ಬೆಂಗಳೂರು (ಕರ್ನಾಟಕ) - ಪೊಲೀಸರ ಮೇಲೆ ಹರಿತವಾದ ಆಯುಧವನ್ನು ಎಸೆದು ಪರಾರಿಯಾಗಲು ಯತ್ನಿಸಿದ ಕುಖ್ಯಾತ ದರೋಡೆಕೋರ ಸಯ್ಯದ್ ಮಜರ್ ಅಕಾ ಬಚ್ಚಾ ಮಜರ್ ನನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ಆತನಿಂದ ನಾಲ್ಕು ಚಕ್ರದ ವಾಹನ ಹಾಗೂ ಹರಿತವಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಮೂವರ ಬಂಧನ
ಬೆಂಗಳೂರಿನಲ್ಲಿ ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬನ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪದ ಮೇಲೆ ಸಯ್ಯದ್ ಅಪ್ಸರ್, ಸೈಯ್ಯದ್ ಮೋಯಿನ್ ಮತ್ತು ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಇವರಿಂದ 10 ಸಾವಿರ ಮೌಲ್ಯದ ಮೊಬೈಲ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.