ಗುಜರಾತಿನ ವಗರದಲ್ಲಿ ಹಿಂದೂ ಅಂಗಡಿಯವನ ಮೇಲೆ ಮುಸ್ಲಿಂ ಮತಾಂಧರಿಂದ ಹಲ್ಲೆ

ವಗಾರ (ಗುಜರಾತ್) - ಭರೂಚ್ ಜಿಲ್ಲೆಯ ವಗಾರ ತಾಲೂಕಿನ ಒಚ್ಚನ್ ಗ್ರಾಮದಲ್ಲಿ ಕಿಶನ್ ಕುಮಾರ್ ಕುಮಾವತ್ ಎಂಬ ಹಿಂದೂ ಉದ್ಯಮಿ ಮತ್ತು ಅವರ ಪತ್ನಿಯ ಮೇಲೆ ಮತಾಂಧ ಮುಸ್ಲಿಂ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಕಿಶನ್ ಕುಮಾರ್ ಶ್ರೀರಾಮ ದೇವಸ್ಥಾನದ ಹೊರಗೆ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಈ ವೇಳೆ ಸರಪಂಚ್ ಹಾಗೂ ಕಿಶನ್ ಅವರನ್ನು ರಕ್ಷಿಸಲು ಮುಂದಾದವರಿಗೂ ಥಳಿಸಿದ್ದಾರೆ. ಈ ಪ್ರಕರಣದಲ್ಲಿ 2 ಅಪ್ರಾಪ್ತರು ಸೇರಿದಂತೆ 11 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯು 21 ಏಪ್ರಿಲ್ 2024 ರ ರಾತ್ರಿ ಸಂಭವಿಸಿದೆ.




 ರಾತ್ರಿ 10:30ಕ್ಕೆ ಆರೋಪಿ ಅಬ್ದುಲ್ ಅಹಮದ್ ಪಟೇಲ್ ನ ಇಬ್ಬರು ಪುತ್ರರು ಕಿಶನ್ ಅಂಗಡಿಯಿಂದ ಕೆಲವು ವಸ್ತುಗಳನ್ನು ಖರೀದಿಸಲು ಬಂದಿದ್ದರು. ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡು ಪರಸ್ಪರ ನಿಂದಿಸಿದ್ದಾರೆ. ಜಗಳವನ್ನು ನೋಡಿದ ಇತರ ಮುಸ್ಲಿಮರು ಜಮಾಯಿಸಿ ಕಿಶನ್ ಕುಮಾರ್ ಅವರನ್ನು ಥಳಿಸಿ ಅವರ ಅಂಗಡಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು