ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಪ್ರಸಕ್ತ ಸಾಲಿಗೆ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹಧನ ರೂ.50,000/-ಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್ ಪಾರ್ಸಿ ಮತ್ತು ಸಿಖ್ ಸಮುದಾಯಗಳಿಗೆ ಸೇರಿರಬೇಕು. ಈ ಯೋಜನಗೆ ನೊಂದಾಹಿಸಲು ಕನಿಷ್ಠ 10 ಜೋಡಿಗಳು ಇದ್ದು, ವದುವಿನ ವಯಸ್ಸು 18 ರಿಂದ 42, ವರನ ವಯಸ್ಸು
21 ರಿಂದ 45 ಆಗಿರತಕ್ಕದ್ದು, ವಾರ್ಷಿಕ ಆದಾಯ ರೂ. 2.50ಲಕ್ಷಗಳು ಇದ್ದು, ಒಂದು ಕುಂಟುಬದಲ್ಲಿ ಒಬ್ಬರು ಮಾತ್ರ ಒಮ್ಮೆ ಮಾತ್ರ ಈ ಸೌಲಭ್ಯ ಪಡೆಯಬಹುದು, ಅರ್ಜಿ ಸಲ್ಲಿಸುವ ಸೇವಾ ಸಂಸ್ಥೆಗಳು ಕಡ್ಡಾಯವಾಗಿ ವಿವಾಹ ಆಯೋಜಕರೆಂದು ನೋಂದಣಿಯಾಗಿದ್ದು, ಪ್ರೋತ್ಸಾಹಧನ ಪಡೆಯಲು ಮೂರು ತಿಂಗಳ ಮುಂಚೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನಿಗಧಿತ ನಮೂನೆಯಲ್ಲಿ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಛೇರಿ ದೂರವಾಣಿ ಸಂ.08152-295257, ಅನ್ನು ಸಂಪರ್ಕಿಸಬಹುದಾಗಿದೆಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tags
JOBS