ಶ್ವೇತಭವನಕ್ಕೆ White House ನ್ ಮೊದಲ ಮಹಿಳಾ ಮುಖ್ಯಸ್ಥರಾಗಿ ಸೂಸಿ ವೈಲ್ಸ್ ನೇಮಿಸಿದ ಟ್ರಂಪ್ / President-elect Trump appoints Susie Wiles chief of staff, Marking Historic first
ಶ್ವೇತಭವನಕ್ಕೆ White House ನ್ ಮೊದಲ ಮಹಿಳಾ ಮುಖ್ಯಸ್ಥರಾಗಿ ಸೂಸಿ ವೈಲ್ಸ್ ನೇಮಿಸಿದ ಟ್ರಂಪ್ / President-elect Trump appoints Susie Wiles chief of staff, Marking Historic first
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಪ್, ತಮ್ಮ ಪ್ರಚಾರ ವ್ಯವಸ್ಥಾಪಕಿ ಸೂಸಿ ವೈಲ್ಸ್ (Susie Wiles) ಅವರನ್ನು (ಮಹಿಳಾ ಚೀಫ್ ಆಫ್ ಸ್ಟಾಫ್) ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಅಮೆರಿಕ ಇತಿಹಾಸದಲ್ಲಿಯೇ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಭಾಜನರಾಗಿದ್ದಾರೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ವಿರುದ್ಧ ಜಯಭೇರಿ ಬಾರಿಸಿರುವ ಟ್ರಂಪ್, ಶ್ವೇತಭವನಕ್ಕೆ ವಾಪಸಾಗುವ ಹೆಜ್ಜೆಯಲ್ಲಿ ಮಾಡಿರುವ ಮೊದಲ ನೇಮಕ ಇದಾಗಿದೆ. 2025ರ ಜನವರಿ 20ರಂದು ಟ್ರಂಪ್ ಅವರು ಅಧಿಕಾರ ಸ್ವೀಕರಿಸಲಿದ್ದು. ಅದಕ್ಕೂ ಮುನ್ನ ವಿವಿಧ ಹುದ್ದೆಗಳಿಗೆ ಸರಣಿ ನೇಮಕಾತಿಗಳು ನಡೆಯಲಿವೆ.
ಅಮೆರಿಕದ ಉಪಾಧ್ಯಕ್ಷರಾಗಿ ಅಯ್ಕೆಯಾಗಿರುವ ಜೆ.ಡಿ. ವ್ಯಾನ್ಸ್ ಈ ಆಯ್ಕೆಯನ್ನು ದೃಢಪಡಿಸಿದ್ದಾರೆ. "ಅಮೆರಿಕದ 45 ಮತ್ತು 47ನೇ ಅಧ್ಯಕ್ಷರಾದ ಡೊನಾಲ್ಡ್ ಜೆ.ಟ್ರಂಪ್ ಅವರು, 2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಪ್ರಚಾರ ವ್ಯವಸ್ಥಾಪಕಿ ಸೂಸನ್ ಸುಮೆರಲ್ ವೈಲ್ಸ್ ಅವರನ್ನು ಶ್ವೇತಭವನ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಘೋಷಿಸಿದ್ದಾರೆ" ಎಂದು ವ್ಯಾನ್ಸ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
🔷 ಯಾರಿದು ಸೂಸಿ ವೈಲ್ಸ್?
ರಾಷ್ಟ್ರೀಯ ಫುಟ್ಬಾಲ್ ಲೀಗ್‌ನ (ಎನ್‌ಎಫ್‌ಎಲ್) ಆಟಗಾರ ಮತ್ತು ಕ್ರೀಡಾ ವೀಕ್ಷಕವಿವರಣೆಗಾರ ಪ್ಯಾಟ್ ಸಮ್ಮರಾಲ್ ಅವರ ಮಗಳಾದ ಸೂಸಿ, 1970ರ ದಶಕದಲ್ಲಿ ನ್ಯೂಯಾರ್ಕ್ ರಿಪಬ್ಲಿಕನ್ ಜಾಕ್ ಕೆಂಪ್ ಅವರ ವಾಷಿಂಗ್ಟನ್ ಹೌಸ್ ಮೂಲಕ ರಾಜಕೀಯ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಅವರು 1980ರ ದಶಕದಲ್ಲಿ ರೊನಾಲ್ಡ್ ರೀಗನ್ ಅವರ ಅಧ್ಯಕ್ಷೀಯ ಪ್ರಚಾರ ತಂಡ ಸೇರಿಕೊಂಡಿದ್ದರು. ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕಾಲಿರಿಸಿದ್ದರು. 2012ರಲ್ಲಿ ಉಟಾಹ್ ಗವರ್ನರ್ ಜಾನ್ ಹಂಟ್ಸ್‌ಮನ್ ಅವರ ಪ್ರಚಾರ ಹೊಣೆಯನ್ನು ಕೆಲವು ಸಮಯ ನಿಭಾಯಿಸಿದ್ದ ಅವರು, 2016ರಲ್ಲಿ ಪ್ಲೋರಿಡಾದಲ್ಲಿ ಡೊನಾಲ್ಡ್ ಟ್ರಂಪ್ ಪ್ರಚಾರ ಕಾರ್ಯದ ನೇತೃತ್ವ ವಹಿಸಿದ್ದರು. ಈ ಮೂಲಕ ಟ್ರಂಪ್ ಅವರ ಅಧ್ಯಕ್ಷ ಗಾದಿಯ ಹಾದಿಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.
🔷 ಚೀಫ್ ಆಫ್ ಸ್ಟಾಫ್ ಜವಾಬ್ದಾರಿ ಏನು?
ಚೀಫ್ ಆಫ್ ಸ್ಟಾಫ್ ಸರ್ಕಾರದಲ್ಲಿ ಕ್ಯಾಬಿನೆಟ್ ಸ್ಥಾನವಾಗಿದೆ, ಇದನ್ನು ಯುನೈಟೆಡ್ ಸ್ಟೇಟ್ಸ್ ನ್ ಅಧ್ಯಕ್ಷರು ನೇಮಿಸುತ್ತಾರೆ. ಇದಕ್ಕೆ ಸೆನೆಟ್ ಅನುಮೋದನೆ ಅಗತ್ಯವಿಲ್ಲ. ಈ ಹುದ್ದೆಗೆ ನೇಮಕಗೊಂಡ ವ್ಯಕ್ತಿ ಅಧ್ಯಕ್ಷರಿಗೆ ಮಾತ್ರ ವರದಿ ಮಾಡುತ್ತಾರೆ. ಚೀಫ್ ಆಫ್ ಸ್ಟಾಫ್ ಅಧ್ಯಕ್ಷರ ವಿಶ್ವಾಸಾರ್ಹರಾಗಿ ಕಾರ್ಯನಿರ್ವಹಿಸುತ್ತಾರೆ, ಅಧ್ಯಕ್ಷರ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುತ್ತಾರೆ ಮತ್ತು ಸ್ಪರ್ಧಾತ್ಮಕ ರಾಜಕೀಯ ಮತ್ತು ನೀತಿ ಆದ್ಯತೆಗಳನ್ನು ಸಮತೋಲನಗೊಳಿಸುತ್ತಾರೆ. ಅವರಿಗೆ ಗೇಟ್‌ಕೀಪರ್ ಎಂಬ ಪದವನ್ನು ಸಹ ನೀಡಲಾಗುತ್ತದೆ, ಯಾರು ಅಧ್ಯಕ್ಷರನ್ನು ಭೇಟಿ ಮಾಡಬೇಕೆಂಬುದನ್ನು ನಿರ್ವಹಿಸುತ್ತಾರೆ. ಅಲ್ಲದೆ, ಅಧ್ಯಕ್ಷರನ್ನು ಭೇಟಿ ಮಾಡುವ ಜನರನ್ನು ಯಾವಾಗ ಮತ್ತು ಹೇಗೆ ಕರೆಯಬೇಕು ಎಂಬುದನ್ನು ಸಹ ಮುಖ್ಯಸ್ಥರು ನಿರ್ಧರಿಸುತ್ತಾರೆ.
🎂ಇಂದು ಸರ್ ಸಿ.ವಿ.ರಾಮನ್ ಅವರ ಜನ್ಮದಿನದ ಶುಭಾಶಯಗಳು,🌹🙏
💐ಪೂರ್ಣ ಹೆಸರು =
ಸರ್ ಚಂದ್ರಶೇಖರ ವೆಂಕಟರಾಮನ್
💐ಜನನ =ನವೆಂಬರ್ 7, 1888 ರಲ್ಲಿ ತಮಿಳುನಾಡುನ ತಿರುಚಿನಾಪಳ್ಳಿ ಜಿಲ್ಲೆಯ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು
💐ತಂದೆ =ಚಂದ್ರಶೇಖರ್
💐ತಾಯಿ =ಪಾರ್ವತಿ
✍️ಬಿರುದು =ರಾಮನ್ ಎಫೆಕ್ಟ್ ಥಿಯರಿಯ ಆವಿಷ್ಕಾರದ ನೆನಪಿಗಾಗಿ ಪ್ರತಿವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ,📚
💐1930 ರಲ್ಲಿ ರಾಮನ್ ಎಫೆಕ್ಟ್ ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ
📜ಗೌರವ ಪ್ರಶಸ್ತಿಗಳು📜
🔹ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ (1924)
🔸ನೈಟ್ ಹುಡ್ ಪ್ರಶಸ್ತಿ (1929)
🔹ನೋಬೆಲ್ ಪ್ರಶಸ್ತಿ (1930)
🔸ಮೈಸೂರು ಮಹಾರಾಜರಿಂದ, 'ರಾಜ ಸಭಾ ಭೂಷಣ ಗೌರವ' (1935)
ಭಾರತ ರತ್ನ ಪ್ರಶಸ್ತಿ (1954)
🔹ಲೆನಿನ್ ಶಾಂತಿ ಪ್ರಶಸ್ತಿ (1957)
Tags
ಇಂದಿನ ವಿಶೇಷತೆ