ಗ್ರಾಮ ಪಂಚಾಯತಿಗಳ ಕಂದಾಯ ನಿವೇಶನಗಳಿಗೂ ಇ-ಖಾತಾ



ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆವಿನ್ಯೂ ಸೈಟ್‌ಗಳ (ಅಕ್ರಮ ಬಡಾವಣೆ) ಮಾಲೀಕರಿಗೆ ಸರ್ಕಾರ ಶೀಘ್ರದಲ್ಲಿಯೇ ಇ-ಖಾತಾ ಗ್ಯಾರಂಟಿ ನೀಡಲಿದೆ. ಗ್ರೇಟರ್ ಬೆಂಗಳೂರು ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಕ್ರಮ ಬಡಾವಣೆಗಳ ಸ್ಥಿರಾಸ್ತಿಗಳಿಗೆ ನೀಡುತ್ತಿರುವ ಬಿ-ಖಾತಾ ಮಾದರಿಯಲ್ಲೇ, ಗ್ರಾಮ ಪಂಚಾಯಿತಿಯಲ್ಲೂ 11ಬಿ ಅನ್ವಯ ಬಿ-ಖಾತಾ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮುಂದಾಗಿದೆ.

ಈ ಸಂಬಂಧ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತಂದಿದ್ದು, ಕರಡು ಬಿಡುಗಡೆ ಮಾಡಿದೆ. ತಿಂಗಳ ಅಂತ್ಯಕ್ಕೆ ಗ್ರಾಮ ಪಂಚಾಯಿತಿಯ ಪಂಚತಂತ್ರ 2.0 ತಂತ್ರಾಂಶದಲ್ಲಿ 11ಬಿ ಹೆಸರಿನಲ್ಲಿ ಇ-ಖಾತಾ ನೀಡಲಿದೆ. ಈ ಪ್ರಕಾರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿ ರಿಜಿಸ್ಟ್ರೇಷನ್‌ ಮಾಡಿಕೊಂಡಿರುವ ಸೈಟ್, ಕಟ್ಟಡ ಸೇರಿದಂತೆ ಸ್ಥಿರಾಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಪಿಐಡಿ ನಂಬರ್ ಕೊಡಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಿದೆ.

ಈ ಮೊದಲು ಗ್ರಾಮೀಣಾಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ ಪಂಚತಂತ್ರ-2.0ರಲ್ಲಿ 1.40 ಲಕ್ಷ ಆಸ್ತಿ ನೋಂದಣಿ ಆಗಿದ್ದು, ಇ-ಸ್ವತ್ತು ಒಳಗೆ 44 ಲಕ್ಷ ಆಸ್ತಿಗೆ ಇ-ಖಾತಾ ನೀಡಲಾಗಿತ್ತು. ಉಳಿದ 96 ಲಕ್ಷ ಆಸ್ತಿಗಳಿಗೂ ಇ-ಖಾತಾ ಸಿಗಲಿದೆ. ಇದರ ಜತೆಗೆ ಹೊಸ ನಿರ್ಮಾಣವಾಗಿರುವ ಅಕ್ರಮ ಲೇಔಟ್‌ಗಳಲ್ಲಿ ಲಕ್ಷಾಂತರ ಸೈಟ್‌ಗಳು ಇ-ಸ್ವತ್ತು ತಂತ್ರಾಂಶದಲ್ಲಿ 11ಬಿ ಸಿಗಲಿದ್ದು, ತೆರಿಗೆ ವ್ಯಾಪ್ತಿಗೆ ಒಳಪಡಲಿವೆ. ಜತೆಗೆ ಸಬ್ ರಿಜಿಸ್ಟ್ರಾ‌ರ್ ಕಚೇರಿಯಲ್ಲಿ ಆಸ್ತಿ ಮಾಲೀಕರು ವಹಿವಾಟು ನಡೆಸಲು ಸಾಧ್ಯವಾಗಲಿದೆ.

ಭೂ ಪರಿವರ್ತಿತ ಅಥವಾ ಪರಿವರ್ತನೆ ಆಗದ, ಕಂದಾಯ ಭೂಮಿ, ಕೃಷಿ ಭೂಮಿಯಲ್ಲಿ ನಿರ್ಮಾಣ ಆಗಿರುವ ಲೇಔಟ್‌ಗಳ ಸೈಟ್‌ಗಳಿಗೆ 11ಬಿ ಇ-ಖಾತಾ ಪಡೆಯಲು ನೋಂದಾಯಿತ ಪ್ರಮಾಣ ಪತ್ರ (ಸೇಲ್ ಡೀಡ್) ಸಲ್ಲಿಸುವುದು ಕಡ್ಡಾಯವಾಗಿದೆ. ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನು ಪ್ರಮಾಣ ಪಡೆ 


ಇನ್ನು ಏನೆಲ್ಲ ಕಡ್ಡಾಯ?

ಬಡಾವಣೆ ಪ್ಲಾನ್ ಅನುಮೋದನೆ ಇಲ್ಲದೆ ಇದ್ದರೂ ಕಡ್ಡಾಯವಾಗಿ ಮೂಲಭೂತ ಸೌಕರ್ಯ ಒದಗಿಸಿರಬೇಕು. ಅಂದರೆ ಉದ್ಯಾನವನ, ಸಿಎ ಸೈಟ್, ರಸ್ತೆಯನ್ನು ಗ್ರಾಮ ಪಂಚಾಯಿತಿಗೆ ಉಚಿತವಾಗಿ ಪರಿತ್ಯಾಜನ ಪತ್ರದ ಮೂಲಕ ವರ್ಗಾವಣೆ ಮಾಡಿರಬೇಕು. ಇಂತಹ ಲೇಔಟ್‌ಗಳಲ್ಲಿನ ಸೈಟ್ ಮತ್ತು ಕಟ್ಟಡಗಳಿಗೂ ಇ-ಖಾತಾ ವಿತರಿಸಲಾಗುತ್ತದೆ. ಮತ್ತೊಂದು ಮಾದರಿಯಾದ ಭೂ ಪರಿವರ್ತನೆ ಮಾಡಿದ ಜಮೀನಿನಲ್ಲಿ ಲೇಔಟ್ ಅಭಿವೃದ್ಧಿಪಡಿಸಿ ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ ಕೇವಲ ಹುಂಡೆ ಖಾತಾ ಆಧಾರದ ಮೇಲೆ ಮಾರಾಟ ಮಾಡಿರುವ ಸ್ಥಿರಾಸ್ತಿಗಳಿಗೂ ಇ-ಸ್ವತ್ತು ತಂತ್ರಾಂಶದಲ್ಲಿ 11ಬಿ ನೀಡಲು ಸರ್ಕಾರ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಿದೆ.

ಅಧ್ಯಕ್ಷರ ಅನುಮೋದನೆಗೆ 3 ದಿನ

11ಬಿ ಅನ್ವಯ ಇ-ಖಾತಾ ಪಡೆಯಲು ಆಸ್ತಿ ಮಾಲೀಕ ಅರ್ಜಿ ಸಲ್ಲಿಸಿದ ಮೇಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿಜಿಟಲ್ ಸಹಿಯೊಂದಿಗೆ ವಿತರಿಸಬೇಕು. ಅಧ್ಯಕ್ಷರ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸ್ವೀಕರಿಸಿದ ಮೇಲೆ 3 ದಿನಗಳ ಕಾಲಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ತಪ್ಪಿದರೆ ಕಾರ್ಯನಿರ್ವಾಹಕ ಅಧಿಕಾರಿ ಅನುಮೋದನೆ ನೀಡಬೇಕಾಗಿದೆ.


ಅಧಿಕಾರಿಗಳಿಗೆ ಷರತ್ತು

ಸರ್ಕಾರಿ ಭೂಮಿ, ಅರಣ್ಯ ಭೂಮಿ, ಸರ್ಕಾರದ ಒಡೆತನದಲ್ಲಿ ಅಥವಾ ನಿಯಂತ್ರಣದಲ್ಲಿ ಇದ್ದರೆ ಅಂತಹ ಆಸ್ತಿಗಳಿಗೆ ಮತ್ತು ಶಾಸನಬದ್ಧ ಅಥವಾ ಸಂಸ್ಥೆಗೆ ಸೇರಿದ ಆಸ್ತಿಯಾಗಿದ್ದರೆ ಇ-ಖಾತಾ ವಿತರಣೆಯಿಂದ ಕೈಬಿಡಬೇಕೆಂದು ಅಧಿಕಾರಿಗಳಿಗೆ ಷರತ್ತು ವಿಧಿಸಲಾಗಿದೆ.

ತೆರಿಗೆ ನಿರ್ಧರಣಾ ವಿಧಾನ

ಭೂ ಪರಿವರ್ತಿತ ಖಾಲಿ ಸೈಟ್, ವಾಣಿಜ್ಯ, ವಸತಿಯೇತರ, ಕೈಗಾರಿಕೆ ಮತ್ತು ಇತರೆ ಉದ್ದೇಶಿತ ಜಮೀನಿಗೆ ಮೂಲಸೌಕರ್ಯಗಳಾದ ಚರಂಡಿ, ನೀರು, ವಿದ್ಯುತ್, ಸಿಎ ಸೈಟ್‌, ರಸ್ತೆ ನಿರ್ಮಾಣ ಮಾಡಿದರೇ ಒಂದು ಮಾದರಿ ಅಥವಾ ಮೂಲಸೌಕರ್ಯ ಇಲ್ಲದಿದ್ದರೇ ಮತ್ತೊಂದು ಮಾದರಿ ತೆರಿಗೆ ನಿಗದಿಪಡಿಸಲಾಗುತ್ತದೆ. ಈ ಎಲ್ಲವೂ ಜಮೀನಿನ ಬಂಡವಾಳ ಮೌಲ್ಯ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾಯ್ದೆ ಅನ್ವಯ 11ಬಿ ಆಸ್ತಿಗಳಿಗೆ ತೆರಿಗೆ ಪ್ರಮಾಣ ನಿರ್ಧರಿಸಲಾಗುತ್ತದೆ.

11ಬಿ ಪಡೆಯಲು ಬೇಕಾದ ದಾಖಲೆ

-ನೋಂದಾಯಿತ ಪ್ರಮಾಣ ಪತ್ರ (ಸೇಲ್ ಡೀಡ್)

-ತೆರಿಗೆ ಪಾವತಿ ರಸೀದಿ (2025ರ ಏ.7ರ ಪೂರ್ವ)

-ವಿದ್ಯುತ್ ಬಿಲ್ (2025ರ ಏ.7ರ ಪೂರ್ವ)

-ಪಹಣಿ (ಆರ್‌ಟಿಸಿ)

-ಭೂ ಪರಿವರ್ತನೆ ಆದೇಶ (ಐಚ್ಛಿಕ)

-ಬಡಾವಣೆ ವಿನ್ಯಾಸ ಅನುಮೋದಿತ ಆದೇಶ

-ನಿವೇಶನ ಬಿರ





ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು