತೆ ಮಾಡುವಾಗ ಮಳೆ ನೀರನ್ನು ನಮ್ಮ ಜಮಿನಿಗೆ ಹೊಂದಿಕೊಂಡಂತೆ ಇರುವ ಹೊಂಡಕ್ಕೆ ಹರಿದು ಬರುವಂತೆ ಮಾಡಿದರಿಂದ ಈ ಸಮಸ್ಯೆಯಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾಡಿದ ತಪ್ಪಿನಿಂದ ಕಷ್ಟಪಡುತ್ತಿದ್ದೇವೆ ಎಂದು ಜಮಿನ ಮಾಲಿಕ ರು ಆರೋಪಿಸಿದ್ದಾರೆ.
ಜನರ ಆರೋಗ್ಯ ಕಾಪಾಡಬೇಕಾದ ಇಲಾಖೆಯೇ ಕಣ್ಣುಮುಚ್ಚಿ ಕುಳಿತಿದೆ. ನಮ್ಮ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡರು. ಮಳೆಯಾದಗಲೆಲ್ಲ ನಮ್ಮ ಜಮಿನಿಗೆ ಮಳೆ ನೀರಿನ ಜತೆಗೆ ಒಳಚರಂಡಿ ನೀರು ಹರಿದು ಬರುತ್ತಿದೆ. ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಇಲ್ಲದಿದ್ದರೇ ಎಲ್ಲರೂ ಸೇರಿಕೊಂಡು ಪ್ರತಿಭಟಿಸಬೇಕಾಗುತ್ತದೆ ಎಂದು ಮಾಲಿಕರಾದ ಮಲ್ಲಪ್ಪ ಪಟ್ಟಣಶೇಟ್ಟಿ,ಲಗಪ್ಪ ಪೂಜಾರಿ ಯಮನಪ್ಪ, ಸುರೇಶ ಮಾದರ, ಮೋಹನ ಪೂಜಾರಿ, ಸೇರಿದಂತೆ ಇತರರು ಎಚ್ಚರಿಸಿದ್ದಾರೆ.
ಬಾಗಲಕೋಟೆ ಜಮಿನಲಿ ಒಳಚರಂಡಿ ನೀರು ಮಾಲಿಕರ ಪರದಾಟ : ಗ್ರಾಮ ಪಂಚಾಯಿತಿಗೆ ನಿರ್ಲಕ್ಷಕ್ಕೆ ವ್ಯಾಪಕ ಆಕ್ರೋಶ
byಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ
-
0