ಹೊಸ ವರ್ಷ ನಾಳೆಯಿಂದ ಕೆಲ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.

ಜನವರಿ 1 ರಿಂದ ನೂತನ ತೆರಿಗೆ ನಿಯಮ ಜಾರಿಯಾಗುತ್ತಿದೆ.ಜಿಎಸ್‌ಟಿಯ ಪ್ರಮಾಣದಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದ್ದು , ನಾಳೆಯಿಂದಲೇ ಅನ್ವಯವಾಗುತ್ತಿದೆ . ಹೊಸ ವರ್ಷ ನಾಳೆಯಿಂದ ಕೆಲ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.
ಜಿಎಸ್‌ಟಿ ಕೌಂಸಿಲ್‌ನ ಶಿಫಾರಸುಗಳ ಆಧಾರದ ಮೇಲೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ( ಸಿಬಿಐಸಿ ) ಉಡುಪು , ಜವಳಿ ಹಾಗೂ ಪಾದರಕ್ಷೆಗಳಿಗೆ ಅನ್ವಯವಾಗುವ ಜಿಎಸ್‌ಟಿ ದರವನ್ನು ಹೆಚ್ಚಿಸಿದೆ . ಇವುಗಳ ಮೇಲಿನ ದರಗಳು ಜನವರಿ 1 ರಿಂದ ಶೇ .5 ರಿಂದ ಶೇ .12 ಕ್ಕೆ ಏರಿಕೆಯಾಗಲಿದೆ . ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡುವ ಆಟೋ ರೈಡ್‌ಗಳಿಗೂ ಶೇ . 5 ರಷ್ಟು ಜಿಎಸ್‌ಟಿ ವಿಧಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು , ಇದರಿಂದ ಓಲಾ ಹಾಗೂ ಉಬರ್ ನಂತಹ ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಬುಕ್ ಮಾಡುವ ಆಟೋ ರಿಕ್ಷಾದ ದರವೂ ದುಬಾರಿಯಾಗಲಿದೆ . ಇದರ ಜೊತೆ ಆನ್ ಲೈನ್ ಫುಡ್ ಡೆಲಿವರಿ ಸಂಸ್ಥೆಗಳಾದ ಸ್ವಿಗ್ಗಿ , ಜೋಮ್ಯಾಟೋ , ಊಬರ್ ಈಟ್ಸ್ ಸೇರಿದಂತೆ ಇನ್ನುಳಿದ ಆ್ಯಪ್‌ಗಳು ಸಹ ನಾಳೆಯಿಂದಲೇಜಿಎಸ್‌ಟಿ ವಿಧಿಸಲು ಆರಂಭಿಸಲಿವೆ . ಈ ಮೂಲಕ ಮತ್ತೆ ಬೆಲೆ ಏರಿಕೆಯ ಬಿಸಿ ನಾಗರಿಕರ ಸುಡಲಿದೆ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು