ರಾಷ್ಟ್ರೀಯ ಹಬ್ಬದ ಸಮಯದಲ್ಲಿ ರಾಷ್ಟ್ರಧ್ವಜದ ಅಪಮಾನ ತಡೆಗಟ್ಟಲು ಹಿಂದೂ ಜನಜಾಗೃತಿ ಸಮಿತಿ ಮನವಿ

ಮಹಾಲಿಂಗಪುರ ಸಮಿಪದ ಮಾರಾಪೂರ ಗ್ರಾಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮನವಿ

ರಾಷ್ಟ್ರಧ್ವಜವು ರಾಷ್ಟ್ರದ ಅತ್ಯಾಭಿಮಾನವಾಗಿದೆ | 15 ಆಗಸ್ಟ್ ಮತ್ತು 26 ಜನವರಿಯಂದು ಈ ರಾಷ್ಟ್ರಧ್ವಜವನ್ನು ಅಭಿಮಾನದೊಂದಿಗೆ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ ಇದೇ ಕಾಗದ ಪ್ಲಾಸ್ಟಿಕ್‌ನ ಚಿಕ್ಕ ಚಿಕ್ಕ ರಾಷ್ಟ್ರಧ್ವಜಗಳು ರಸ್ತೆಗಳ ಮೇಲೆ, ಕಸದ ತೊಟ್ಟಿ ಮತ್ತು ಪರಂಡಿಗಳಲ್ಲ ಹರಿದ ಅವಸ್ಥೆಯಲ್ಲಿ ಅದ್ದಿರುವುದು ಕಂಡು ಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಕೂಡಲೇ ನಾಶವಾಗುವುದಿಲ್ಲ. ಆದುದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅನಾದರವಾಗುವುದನ್ನು ನೋಡಬೇಕಾಗುತ್ತದೆ. ರಾಷ್ಟ್ರಧ್ವಜದ ಈ ಅಪಮಾನವನ್ನು ತಡೆಗಟ್ಟಲು ಹಿಂದೂ ಜನಜಾಗೃತಿ ಸಮಿತಿಯ ಮೂಲಕ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (103/2011) ಸಸಲಾಗಿತ್ತು. ಈ ನಿಟ್ಟಿನಲ್ಲ ಅಂಕೆಯನ್ನು ನೀಡುವಾಗ ನ್ಯಾಯಾಲಯವು ಪ್ಲಾಸ್ಟಿಕ್ ರಾಷ್ಟ್ರಧ್ವಜಗಳಗಾಗುವ ಅವಮಾನವನ್ನು ತಡೆಗಟ್ಟುವ ಆದೇಶವನ್ನು ಸರಕಾರಕ್ಕೆ ನೀಡಿತ್ತು. ಅದಕ್ಕನುಸಾರ ಕೇಂದ್ರೀಯ ಮತ್ತು ರಾಜ್ಯ ಗೃಹ ಇಲಾಖೆ ಮತ್ತು ಶಿಕ್ಷಣ ವಿಭಾಗವೂ ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಿತ್ತು. ಅಂಗಡಿಗಳಲ್ಲ ಮತ್ತು ಇ-ಕಾಮರ್ಸ್‌ ಜಾಲತಾಣದಲ್ಲಿ ತ್ರಿವರ್ಣಗಳ ಬಣ್ಣದ ಮಾಸ್ಕ್‌ಗಳ ಮಾರು ನಡೆದಿದೆ. ತ್ರಿವರ್ಣಗಳ ಮಾಸ್ಕ್‌ಗಳನ್ನು ಬಳಸುವುದರಿಂದ ರಾಷ್ಟ್ರಧ್ವಜದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. 'ತ್ರಿವರ್ಣ ಮಾಸ್' ದೇಶಪ್ರೇಮದ ಪ್ರದರ್ಶನದ ಮಾಧ್ಯಮವಲ್ಲ, ಆದರೆ ಧ್ವಜಸಂಹಿತೆಗನುಸಾರ 'ರಾಷ್ಟ್ರಧ್ವಜದ ಈ ರೀತಿಯ ಬಳಕೆ ಧ್ವಜದ ಅಪಮಾನವೇ ಆಗಿದೆ. ಇದು 'ರಾಷ್ಟ್ರದ ಗೌರವದ ಅಪಮಾನ ನಿವಾರಣೆ ಅಧಿನಿಯಮ 1971 ರ ಉಲ್ಲಂಘನೆಯಾಗಿದೆ. ಆದುದರಿಂದ 'ತ್ರಿವರ್ಣ ಮಾಸ್' ಖರೀದಿಸದಂತೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕು. ದೇಶದ ಸ್ವಾತಂತ್ರ್ಯ ಸಮರದಲ್ಲಿ ಸಮಾವೇಶಗೊಂಡ ದೇಶಭಕ್ತರು ಆಂಗ್ಲರ ಅತ್ಯಾಚಾರಗಳ ಸಮಯದಲ್ಲಿ ಕೈಯಲ್ಲ ತೆಗೆದುಕೊಂಡ ರಾಷ್ಟ್ರ ಧ್ವಜಗಳು ಭೂಮಿಯ ಮೇಲೆ ಬೀಳಬಾರದೆಂದು ಅನೇಕ ಲಾಠಿಗಳ ಹೊಡೆತಗಳನ್ನು ತಿಂದರು. ಅತ್ಯಾಚಾರವನ್ನು ಸಹಿಸಿದರು. ರಾಷ್ಟ್ರಧ್ವಜದ ಅನಾದರವನ್ನು ತಡೆಗಟ್ಟಲು ಕ್ರಾಂತಿಕಾರಿಗಳು ತಮ್ಮ ಪ್ರಾಣಗಳನ್ನೂ

ಆರ್ಪಿಸಿದ್ದಾರೆ. ಹೀಗಿದ್ದರೂ ಚಿಕ್ಕ ಮಕ್ಕಳಿಗೆ ಆಡಲು, ವಾಹನಗಳ ಮೇಲೆ ಅಂಟಿಸುವ ಉದ್ದೇಶದಿಂದ ತೆಗೆದುಕೊಳ್ಳಲಾದ ಕಾಗದ ಮತ್ತು ಪ್ಲಾಸ್ಟಿಕ್ ಧ್ವಜಗಳು ರಸ್ತೆಗಳಲ್ಲಿ ಮತ್ತು ಕಸದ ತೊಟ್ಟಿಗಳಲ್ಲಿ ನೋಡಲು ಸಿಗುತ್ತವೆ ಮತ್ತು ಅವು ಕಾಲೆಳಗೆ ತುಳಯಲ್ಪಡುತ್ತವೆ. ಆದುದರಿಂದ ರಾಷ್ಟ್ರಧ್ವಜಕ್ಕೆ ಬಲದಾನ ನೀಡುವ ಕ್ರಾಂತಿಕಾರರ, ಇದು ಒಂದು ರೀತಿಯಲ್ಲ, ಕ್ರೂರ ತಿರಸ್ಕಾರವೇ ಆಗಿದೆ. ಕೆಲವು ಜನರು ತ್ರಿವರ್ಣಗಳ ರೀತಿಯಲ್ಲಿ ತಮ್ಮ ಮುಖವನ್ನು ಬಣ್ಣದಿಂದ ಬಳದುಕೊಳ್ಳುತ್ತಾರೆ ಮತ್ತು ರಾಷ್ಟ್ರಧ್ವಜದ ಬಣ್ಣಗಳ ಬಟ್ಟೆಗಳನ್ನು ಧರಿಸಿ ತಿರುಗಾಡುತ್ತಾರೆ. ಇದರಿಂದಲೂ ರಾಷ್ಟ್ರಧ್ವಜದ ಅಪಮಾನವಾಗುತ್ತದೆ. ಆದುದರಿಂದ ರಾಷ್ಟ್ರಧ್ವಜದ ಅಪಮಾನ ಅಥವಾ ಅನಾದರವಾಗುವ ಕೃತ್ಯಗಳು ತಮ್ಮ ವಿದ್ಯಾಲಯದ ವಿದ್ಯಾರ್ಥಿಗಳಿಂದ ಆಗದಂತೆ, ವಿದ್ಯಾಲಯಗಳಲ್ಲಿ ತಿಳುವಳಿಕೆ ನೀಡಿರಿ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು