ಆಕಸ್ಮಿಕವಾಗಿ ಜಾನುವಾರು ಮರಣ ಹೊಂದಿದ್ರೆ ಸರ್ಕಾರದ ಈ ಯೋಜನೆಯಡಿ ಸಿಗಲಿದೆ ರೂ.10,000!

ಆಕಸ್ಮಿಕವಾಗಿ ಜಾನುವಾರು ಮರಣ ಹೊಂದಿದ್ರೆ ಸರ್ಕಾರದ ಈ ಯೋಜನೆಯಡಿ ಸಿಗಲಿದೆ ರೂ.10,000!

ಪಶುಪಾಲನಾ & ಪಶುವೈದ್ಯಕೀಯ ಸೇವಾ ಇಲಾಖೆ ಪ್ರಕಟಣೆ ವಿವರ ಹೀಗಿದೆ
ಜಾನುವಾರು ಮಾಲೀಕರಿಗೆ ತಿಳಿಸುವುದೇನೆಂದರೆ 2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿಯಲ್ಲಿ ಆಕಸ್ಮಿಕ ಮರಣ ಹೊಂದಿದ ಆಡು & ಕುರಿಗಳಿಗೆ ಪ್ರತಿಯೊಂದಕ್ಕೆ ಗರಿಷ್ಟ ರೂ.5,000/-ದಂತೆ ಹಾಗೂ ದನ & ಎಮ್ಮೆಗಳಿಗೆ ಗರಿಷ್ಟ ರೂ.10,000/-ದಂತೆ ಪರಿಹಾರ ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ.

ಜಾನುವಾರು ಮಾಲೀಕರು ಸದರಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮೃತಪಟ್ಟ ಜಾನುವಾರುವಿನ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಸ್ಥಳೀಯ ಪಶುವೈದ್ಯರಿಂದ ದೃಢೀಕರಿಸಿದ ನಂತರವೇ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದೆಂದು ಈ ಮೂಲಕ ಸೂಚನೆ ಹೊರಡಿಸಲಾಗಿದೆ.
ಪಶುಸಖಿಯರು ಮೃತ ಪಟ್ಟ ಜಾನುವಾರುವಿನ ಮಾಲೀಕರಿಗೆ ಈ ಲಾಭವನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಡುವಂತೆ ಕೋರಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಮ್ಮ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಎಲ್ಲಿ ಅರ್ಜಿ ಸಲ್ಲಿಸಬೇಕು & ಅಗತ್ಯ ದಾಖಲಾತಿಗಳೇನು?
ರೈತರು ಜಾನುವಾರುಗಳು ಮರಣ ಹೊಂದಿದ್ದ ತಕ್ಷಣ ಸ್ಥಳೀಯ ಪಶು ಆಸ್ಪತ್ರೆಗೆ ಭೇಟಿ ಮಾಡಿ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳೀಯ ಪಶುವೈದ್ಯರಿಂದ ದೃಢೀಕರಣ ಪತ್ರ ಪಡೆದುಕೊಳ್ಳಬೇಕು ನಂತರ ಅರ್ಜಿದಾರರ ಅಧಾರ್ ಕಾರ್ಡ್ & ಬ್ಯಾಂಕ್ ಪಾಸ್ ಬುಕ್ ಸಮೇತ ನಿಮ್ಮ ತಾಲೂಕಿನ ಪಶುಪಾಲನಾ & ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಇನ್ನು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ: 8277100200
ಈ ಸಹಾಯವಾಣಿಯು 24/7 ಗಂಟೆಯ ವರೆಗೂ ಕಾರ್ಯ ನಿರ್ವಹಿಸುತ್ತದೆ. ರೈತರು ಯಾವ ಸಮಯದಲ್ಲಿ ಬೇಕಾದರು ಕರೆ ಮಾಡಿ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.
ರೈತರು ಈ ಸಹಾಯವಾಣಿಯ ಮೂಲಕ ಯಾವೆಲ್ಲಾ ಮಾಹಿತಿ ಪಡೆಯಬವುದು
ಇಲಾಖೆಯು ಅನುಷ್ಠಾನ ಗೊಳಿಸುವ ಯೋಜನೆಗಳ ಬಗ್ಗೆ ಮಾಹಿತಿ.
ಹೈನುಗಾರಿಕೆ, ಕುರಿ & ಮೇಕೆ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಕುರಿತಂತೆ ಇಲಾಖೆಯ ತರಬೇತಿ ಕೇಂದ್ರದಲ್ಲಿ ನಡೆಯುವ ತರಬೇತಿ ಯಾವ ದಿನ ನಡೆಯುತ್ತದೆ ಇತ್ಯಾದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಜಾನುವಾರು ರೋಗಗಳು, ಲಸಿಕಾ ಕಾರ್ಯಕ್ರಮ ಮತ್ತು ಜಾನುವಾರು ರೋಗ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ವಿವರಣೆ.
ದೇಶಿ ಹಾಗೂ ವಿದೇಶಿ ಜಾನವಾರು ತಳಿಯ ಬಗ್ಗೆ ಮಾಹಿತಿ.
ಜಾನುವಾರುಗಳಿಗೆ ನಿಯಮಿತವಾಗಿ ನೀಡಬೇಕಾಗಿರುವ ಲಸಿಕೆಗಳ ಕುರಿತು ವಿವರಣೆ.
ಪಶುಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯುವ ಸಾಲ ಸೌಲಭ್ಯದ ಕುರಿತು ಮಾಹಿತಿ.
ಮಿಶ‍್ರತಳಿ ಹಸು, ಕುರಿ & ಮೇಕೆ, ಹಂದಿಗಳ ಅಂದಾಜು ಬೆಲೆ ಮತ್ತು ಅವುಗಳ ಲಭ್ಯತೆ ಕುರಿತಂತೆ ಸೂಕ್ತ ಸ್ಥಳಗಳ ವಿವರ.
ಯಶಸ್ವಿ ಹೈನುಗಾರಿಕೆಗೆ ಅಗತ್ಯವಿರುವ ಮೇವಿನ ಬೆಳೆಯ ಬಗ್ಗೆ ಮಾಹಿತಿ.
ತುರ್ತು ಪಶುವೈದ್ಯ ಸೇವೆಗಾಗಿ ಒಳಬರುವ ಕರೆಯನ್ನು ಹತ್ತಿರದ ಇಲಾಖಾ ತಾಂತ್ರಿಕ ಸಿಬ್ಬಂದಿ/ಅಧಿಕಾರಿಗಳಿಗೆ ವರ್ಗಾಯಿಸಿ, ಅಗತ್ಯ ಸೇವೆ ಸೌಲಭ್ಯಗಳು ದೊರೆಯುವಂತೆ ಸಹಕರಿಸುವುದು
ಪಶುಪಾಲನಾ & ಪಶುವೈದ್ಯಕೀಯ ಸೇವಾ ಇಲಾಖೆಯ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ




ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು