ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)

ಏನಿದು ಸಿಎಎ?
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿದೇಶಿ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಮುಸ್ಲಿಮೇತರರಿಗೆ ಧರ್ಮದ ಆಧಾರದಲ್ಲಿ ಪೌರತ್ವ ನೀಡಲಾಗುತ್ತದೆ. 2014ರ ಡಿಸೆಂಬರ್ 31ಕ್ಕೂ ಮುನ್ನ ಈ ಮೂರು ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಮಾತ್ರ ಇದರ ಅನುಕೂಲ ದೊರೆಯಲಿದೆ.
ಜತೆಗೆ ಅಕ್ರಮ ವಲಸಿಗರ ವಿರುದ್ಧ ದಾಖಲಾಗಿರುವ ಪ್ರಕರಣಗಳು ರದ್ದಾಗುತ್ತವೆ. ಪೌರತ್ವಕ್ಕೆ ಅರ್ಜಿ ಸಲ್ಲಿಸಿದ ತಕ್ಷಣವೇ ಈ ಜನರಿಗೆ ಭಾರತದ ಪ್ರಜೆಗೆ ದೊರೆಯುವ ಎಲ್ಲಾ ಹಕ್ಕುಗಳು ಮತ್ತು ಸವಲತ್ತುಗಳು ಕೂಡ ದೊರೆಯುತ್ತವೆ. ಅಸ್ಸಾಂ ಎನ್‌ಆರ್‌ಸಿಯಿಂದ ಹೊರಗೆ ಇಡಲಾದ ಹಿಂದೂಗಳು, ಬೌದ್ಧ, ಕ್ರೈಸ್ತ, ಜೈನ ಧರ್ಮೀಯರಿಗೆ ಕೂಡ ಪೌರತ್ವ ದೊರೆಯಲಿದೆ. ಆದರೆ, ಈ ದೇಶಗಳಿಂದ ಅಕ್ರಮವಾಗಿ 
ವಲಸೆ ಬಂದಿರುವ ಮುಸ್ಲಿಮರಿಗೆ ಭಾರತದ ಪೌರತ್ವ ದೊರೆಯುವುದಿಲ್ಲ.
ಇಡೀ ಪ್ರಕ್ರಿಯೆ ಆನ್‌ಲೈನ್‌ 
ಭಾರತೀಯ ಪೌರತ್ವ ಪಡೆಯಲು ಈಗಾಸಂಸತ್‌ನ ಉಭಯ ಸದನಗಳಲ್ಲೂ 2019ರಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆಯು ಪಾಸ್ ಆಗಿ ರಾಷ್ಟ್ರಪತಿಗಳ ಅಂಕಿತ ಬಿದ್ದಿತ್ತು. ಆದರೂ ಅನುಷ್ಟಾನಕ್ಕೆ ಮಾತ್ರ ಬಂದಿರಲಿಲ್ಲ. ಸಿಎಎ ಕಾಯ್ದೆ ಮೂಲಕ ಮುಸ್ಲಿಂ ಸಮುದಾಯವನ್ನ ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ಆರೋಪದ ಜೊತೆಯಲ್ಲೇ ಇದಕ್ಕೆ ಎನ್‌ಆರ್‌ಸಿ ಥಳುಕನ್ನೂ ಹಾಕಲಾಯ್ತು. ಈ ಕಾಯಿದೆಯು ತಾರತಮ್ಯ ನೀತಿಯಿಂದ ಕೂಡಿದ್ದು, ಇದನ್ನು ವಾಪಾಸ್‌ ಪಡೆಯಬೇಕು ಎಂದು ಮುಸ್ಲಿಂ ಸಮುದಾಯ ಹಾಗೂ ಪ್ರತಿಪಕ್ಷಗಳಿಂದ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದಿದ್ದವು. ಗಲಭೆಗಳಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಹೀಗಾಗಿ, ಸಿಎಎ ಕಾಯ್ದೆ ಜಾರಿ ನೆನೆಗುದಿಗೆ ಬಿದ್ದಿತ್ತು. ಇದೀಗ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗೆ ಕೆಲವೇ ದಿನ ಇರುವ ಹೊತ್ತಲ್ಲಿ ಕೇಂದ್ರ ಸರ್ಕಾರವು ಸಿಎಎ ಜಾರಿಗೆ ಅಧಿಸೂಚನೆ ಪ್ರಕಟಿಸಿದೆ.ಗಲೇ ನಿಯಮಗಳು ಸಿದ್ಧವಾಗಿದೆ. ಈ ಸಂಬಂಧ ಆನ್‌ಲೈನ್‌ ಪೋರ್ಟಲ್‌ ಕೂಡ ಸಿದ್ಧವಿದೆ. ಇಡೀ ಪ್ರಕ್ರಿಯೆ ಆನ್‌ಲೈನ್‌ ರೂಪದಲ್ಲಿಇರಲಿದೆ. ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವವರು ಭಾರತಕ್ಕೆ ವಲಸೆ ಬಂದ ವರ್ಷವನ್ನು ನಮೂದಿಸಬೇಕಾಗುತ್ತದೆ. ಈ ಬಗ್ಗೆ ಗೃಹ ವ್ಯವಹಾರಗಳ ವಕ್ತಾರರ ಎಕ್ಸ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ

  5 ವರ್ಷದ ಹಿಂದೆ ಕಾಯ್ದೆ ಪಾಸ್‌ ಆಗಿತ್ತು!
ಸಂಸತ್‌ನ ಉಭಯ ಸದನಗಳಲ್ಲೂ 2019ರಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆಯು ಪಾಸ್ ಆಗಿ ರಾಷ್ಟ್ರಪತಿಗಳ ಅಂಕಿತ ಬಿದ್ದಿತ್ತು. ಆದರೂ ಅನುಷ್ಟಾನಕ್ಕೆ ಮಾತ್ರ ಬಂದಿರಲಿಲ್ಲ. ಸಿಎಎ ಕಾಯ್ದೆ ಮೂಲಕ ಮುಸ್ಲಿಂ ಸಮುದಾಯವನ್ನ ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ಆರೋಪದ ಜೊತೆಯಲ್ಲೇ ಇದಕ್ಕೆ ಎನ್‌ಆರ್‌ಸಿ ಥಳುಕನ್ನೂ ಹಾಕಲಾಯ್ತು. ಈ ಕಾಯಿದೆಯು ತಾರತಮ್ಯ ನೀತಿಯಿಂದ ಕೂಡಿದ್ದು, ಇದನ್ನು ವಾಪಾಸ್‌ ಪಡೆಯಬೇಕು ಎಂದು ಮುಸ್ಲಿಂ ಸಮುದಾಯ ಹಾಗೂ ಪ್ರತಿಪಕ್ಷಗಳಿಂದ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದಿದ್ದವು. ಗಲಭೆಗಳಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಹೀಗಾಗಿ, ಸಿಎಎ ಕಾಯ್ದೆ ಜಾರಿ ನೆನೆಗುದಿಗೆ ಬಿದ್ದಿತ್ತು. ಇದೀಗ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗೆ ಕೆಲವೇ ದಿನ ಇರುವ ಹೊತ್ತಲ್ಲಿ ಕೇಂದ್ರ ಸರ್ಕಾರವು ಸಿಎಎ ಜಾರಿಗೆ ಅಧಿಸೂಚನೆ ಪ್ರಕಟಿಸಿದೆ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು