ಅಖಿಲ ಮನುಕುಲದ ಮೇಲೆ ಕೆಟ್ಟ ಶಕ್ತಿಗಳ ಪ್ರಭಾವ ಹೆಚ್ಚಾಗುವುದು

೧೯೯೩ ನೇ ಇಸವಿಯಿಂದ ಸೂಕ್ಷ್ಮದಲ್ಲಿನ ಬಲಿಷ್ಠ ಕೆಟ್ಟ ಶಕ್ತಿಗಳು ಸಮಾಜದ ಮೇಲೆ ನಿಯಂತ್ರಣವನ್ನು ಪಡೆದು ಅಧರ್ಮಾಚರಣೆಗೆ ನೀರುಗೊಬ್ಬರವನ್ನು ಹಾಕಿದವು ಮತ್ತು ಅಲ್ಲಿಂದಲೇ ಅಧೋಗತಿಯು ಆರಂಭವಾಯಿತು. ಅದಕ್ಕೂ ಮೊದಲು ಸಮಾಜದ ರಜ-ತಮ ಹೆಚ್ಚಾದುದರಿಂದ ವಿವಿಧ ಮಾಧ್ಯಮಗಳಿಂದ ಅಧೋಗತಿ ಆರಂಭವಾಗಿತ್ತು. ಇದರ ಪ್ರಮುಖ ಕಾರಣಗಳೆಂದರೆ ‘ಮನುಷ್ಯನ ಮಾಯೆಯ ಕಡೆಗಿರುವ ಒಲವು ಮತ್ತು ಸಾಧನೆಯಿಂದ ದೂರವಿರುವುದರಿಂದ ನಿರ್ಮಾಣವಾದ ಧರ್ಮಾಚರಣೆಯ ಅಭಾವ.’ ಏಳನೇಯ ಪಾತಾಳದಲ್ಲಿನ ದೊಡ್ಡ ಕೆಟ್ಟ ಶಕ್ತಿಗಳ ಪ್ರಭಾವದಿಂದ ಸಮಾಜದ ಅಧೋಗತಿ ವೇಗವಾಗಿ ಮತ್ತು ತೀವ್ರವಾಗಿ ಆಗುತ್ತಿದೆ. ಹೇಗೆ ಸಮಾಜವು ಹೆಚ್ಚೆಚ್ಚು ಅಧರ್ಮಿ ಆಯಿತೋ, ಹಾಗೆ ಕೆಟ್ಟ ಶಕ್ತಿಗಳು ಸಮಾಜದ ಮೇಲೆ ಹೆಚ್ಚೆಚ್ಚು ನಿಯಂತ್ರಣವನ್ನು ಪಡೆದವು ಮತ್ತು ಅದರ ಪರಿಣಾಮಸ್ವರೂಪ ವಾತಾವರಣದಲ್ಲಿನ ರಜ-ತಮ ಬಹಳ ಹೆಚ್ಚಾಗುತ್ತಿದೆ. ಈ ರಜ-ತಮದ ಹೆಚ್ಚಳದಿಂದಾಗಿ ವಾತಾವರಣ ಮತ್ತು ಸಮಾಜ ಅಸ್ಥಿರವಾಗುತ್ತಿದೆ. ‘ಇವುಗಳ ಪರಿಣಾಮವು ಭೀಕರ ನೈಸರ್ಗಿಕ ಆಪತ್ತುಗಳು ಮತ್ತು ಮೂರನೇಯ ಮಹಾಯುದ್ಧಕ್ಕೆ ಕಾರಣವಾಗುವವು’, ಎಂಬುದರಲ್ಲಿ ಸಂದೇಹವೇ ಇಲ್ಲ.
ಲೇಖನ ಸಂತರು : ಪೂ ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು