Lesson-1 ಪಾಠ - 1



ನಾವು ಶಬ್ದಗಳನ್ನು ರಚಿಸುವಾಗ ಉಚ್ಚಾರಕ್ಕೆ ಅನುಗುಣವಾಗಿ ಸ್ವರ ಮತ್ತು ವ್ಯಂಜನಗಳನ್ನು ಜೋಡಿಸಿ ಓದಬೇಕು. ಆದರೆ ಕೆಲವು ಶಬ್ದಗಳಲ್ಲಿ ಕೆಲವು ವ್ಯಂಜನ ಮತ್ತು ಸ್ವರಗಳ ಉಚ್ಛಾರ ಆಗುವದಿಲ್ಲ. ಅವನ್ನು ಜೋಡಿಸಿ ಬರೆಯೋಣ.






ಇಂಗ್ಲೀಷ್ ವರ್ಣಮಾಲೆಗಳು
ಇಂಗ್ಲೀಷ್ ಮೂಲಾಕ್ಷರಗಳು
ಎಲ್ಲ ಭಾಷೆಗಳಲ್ಲಿ ಇರುವಂತೆ ಇಂಗ್ಲೀಷಿನಲ್ಲಿಯೂ ಮೂಲಾಕ್ಷರಗಳಿವೆ. ಸಾಮಾನ್ಯವಾಗಿ ಎಲ್ಲರೂ ಬರಹದಲ್ಲಿ ಮತ್ತು ಮುದ್ರಣದಲ್ಲಿ ಉಪಯೋಗಿಸುವ 1ನೆಯ ಪ್ರಕಾರದ ದೊಡ್ಡ ಹಾಗೂ 2ನೆಯ ಪ್ರಕಾರದ ಸಣ್ಣ ಅಕ್ಷರಗಳನ್ನು ಇಲ್ಲಿ ಕೊಡಲಾಗಿದೆ.
ಕೆಳಗೆ ಬರೆದ ಅಕ್ಷರಗಳನ್ನು ಓದಿರಿ-
Karnataka ಕರ್ನಾಟಕ, Dharwad ಧಾರವಾಡ Patil ಪಾಟೀಲ Ravi ರವಿ, Sudha ಸುಧಾ , Arun ,ಅರುಣ Malini ಮಾಲಿನಿ, Kamala ಕಮಲಾ.
ಮೇಲಿನ ಅಕ್ಷರಗಳನ್ನು ಓದುವಾಗ ತಮ್ಮ ಲಕ್ಷ್ಯಕ್ಕೆ ಬಂದದ್ದೇನೆಂದರೆ ಮೊದಲಿನ ಅಕ್ಷರವು ದೊಡ್ಡದು, 1 ನೆಯ ಪ್ರಕಾರದ್ದು ಆಗಿದೆ. ಉಳಿದವುಗಳು ಸಣ್ಣ ಅಕ್ಷರಗಳು 2ನೆಯ ಪ್ರಕಾರದವು ಇವೆ. ಇದರಿಂದ ಸ್ಪಷ್ಟವಾಗಿ * ತಿಳಿಯುವದೇನೆಂದರೆ ಬಿಡಿ ಶಬ್ದಗಳನ್ನು ಬರೆಯುವಾಗ, ವಾಕ್ಯಗಳನ್ನು ಬರೆಯು ವಾಗ ವಸ್ತುಗಳ ಹೆಸರು, ಮನುಷ್ಯನ ಹೆಸರು, ಅಲ್ಲದೆ ವಾರ, ದಿವಸಗಳ, ತಿಂಗಳುಗಳ ಹೆಸರುಗಳನ್ನು ಇಂಗ್ಲೀಷದಲ್ಲಿ ಬರೆಯುವಾಗ ಮೊದಲನೆಯ ಅಕ್ಷರವನ್ನು 1ನ್ನೆಯ ಪ್ರಕಾರದ ಅಕ್ಷರಗಳಿಂದ ಬರೆಯಬೇಕು ಎಂಬುವದು
ಅಲ್ಲದೆ, ಇಂಗ್ಲೀಷಿನಲ್ಲಿ ಕವಿತೆ ಬರೆಯುವಾಗ ಪ್ರತಿ ಸಾಲಿನ ಪ್ರಾರಂಭದಲ್ಲಿ 1ನೆಯ ಪ್ರಕಾರದ ದೊಡ್ಡ ಅಕ್ಷರಗಳನ್ನೇ ಬರೆಯಬೇಕು.
ಕೆಳಗಿನ ಉದಾಹರಣೆಗಳು ಈ ಮಾತುಗಳನ್ನು ತಿಳಿಸುತ್ತವೆ.
ಬಿಡಿ ಶಬ್ದಗಳು : Book (ಬುಕ್) ಪುಸ್ತಕ
Table (ಟೇಬಲ್) ಮೇಜು
ವಾಕ್ಯ : We run ನಾವು ಓಡುತ್ತೇವೆ.
ಹೆಸರುಗಳು : Suraj ಸೂರಜ, Kunal ಕುನಾಲ
ವಸ್ತುಗಳ ಹೆಸರು : Box (ಬಾಕ್ಸ್) ಪೆಟ್ಟಿಗೆ
Toy (ಟಾಯ್) ಆಟಿಗೆ
ಊರ ಹೆಸರುಗಳು- Kolkota ಕೊಲ್ಕತ್ತಾ Chennai ಚೆನ್ನ Mumbai ಮುಂಬಯಿ.
ವಾರ, ತಿಂಗಳುಗಳ ಹೆಸರು- Monday ಸೋಮವಾರ, Sunda ರವಿವಾರ, January ಜನೇವರಿ.
ಈ ಪ್ರಕಾರ ಮೊದಲಕ್ಷರವನ್ನು 1ನೆಯ ಪ್ರಕಾರದಲ್ಲಿ ಬರೆಯಬೇಕು.
ಸೂಚನೆ - ರೂಢಿಯಲ್ಲಿ ದೊಡ್ಡಕ್ಷರಗಳನ್ನು ಒಂದಕ್ಕೊಂದು ಜೋಲ ಬರೆಯಬಾರದು. ಕೇವಲ ಸಣ್ಣಕ್ಷರ ಅಂದರೆ ಎರಡನೆಯ ಪ್ರಕಾ ಅಕ್ಷರಗಳನ್ನೇ ಕೂಡಿಸಿ ಇಲ್ಲವೆ ಜೋಡಿಸಿ ಬರೆಯಬೇಕು. ಯಾವುದಾದ ಊರು ಅಥವಾ ಮನುಷ್ಯರ ಹೆಸರನ್ನು ಬರೆಯುವಾಗ್ಗೆ ಕನ್ನಡ ಸ್ವರಗಳನ್ನು ಈ ಬಳ್ಳಿಗಳನ್ನು ಇಂಗ್ಲೀಷದಲ್ಲಿ ಬರೆದದ್ದನ್ನು ನೋಡಿ ಲಕ್ಷದಲ್ಲಿಟ್ಟುಕೊ ಹೊಂದಿಕೆಯಾಗುವಂತೆ ಬರೆಯಬೇಕು.
ಪಾಠ-2
ವ್ಯಂಜನಗಳು ಮತ್ತು ಸ್ವರಗಳು
ಸ್ವರ ಮತ್ತು ವ್ಯಂಜನಗಳು
26 A (2), E (5), 1 (), (६), U (ಯೂ) ಎಂಬ 5 ಸ್ವರಗಳು ಮತ್ತು ಉಳಿದ B C D F G H J K L M N P Q R S T V W X Y Z ವ್ಯಂಜನಗಳಿರುವವು.
ನಾವು ಕನ್ನಡದಲ್ಲಿ ಅಕ್ಷರಗಳನ್ನು ಜೋಡಿಸಿ ಶಬ್ದಗಳನ್ನು ಬರೆಯುತ್ತೇವೆ. ಅದರಂತೆಯೇ ಇಂಗ್ಲೀಷದಲ್ಲಿಯೂ ಕೂಡ ಜೋಡಣೆ ಮಾಡಬೇಕಾಗುತ್ತದೆ.
ಅದಕ್ಕೆ ಇಂಗ್ಲೀಷದಲ್ಲಿ Spelling (ಸ್ಪೆಲ್ಲಿಂಗ್) ಜೋಡಣೆ ಎನ್ನುವರು.
ಉದಾ : ಗ+ದ+ಗ=ಗದಗ ಕ+ಮ+ಲ=ಕಮಲ ಇಂಗ್ಲಿಷ್ ನಲ್ಲಿ Ga+da+g = Gadag Ka+ma+1= Kamal ಇನ್ನು ಮುಂದೆ ನಾವು ಕನ್ನಡದಲ್ಲಿ ವ್ಯಂಜನಗಳ ಇಂಗ್ಲೀಷ್ ಲಿಪಿಯನ್ನು ತಿಳಿದುಕೊಳ್ಳೋಣ.
ಭಾ+ರ+ಧ್ವಾ+ಜೈ = ಭಾರದ್ವಾಜ್ ;
Bha+ra+dwa+j= Bharadwaj
ರಾ+ಜ್ಯ+ಪಾ+ಲ = ರಾಜ್ಯಪಾಲ;
Ra+jya+pa+1 = Rajyapal
ಕೆಳಗಿನವುಗಳನ್ನು ನೀವು ಪ್ರಯತ್ನಿಸಿರಿ
ಪದ್ಯ, ಸತ್ಯ, ನ್ಯಾಯ, ರತ್ನ, ಕನ್ಯಾ
ಕೆಳಗಿನವುಗಳನ್ನು ಓದಿರಿ
Belgaum, Anil, Sanmarg, Hubli
ನಾವು ಇಂಗ್ಲೀಷನಲ್ಲಿ ಶಬ್ದಗಳನ್ನು ಉಚ್ಛರಿಸುವಾಗ ಆ ಶಬ್ದದ ಜೋಡಣೆಗೆ ಅನುಸರಿಸಿ ಉಚ್ಛರಿಸಬೇಕು. ಆದರೆ ಇನ್ನು ಕೆಲವು ಸಂದರ್ಭಗಳಲ್ಲಿ ಕೆಲವು ಸ್ವರ ಮತ್ತು ವ್ಯಂಜನಗಳ ಉಚ್ಛಾರ ಆಗುವದಿಲ್ಲ. ಅವುಗಳಿಗೆ ಸೈಲೆಂಟ್ ಲೆಟರ್ಸ್ (Silent letters) ಅಂದರೆ 'ಸ್ತಬ್ಧ' ಅಕ್ಷರಗಳು ಎನ್ನುವರು. ಉದಾ: (Walk) ವಾಕ್ ಎಂದು ಉಚ್ಛಾರ ಆಗುತ್ತದೆ. ಆದರೆ ವಾಲ್ಕ್ ಎಂದು ಮಾಡುವದು ತಪ್ಪು, ಅದರಂತೆ hour ಇದರ ಉಚ್ಚಾರವು 'ಅವರ್' ಎಂದಾಗುತ್ತದೆ. ಆದರೆ 'ಹೋಆರ್' ಎಂದು ಮಾಡುವದು ತಪ್ಪು.
ನೆನಪಿನಲ್ಲಿಡಬೇಕಾದ ವಿಶೇಷ ಸಂಗತಿಗಳು
ಇಂಗ್ಲೀಷದಲ್ಲಿ A ದ ಉಚ್ಚಾರವು Mat (ಮ್ಯಾಟ್) ಈ ಶಬ್ದದಲ್ಲಿ ಯಾ ಎಂದಾಗುತ್ತದೆ.
ea ಇದರ ಉಚ್ಛಾರವು ಯಾವಾಗಲೂ ಈ ಎಂದಾಗುತ್ತದೆ.
cha ಇದರ ಉಚ್ಛಾರವು ಚ್ಯಾ ಮತ್ತು ಕ್ಯಾ ಎಂದಾಗುತ್ತದೆ.
u ದ ಉಚ್ಛಾರವು ಅ ಮತ್ತು ಯು ಎಂದಾಗುತ್ತದೆ.
h ದ ಉಚ್ಛಾರವು ಕೆಲವು ವೇಳೆ ಆಗುವದೇ ಇಲ್ಲ.
ಉದಾ : humble ಅಂಬಲ್,
hour -ಅವರ್
q ದ ಮುಂದೆ u ಬರಲಿಕ್ಕೇಬೇಕು ಮತ್ತು ಅವುಗಳ ಉಚ್ಛಾರ ಕ್ವ ಎಂದಾಗುವದು. ಉದಾ : question - ಕ್ವೆಶ್ಚನ್ (ಪ್ರಶ್ನೆ)
ಕೆಳಗಿನ ಶಬ್ದಗಳ ಉಚ್ಛಾರಗಳನ್ನು ತಿಳಿದುಕೊಳ್ಳಿ
quality, character, university, honour, colonel.
ನೆನಪಿನಲ್ಲಿ ಇಡತಕ್ಕ ಮಾತುಗಳು
ನೂರರ ಮುಂದಿನ ಸಂಖ್ಯೆಗಳನ್ನು ಓದುವಾಗ ಅದರ ಮುಂದೆ ಆ್ಯಂಡ್ ಎಂಬ ಶಬ್ದವನ್ನು ಜೋಡಿಸಿ ಓದಬೇಕು.
ಉದಾ : ಹಂಡ್ರೆಡ್ ಆಂಡ ಟೆನ್
Hundred and ten (110)
ಅಭ್ಯಾಸ : ಕೆಳಗಿನ ಅಂಕಿಗಳನ್ನು ಅಕ್ಷರಗಳಲ್ಲಿ ಬರೆಯಿರಿ.
25,48,57,59,81,99,124
ಇದರ ಮುಂದಿನ ಕ್ರಮವಾಚಕಗಳನ್ನು ಇವುಗಳಂತೆ ಮಾಡಬೇಕು. ಒಂದನೆಯದಕ್ಕೆ ಯಾವಾಗಲೂ st, ಎರಡನೆಯದಕ್ಕೆ nd, ಮೂರನೆಯದಕ್ಕೆ rd, ನಾಲ್ಕರಿಂದ ಒಂಭತ್ತರವರೆಗೆ th ಎಂದು ಬರುತ್ತದೆ.
ಉದಾ: 31 Thirty First, 42Forty second 36 Thirty sixth, 74 Seventy Fourth, 90 Ninetieth.