ಹಿಂದೂ ಅಂದರೆ ಏನು ? ಉತ್ತರ:ಮೇರುತಂತ್ರ ಗ್ರಂಥದಲ್ಲಿ, ಹಿಂದೂ ಶಬ್ದದ ವ್ಯುತ್ಪತ್ತಿಯನ್ನು ‘ಹೀನಾನ ಗುಣಾನ ದೂಷಯತಿ ಇತಿ ಹಿಂದೂ ‘ ಎಂದು ಕೊಡಲಾಗಿದೆ. ‘ಹೀನಾನ ಗುಣಾನ’ ಅಂದರೆ ಹೀನ, ಕನಿಷ್ಠ ರಜೋಗುಣ ಮತ್ತು ತಮೋಗುಣವನ್ನು, ‘ದೂಷಯತಿ’ ಅಂದರೆ ನಾಶಮಾಡುವವನು. ಆದುದರಿಂದ ರಜ-ತಮಾತ್ಮಕ ಹೀನ ಗುಣಗಳನ್ನು ಮತ್ತು ಅದರಿಂದಾಗುವ ಕಾಯಿಕ, ವಾಚಿಕ ಮತ್ತು ಮಾನಸಿಕ ಹೀನ ಕೃತಿಗಳನ್ನು ಯಾವನು ತಿರಸ್ಕರಿಸುತ್ತಾನೆಯೋ, ಅವನನ್ನು ಮತ್ತು ಅಖಂಡ ಸತ್ತ್ವಪ್ರಧಾನ ಪ್ರವೃತ್ತಿಯಲ್ಲಿ ತಲ್ಲೀನನಾಗಿರುವುದರಿಂದ ಯಾವನು ಈಶಭಜನೆಯೇ (ಸಾಧನೆಯೇ) ತನ್ನ ಜೀವನದ ಸಾರವಾಗಿದೆ ಎಂದು ಭಾವಿಸಿ ಈಶ್ವರಪ್ರಾಪ್ತಿ ಮಾಡಿಕೊಳ್ಳುತ್ತಾನೆಯೋ ಮತ್ತು ಸಮಾಜಕ್ಕೆ ಮಾರ್ಗದರ್ಶನ ದೊರಕಬೇಕೆಂದು ಯಾವನು ಸರಿಸಾಟಿಯಿಲ್ಲದ ಕರ್ಮಯೋಗವನ್ನು ಆಮರಣ ಆಚರಣೆ ಮಾಡುತ್ತಾನೆಯೋ, ಆತನನ್ನು ‘ಹಿಂದೂ’ ಎನ್ನಬೇಕು ಎಂಬುದು ಹಿಂದೂ ಶಬ್ದದ ವಿಸ್ತೃತ ವ್ಯುತ್ಪತ್ತಿಯಾಗಿದೆ.
ಶ್ರೀ ಪೂ ಮಲ್ಲಪ್ಪ ಪಟ್ಟಣಶೆಟ್ಟಿ
ಸನಾತನ ಸಂತರು

