ಅಲ್ವಾರ್ (ರಾಜಸ್ಥಾನ) - ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮಸೀದಿಯ ಮುಂದೆ ಮೆರವಣಿಗೆಯಲ್ಲಿ ಬಂದ ಹಿಂದೂ ಕುಟುಂಬದ ವರನ ಮೇಲೆ ಮುಸ್ಲಿಂ ಗುಂಪು ಹಲ್ಲೆ ನಡೆಸಿದೆ. ದಾಳಿಯಲ್ಲಿ ಹಲವು ಮದುವೆ ಅತಿಥಿಗಳು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು 4 ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ಸೌಜನ್ಯ ಕ್ಯಾಪಿಟಲ್ ಟಿವಿ ಉತ್ತರ ಪ್ರದೇಶ
ಮಾಧ್ಯಮ ವರದಿಗಳ ಪ್ರಕಾರ, ಮದುವೆ ಮೆರವಣಿಗೆಯಲ್ಲಿ ‘ಡಿಜೆ’ ನುಡಿಸುತ್ತಿತ್ತು. ಮೆರವಣಿಗೆ ಗ್ರಾಮದ ಮೂಲಕ ಸಾಗಿ ಮಸೀದಿ ಮುಂಭಾಗ ತಲುಪಿದಾಗ ಮುಸ್ಲಿಂ ಸಮುದಾಯದ ಕೆಲವರು ಹೊರಬಂದು ‘ಡಿಜೆ’ ನಿಲ್ಲಿಸುವಂತೆ ಮನವಿ ಮಾಡಿದರು. ಮದುವೆಗೆ ಬಂದಿದ್ದ ಅತಿಥಿಗಳು ನಿರಾಕರಿಸಿದಾಗ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಇದ್ದಕ್ಕಿದ್ದಂತೆ, ಮುಸ್ಲಿಂ ಗುಂಪು ಮದುವೆಗೆ ಬಂದ ಅತಿಥಿಗಳ ಮೇಲೆ ಕಲ್ಲು ತೂರಾಟವನ್ನು ಪ್ರಾರಂಭಿಸಿತು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿತು. ಮದುವೆಯಲ್ಲಿದ್ದ ಮಹಿಳೆಯರು ಮತ್ತು ಹುಡುಗಿಯರು ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ. ದಾಳಿ ಮಾಡಿದ ವ್ಯಕ್ತಿಗಳು ಪೊಲೀಸರನ್ನು ನೋಡಿ ಪರಾರಿಯಾಗಿದ್ದಾರೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.