1.ಕರ್ನಾಟಕ ನವೋದ್ಯಮದಲ್ಲಿ ತಗ್ಗಿದ ಹೂಡಿಕೆ
*ಕರ್ನಾಟಕದ ತಂತ್ರಜ್ಞಾನ ಆಧರಿತ ನವೋದ್ಯಮಗಳಲ್ಲಿ (ಟೆಕ್ ಸ್ಟಾರ್ಟ್‌ಆಪ್) ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಮಾರುಕಟ್ಟೆ ಸಂಶೋಧನೆ ಮತ್ತು ದತ್ತಾಂಶ ಸಂಗ್ರಹಣಾ ಸಂಸ್ಥೆ ಟ್ರ್ಯಾಕ್ಸನ್ ವರದಿ ತಿಳಿಸಿದೆ.
*2024ರ ನಾಲ್ಕನೇ (ಅಕ್ಟೋಬರ್‌ನಿಂದ ಡಿಸೆಂಬರ್) ತ್ರೈಮಾಸಿಕದಲ್ಲಿ ಟೆಕ್ ನವೋದ್ಯಮಗಳು ₹7,071 ಕೋಟಿ ಬಂಡವಾಳ ಸಂಗ್ರಹಿಸಿದ್ದವು. ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್) ₹5.422 ಕೋಟಿ ಸಂಗ್ರಹಿಸಿವೆ. ಒಟ್ಟಾರೆ ಬಂಡವಾಳ ಸಂಗ್ರಹದಲ್ಲಿ ಶೇ 23ರಷ್ಟು ಇಳಿಕೆಯಾಗಿದೆ ಎಂದು ವರದಿಯು ವಿವರಿಸಿದೆ.
*2024ರ ಮೊದಲ ತ್ರೈಮಾಸಿಕದಲ್ಲಿ ಟೆಕ್ ನವೋದ್ಯಮಗಳು ₹10,280 ಕೋಟಿ ಬಂಡವಾಳ ಸಂಗ್ರಹಿಸಿದ್ದವು ಎಂದು ಹೇಳಿದೆ.
2.ಒಳಮೀಸಲಾತಿ: 101 ಜಾತಿ ಸಮೀಕ್ಷೆಗೆ ಸೂಚನೆ; ಉಮಾ ಮಹಾದೇವನ್
ಗೆ ಉಸ್ತುವಾರಿ: ಮುನಿಯಪ್ಪ ಅಧ್ಯಕ್ಷತೆಯಲ್ಲಿ ಸಭೆ
*ಒಳಮೀಸಲಾತಿ ಕಲ್ಪಿಸುವ ಸಂಬಂಧ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ನಡೆಸಲು 54 ಸಾವಿರ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಂಡು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
*ಈ ಸಂಬಂಧ ಸಭೆ ನಡೆಸಿದ ಅವರು, ಅಭಿವೃದ್ಧಿ ಆಯುಕ್ತ ಉಮಾ ಮಹಾದೇವನ್ ಅವರನ್ನು ಈ ಕಾರ್ಯದ ಉಸ್ತುವಾರಿಯನ್ನಾಗಿ ಪ್ರಕಟಿಸಿದರು.
*ಎರಡು ತಿಂಗಳಲ್ಲಿ ವರದಿ ಪಡೆಯಲು ಸೂಚಿಸಿದ್ದು, ಈಗಾಗಲೇ 15 ದಿನಗಳು ಕಳೆದಿವೆ. ತ್ವರಿತಗತಿಯಲ್ಲಿ ಮತ್ತು ಕಾಲ ಮಿತಿಯಲ್ಲಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು.
*ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ನೇತೃತ್ವದ ಆಯೋಗವು ಮಾರ್ಚ್‌ನಲ್ಲಿ ಮಧ್ಯಂತರ ವರದಿ ಸಲ್ಲಿಸಿ, ಒಳಮೀಸಲಾತಿ ನೀಡುವುದಕ್ಕಾಗಿ ಪರಿಶಿಷ್ಟ ಜಾತಿಯಲ್ಲಿನ 101 ಉಪಜಾತಿಗಳ ದತ್ತಾಂಶ ಸಂಗ್ರಹಿಸುವುದಕ್ಕೆ ಹೊಸ ಸಮೀಕ್ಷೆ ನಡೆಸಬೇಕು ಎಂದು ಶಿಫಾರಸು ಮಾಡಿತ್ತು.
*ಒಳಮೀಸಲಾತಿ ವರ್ಗೀಕರಣವನ್ನು ತ್ವರಿತವಾಗಿ ಮತ್ತು ವೈಜ್ಞಾನಿಕವಾಗಿ ಕೈಗೊಳ್ಳುವ ಸಂಬಂಧ, ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನಾಗಮೋಹನ್‌ದಾಸ್ ಆಯೋಗಕ್ಕೇ ವಹಿಸಲು ಸಚಿವ ಸಂಪುಟ ಸಭೆ
*ಸಮೀಕ್ಷಾ ಕಾರ್ಯವನ್ನು 60 ದಿನಗಳೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಅನುಕೂಲವಾಗುವಂತೆ ಆಯೋಗದ ಅವಧಿಯನ್ನು ಎರಡು ತಿಂಗಳವರೆಗೆ ವಿಸ್ತರಿಸಲಾಗಿತ್ತು.
3.ಪೊಲೀಸ್ ಇಲಾಖೆ ನೇಮಕ: ಕ್ರೀಡಾ ಕೋಟಾ ಪ್ರಮಾಣ ಹೆಚ್ಚಳ
"ಪೊಲೀಸ್ ಇಲಾಖೆಯಲ್ಲಿನ ಎಲ್ಲ ಹುದ್ದೆಗಳ ನೇಮಕದ ಸಂದರ್ಭದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ನೀಡುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇ 2ರಿಂದ ಶೇ3ಕ್ಕೆ ಹೆಚ್ಚಿಸಲಾಗಿದೆ. ಈ ಸಂಬಂಧ ಇದೇ ಏಪ್ರಿಲ್ 8ರಂದು ಅಧಿಸೂಚನೆ ಹೊರಡಿಸಲಾಗಿದೆ.
"ಇದರ ಜತೆಯಲ್ಲಿಯೇ, ಈ ಕ್ರೀಡಾ ಕೋಟಾದಡಿ ನೇಮಕವಾಗುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನೂ ಹೆಚ್ಚಿಸಲಾಗಿದೆ.
*ಒಟ್ಟು 20 ಆಟಗಳಲ್ಲಿ ಸಾಧನೆ ಮಾಡಿದವರನ್ನು ಮಾತ್ರ ಈ ನೇಮಕಾತಿಯಲ್ಲಿ ಪರಿಗಣಿಸಲಾಗುತ್ತದೆ. ಈ ಆಟಗಳಿಗೆ ಸಂಬಂಧಿಸಿದ 29 ಕ್ರೀಡಾಕೂಟಗಳನ್ನು ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಕ್ರೀಡಾಪಟು ಪದಕ ಪಡೆದಿರಬೇಕು.
*ಕ್ರಿಕೆಟರಿಗಿಲ್ಲ ಅವಕಾಶ: ಪೊಲೀಸ್ ಇಲಾಖೆಯು ಈ ಮೀಸಲು ನೀಡಲು ಪಟ್ಟಿ ಮಾಡಿರುವ 20 ಕ್ರೀಡೆಗಳಲ್ಲಿ ಕ್ರಿಕೆಟ್ ಇಲ್ಲ. ಕಬಡ್ಡಿ, ಅಥ್ಲೆಟಿಕ್ಸ್, ಆರ್ಚರಿ, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಜಿಮ್ಯಾಸ್ಟಿಕ್, ಹಾಕಿ, ಹ್ಯಾಂಡ್ವಾಲ್, ಜುಡೊ, ಶೂಟಿಂಗ್, ವಾಲಿವಾಲ್, ವೇಟ್ ಲಿಫ್ಟಿಂಗ್, ಕುಸ್ತಿ (Wrestling), ಸ್ವಿಮ್ಮಿಂಗ್, ವಾಟರ್ ಸ್ಪೋರ್ಟ್ಸ್ (ರೋಯಿಂಗ್. ಕೆನೊಯಿಂಗ್), ಟೆನಿಸ್, ಬ್ಯಾಡ್ಮಿಂಟನ್ ಆಟಗಳು ಈ ಪಟ್ಟಿಯಲ್ಲಿವೆ.
*ಈ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಅಥವಾ ಸಹಿಷ್ಣುತೆ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ.
*ಸಾಮಾನ್ಯ ನೇಮಕಾತಿಗೆ ನಿಗದಿ ಪಡಿಸಿದ ವಿದ್ಯಾರ್ಹತೆಯೇ ಈ ವಿಶೇಷ ನೇಮಕಕ್ಕೂ ಅನ್ವಯವಾಗುತ್ತದೆ.
*ಗೃಹ ಸಚಿವ ಡಾ. ಜಿ. ಪರಮೇಶ್ವರ ವಿಧಾನಸಭೆಗೆ ನೀಡಿರುವ ಹೇಳಿಕೆ ಪ್ರಕಾರ ಪೊಲೀಸ್ ಇಲಾಖೆಯಲ್ಲಿ ಈಗ ಒಟ್ಟು 18.581 ಹುದ್ದೆ ಖಾಲಿ ಇವೆ. ಇವುಗಳಲ್ಲಿ ಶೇ. 3 ರಷ್ಟು ಹುದ್ದೆಗಳನ್ನು ನೇಮಕಾತಿ ಸಂದರ್ಭದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ತಮ್ಮದಾಗಿಸಿಕೊಳ್ಳಬಹುದಾಗಿದೆ.
4.ಹಟ್ಟಿ ಗಣಿ: ಚಿನ್ನ ಉತ್ಪಾದನೆಯಿಂದ ₹350 ಕೋಟಿ ಲಾಭ
ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯು 2024-25ನೇ ಸಾಲಿನ ಮಾರ್ಚ್ ಅಂತ್ಯಕ್ಕೆ 1.605 ಕೆ.ಜಿ ಚಿನ್ನ ಉತ್ಪಾದಿಸಿದೆ.
*ಒಟ್ಟು 1,620 ಕೆ.ಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿತ್ತು. 1,605 ಕೆ.ಜಿ ಚಿನ್ನ ಉತ್ಪಾದನೆ ಮಾಡಿ ಶೇ 99ರಷ್ಟು ಗುರಿ ಸಾಧನೆ ಮಾಡಿದ್ದು. ₹350 ಕೋಟಿ ಲಾಭ ಗಳಿಸಿದೆ. 7.50 ಲಕ್ಷ ಮೆಟ್ರಿಕ್ ಟನ್ ಅದಿರು ಸಂಸ್ಕರಿಸುವ
ಗುರಿ ಹೊಂದಲಾಗಿತ್ತು. ಆದರೆ, 6.83 ಲಕ್ಷ ಮೆಟ್ರಿಕ್ ಟನ್ ಅದಿರು ಸಂಸ್ಕರಿಸಲಾಗಿದೆ.
*ತೆರಿಗೆ ಪಾವತಿ ಮುನ್ನ ಚಿನ್ನ ಉತ್ಪಾದನೆ ಲಾಭ ₹510 ಕೋಟ, ತೆರಿಗೆ ಪಾವತಿ ನಂತರ ₹350 ಕೋಟಿ ಲಾಭ ಬರುವ ನಿರೀಕ್ಷೆ ಇದೆ.
5.ಎರಡು ಬುಲೆಟ್ ರೈಲು ಉಡುಗೊರೆ ನೀಡಲಿದೆ ಜಪಾನ್
*ಜಪಾನ್ ಸರಕಾರವು ಭಾರತದ ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆಗೆ ನೆರವಾಗಲು ತನ್ನ ಎರಡು ಶಿಂಕಾನ್ಸೆನ್ 'ಇ5' ಮತ್ತು 'ಇತಿ' ರೈಲುಗಳನ್ನು ಉಡುಗೊರೆಯಾಗಿ ನೀಡಲಿದೆ.
*ಮುಂಬಯಿ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಪರೀಕ್ಷೆ ಮತ್ತು ಪರಿಶೀಲನೆಗೆ ಈ ರೈಲುಗಳು ಸಹಕಾರಿಯಾಗಲಿವೆ.
*2026ರ ಆರಂಭದಲ್ಲಿ ಬುಲೆಟ್ ರೈಲುಗಳು ಭಾರತಕ್ಕೆ ಬರಲಿದ್ದು, ಈ ರೈಲುಗಳು ಅಗತ್ಯ ತಪಾಸಣಾ ಉಪಕರಣಗಳನ್ನು ಹೊಂದಿರುತ್ತವೆ ಮತ್ತು ಕಾರ್ಯಾಚರಣೆಯಲ್ಲಿ ಭಾರತದ ವಿಶಿಷ್ಟ ಪರಿಸರ ಸವಾಲುಗಳಾದ ತೀವ್ರ ಶಾಖ ಮತ್ತು ಧೂಳಿನ ಪ್ರಭಾವ ಕುರಿತು ಡೇಟಾ ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಜತೆಗೆ, ಈ ಪರೀಕ್ಷೆಯು ಜಪಾನ್‌ಗೆ 2030ರ ದಶಕದ ಆರಂಭದಲ್ಲಿ ಬಿಡುಗಡೆಯಾಗಲಿರುವ ಅತ್ಯಾಧುನಿಕ ಹಾಗೂ ಸುಧಾರಿತ 'ಇ10 ಶಿಂಕಾನ್ಸೆನ್' ಮಾದರಿಯ ವಿನ್ಯಾಸವನ್ನು ಪರಿಷ್ಕರಿಸಲು ಸಹಾಯ ಮಾಡಲಿದೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.
*ಇದೆ ಸರಣಿಯು ಪೂರ್ವ ಜಪಾನ್ ರೈಲ್ವೆ ಅಭಿವೃದ್ಧಿಪಡಿಸಿದ ಹೈ-ಸ್ಪೀಡ್ ರೈಲಾಗಿದ್ದು, 2011ರಿಂದ ಕಾರ್ಯನಿರ್ವಹಿಸುತ್ತಿದೆ. ಗಂಟೆಗೆ 320 ಕಿ.ಮೀ. ವೇಗವನ್ನು ತಲುಪುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದನ್ನು ಆರಂಭದಲ್ಲಿ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಭಾರತವು ಸದ್ಯ ಗಂಟೆಗೆ 400 ಕಿ.ಮೀ. ವೇಗವನ್ನು ತಲುಪಬಲ್ಲ ಹೆಚ್ಚು ಮುಂದುವರಿದ ಇ10 (ಅಲ್ಲಾ ಎಕ್ಸ್) ಮಾದರಿಯನ್ನು ಆಯ್ಕೆ ಮಾಡಿದೆ ಎಂದು ವರದಿಯಾಗಿದೆ.
*ಪರಿಶೀಲನೆಗಾಗಿ ಇದೆ ಮತ್ತು ಇತಿ ರೈಲುಗಳನ್ನು ಬಳಸುವುದರಿಂದ ಇ10 ಆಳವಡಿಕೆ ಮುಂಚಿತವಾಗಿ ಉತ್ಕೃಷ್ಟ ತಂತ್ರಜ್ಞಾನದ ನೇರ ಅನುಭವ ಸಿಗಲಿದೆ.
*ಬುಲೆಟ್ ರೈಲು ಯೋಜನೆಯು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೆಐಸಿಎ)ಯಿಂದ ಪಡೆಯುವ ಕಡಿಮೆ ಬಡ್ಡಿಯ ಸಾಲದಲ್ಲಿ ಸಾಕಾರವಾಗಲಿದೆ. ಒಟ್ಟು ಯೋಜನೆಯ ಮೊತ್ತದಲ್ಲಿ ಶೇ. 80ರಷ್ಟನ್ನು ಇದು ಭರಿಸಲಿದೆ. 50 ವರ್ಷಗಳ ಆವಧಿಯಲ್ಲಿ ಇದನ್ನು ಮರುಪಾವತಿ ಮಾಡಬೇಕಾಗುತ್ತದೆ.
ಜಪಾನ್ ಶಿಂಕನ್ ತಂತ್ರಜ್ಞಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಜಪಾನ್ ಈ ಹಿಂದೆ ತೈವಾನ್ ಹೈ-ಸ್ಪೀಡ್ ರೈಲು ಚಾಲಕ್ಕಾಗಿ ಮೊದಲ ತಲೆಮಾರಿನ ಶಿಂಕನ್ ರೈಲನ್ನು ಒದಗಿಸಿತ್ತು. ಇದೀಗ ಭಾರತಕ್ಕೂ ಈ ತಂತ್ರಜ್ಞಾನ ನೀಡಲಿದ್ದು, ಜಾಗತಿಕವಾಗಿ ಹೈ-ಸ್ಪೀಡ್ ರೈಲು ಅಭಿವೃದ್ಧಿಯನ್ನು ಬೆಂಬಲಿಸುವ ತನ್ನ ಸಂಪ್ರದಾಯವನ್ನು ಮುಂದುವರೆಸಿದೆ.
*2017 ರಲ್ಲಿ ಮಾರ್ಗದ ನಿರ್ಮಾಣ ಆರಂಭವಾಗಿತ್ತು. ಮೂಲ ಯೋಜನೆಯಂತೆ 2022 ರಲ್ಲಿ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಇದು ಮುಂದೂಡಲ್ಪಟ್ಟಿದ್ದು, 2026 ರಲ್ಲಿ ಗುಜರಾತ್‌ನ ಸೂರತ್-ಬಿಲಿಮೋರಾ ನಡುವಿನ 50 ಕಿಮೀ ಅಂತರದಲ್ಲಿ ಕಾರ್ಯಾಚರಣೆ ನಡೆಸುವ ನಿರೀಕ್ಷೆ ಇದೆ.
*2030 ರಲ್ಲಿ ಗುಜರಾತಿನ ಭಾಗದಲ್ಲಿ ಮತ್ತು 2033 ರಲ್ಲಿ ಪೂರ್ತಿ ಮಾರ್ಗದಲ್ಲಿ ಕಾರ್ಯಾರಂಭ ಮಾಡಬಹುದಾಗಿದೆ.
6 ಮಹಾರಾಷ್ಟ್ರ: ಅಪಘಾತಕ್ಕೊಳಗಾದವರಿಗೆ ₹1ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ
ಅಪಘಾತಕ್ಕೊಳಗಾದವರು ವಿಮಾ ಸೌಲಭ್ಯವಿರುವ ಮತ್ತು ತುರ್ತು ಚಿಕಿತ್ಸಾ ಆಸ್ಪತ್ರೆಗಳಲ್ಲಿ 1 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
*ಆರೋಗ್ಯ ಪ್ರಕಾಶ್ ಅಬಿಟ್ಟರ್ ಅಪಘಾತಕ್ಕೊಳಗಾದವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ ಮತ್ತು 1 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆದ ಬಗ್ಗೆ ಖಚಿತಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಈ ಆರೋಗ್ಯ ಯೋಜನೆಯ ದುರುಪಯೋಗಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
*ಈ ಯೋಜನೆಯಡಿ ವಿಮಾ ಸೌಲಭ್ಯವಿರುವ ಆಸ್ಪತ್ರೆಗಳ ಸಂಖ್ಯೆಯನ್ನು 1.792 005 4.180 ដង្កូវបាកាដូជា, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಗಳ ಮೂಲಕ ಪಾರದರ್ಶಕವಾಗಿ ಕೈಗೊಳ್ಳಲಾಗುವುದು.
*ಸಮಿತಿಯು ಈ ಯೋಜನೆಯಡಿ ನೀಡಬಹುದಾದ ಹೆಚ್ಚಿನ ಚಿಕಿತ್ಸೆ. ಅಂಗಾಂಗ ಕಸಿಯಂತಹ ದುಬಾರಿ ಚಿಕಿತ್ಸೆ, ಪ್ರಾಥಮಿಕ ಚಿಕಿತ್ಸೆಗಳ ದರ ಪಟ್ಟಿ ಸೇರಿ ಇತ್ಯಾದಿಗಳ ವರದಿ ನೀಡಲಿದೆ. ಒಂದು ತಿಂಗಳೊಳಗೆ ವರದಿ ನೀಡುವಂತೆ ಸಮಿತಿಗೆ ನಿರ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು
ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ದೊರೆಯವ ವಿವಿಧ ಯೋಜನೆಗಳು, ಹಾಸಿಗೆ ಲಭ್ಯತೆ, ದೂರು ದಾಖಲಿಗೆ ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುವುದು.
'ವಿಮಾ ಸೌಲಭ್ಯ ಹೊಂದಿರುವ ಎಲ್ಲಾ ಆಸ್ಪತ್ರೆಗಳು ಪ್ರತಿ ತಿಂಗಳು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಜತೆಗೆ ಕನಿಷ್ಠ ಐವರಿಗೆ ಈ ಯೋಜನೆಯಡಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.
7. 'ಶಾಖಾಘಾತ (ಬಿಸಿಲಿನ ತಾಪ)/ ಬಿಸಿಗಾಳಿಯನ್ನು ವಿಕೋಪ' ಎಂದು ತೆಲಂಗಾಣ ಸರ್ಕಾರ ಘೋಷಿಸಿದೆ.
ಶಾಖಾಘಾತ (ಬಿಸಿಲಿನ ತಾಪ)/ ಬಿಸಿಗಾಳಿಯನ್ನು ವಿಕೋಪ' ಎಂದು ತೆಲಂಗಾಣ ಸರ್ಕಾರ ಘೋಷಿಸಿದೆ. ಶಾಖಾಘಾತದಿಂದ ಸಂತ್ರಸ್ತರಾದವರ ಕುಟುಂಬಗಳಿಗೆ ಪರಿಹಾರ ನೀಡಲು ಈ ಹೊಸ ಆದೇಶ ನೆರವಾಗಲಿದೆ.
"ಎಲ್ಲ ವಿಚಾರಗಳನ್ನು ಪರಿಗಣಿಸಿ, ಶಾಖಾಘಾತವನ್ನು ರಾಜ್ಯದಲ್ಲಿನ ವಿಕೋಪ ಎಂದು ಘೋಷಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.
*ಸರ್ಕಾರದ ಹೊಸ ಆದೇಶದಿಂದ ಸಂತ್ರಸ್ತ ಕುಟುಂಬದ ಸದಸ್ಯರಿಗೆ ₹4 ಲಕ್ಷ ಆರ್ಥಿಕ ನೆರವು ದೊರೆಯಲಿದೆ.
ಆರ್ಥಿಕ
8. 'ರಕ್ಷಣಾ ಕ್ಷೇತ್ರದ ತಯಾರಿಕೆ ಮೌಲ್ಯ: ₹1.6 ಲಕ್ಷ ಕೋಟಿ ದಾಟುವ ಅಂದಾಜು
* 'ಭಾರತದಲ್ಲಿ ಈ ವರ್ಷ ರಕ್ಷಣಾ ಕ್ಷೇತ್ರದ ತಯಾರಿಕೆಯ ಒಟ್ಟು ಮೌಲ್ಯ ₹1.60 ಲಕ್ಷ ಕೋಟಿ ದಾಟಬಹುದು ಎಂದು ಅಂದಾಜು ಮಾಡಲಾಗಿದೆ. 2029ರವರೆಗೆ 3 ಲಕ್ಷ ಕೋಟಿ ಮೌಲ್ಯದ ಸೇನಾ ಪರಿಕರ ತಯಾರಿಕೆಯ ಗುರಿ ನಿಗದಿಪಡಿಸಲಾಗಿದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
*ಆಮದು ಮೇಲಿನ ಅವಲಂಬನೆಯನ್ನು ತಗ್ಗಿಸಲಾಗುವುದು. ದೇಶದ ಅಗತ್ಯ ಬೇಡಿಕೆಯ ಜೊತೆಗೆ ರಫ್ತು ಅವಕಾಶವನ್ನು ಬಲಪಡಿಸುವಂತೆ ರಕ್ಷಣಾ ಕೈಗಾರಿಕಾ ಕ್ಷೇತ್ರವನ್ನು ರೂಪಿಸಲಾಗುವುದು ಎಂದು ಸಚಿವರು ಹೇಳಿದರು.
*ರಾಷ್ಟ್ರದ ಭದ್ರತೆ, ರಕ್ಷಣಾ ಸ್ವಾಯತ್ತೆಗೆ ಪೂರಕವಾಗಿ ರಕ್ಷಣಾ ತಯಾರಿಕೆ ಸಾಮರ್ಥ್ಯ ಹೆಚ್ಚಿಸುವ ಗುರಿ ಇದೆ. ರಕ್ಷಣಾ ಕ್ಷೇತ್ರದಲ್ಲಿ ನಮ್ಮ ರಫ್ತು ವಹಿವಾಟು ಈ ವರ್ಷ ₹30 ಸಾವಿರ ಕೋಟಿಗೆ ಹಾಗೂ 2029ರ ವೇಳೆಗೆ ₹50 ಸಾವಿರ ಕೋಟಿಗೆ ಮುಟ್ಟಬೇಕು ಎಂದರು.
ಅಂತರ-ರಾಷ್ಟ್ರೀಯ
9.ಪರಮಾಣು ಬಾಂಬ್ ನಿಂದ ಇರಾನ್ ದೂರವಿಲ್ಲ: ವಿಶ್ವಸಂಸ್ಥೆ ಪರಮಾಣು ನಿಗಾ ಏಜೆನ್ಸಿ IAEA ಮುಖ್ಯಸ್ಥರ ಎಚ್ಚರಿಕೆ
ಪರಮಾಣು ಬಾಂಬ್ ಹೊಂದುವುದರಿಂದ ಇರಾನ್ ಹೆಚ್ಚು ದೂರವಿಲ್ಲ ಎಂದು ವಿಶ್ವಸಂಸ್ಥೆಯ ಪರಮಾಣು ನಿಗಾ ಏಜೆನ್ಸಿಯ International Atomic Energy Agency (IAEA) ಮುಖ್ಯಸ್ಥ ರಾಫೆಲ್ ಗ್ಲೋಸಿ ಎಚ್ಚರಿಕೆ ನೀಡಿದ್ದಾರೆ.
"ಇದು ಒಂದು ಒಗಟಿನಂತಿದೆ. ಅವರು ಬಿಡಿ ಭಾಗಗಳನ್ನು ಬೇರೆ ಬೇರೆಯಾಗಿ ಹೊಂದಿದ್ದಾರೆ ಮತ್ತು ಒಂದು ದಿನ ಅವರು ಅಂತಿಮವಾಗಿ ಒಟ್ಟಿಗೆ ಜೋಡಿಸಬಹುದು. ಇನ್ನೂ ಸ್ವಲ್ಪ ದೂರದ ಹಾದಿ ಕ್ರಮಿಸಬೇಕಿದೆ. ಆದರೂ ಅವರು ಹೆಚ್ಚು ದೂರದಲ್ಲಿಲ್ಲ ಎಂಬುದನ್ನು ಅಂಗೀಕರಿಸಬೇಕಾಗಿದೆ ಎಂದು ಗೋಸಿ ಹೇಳಿದ್ದಾರೆ.
"ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ದೀರ್ಘಕಾಲದಿಂದ ಶಂಕಿಸುತ್ತಿವೆ. ಆದರೆ ಇರಾನ್ ಇದನ್ನು ನಿರಾಕರಿಸಿದ್ದು ತನ್ನ ಪರಮಾಣು ಕಾರ್ಯಕ್ರಮಗಳು ಶಾಂತಿಯುತ ನಾಗರಿಕ ಉದ್ದೇಶಕ್ಕಾಗಿ ಎಂದು ಪ್ರತಿಪಾದಿಸಿದೆ.
"ಇರಾನಿನ ಪರಮಾಣು ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಆ ದೇಶವು 2015ರ ಪರಮಾಣು ಒಪ್ಪಂದವನ್ನು ಅನುಸರಿಸುತ್ತಿದೆಯೇ ಎಂದು ನಿಗಾ ವಹಿಸುವ ಹೊಣೆಯನ್ನು ವಿಶ್ವಸಂಸ್ಥೆಯ ಪರಮಾಣು ನಿಗಾ ಏಜೆನ್ಸಿಗೆ ವಹಿಸಲಾಗಿದೆ. 'ನಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿಲ್ಲ ಎಂದು ಅವರು(ಇರಾನ್) ಹೇಳಿದ ಮಾತ್ರಕ್ಕೆ ಅಂತರಾಷ್ಟ್ರೀಯ ಸಮುದಾಯ ನಂಬುವುದಿಲ್ಲ. ಪರಿಶೀಲನೆಯ ಅಗತ್ಯವಿದೆ ಎಂದು ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ(ಐಎಇಎ) ಮುಖ್ಯಸ್ಥರಾಗಿರುವ ಗೋಸಿ ಹೇಳಿದ್ದಾರೆ.
*ಈ ಮಧ್ಯೆ, ಇರಾನಿನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಆಮೆರಿಕ-ಇರಾನ್ ನಡುವಿನ ಎರಡನೇ ಉನ್ನತ ಮಟ್ಟದ ಮಾತುಕತೆ ಎಪ್ರಿಲ್ 19ರಂದು ರೋಮ್ ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
"ರೋಮ್ ನಲ್ಲಿ ನಡೆಯುವ ಮಾತುಕತೆಗೂ ಒಮಾನ್ ಮಧ್ಯಸ್ಥಿಕೆ ವಹಿಸುತ್ತದೆ ಎಂದು ಸರ್ಕಾರಿ ಸುದ್ದಿಸಂಸ್ಥೆ ಇರ್ನಾ ವರದಿ ಮಾಡಿದೆ. ಕಳೆದ ವಾರಾಂತ್ಯದ ಒಮಾನ್ ರಾಜಧಾನಿ ಮಸ್ಕತ್ನಲ್ಲಿ ನಡೆದಿದ್ದ ಪ್ರಥಮ ಸುತ್ತಿನ ಮಾತುಕತೆ ಒಮಾನ್ ಮಧ್ಯಸ್ಥಿಕೆಯಲ್ಲಿ ನಡೆದಿದೆ.
*ಈ ಮಧ್ಯೆ, ಇರಾಗ್ಗೆ ಆಗಮಿಸಿರುವ ವಿಶ್ವಸಂಸ್ಥೆಯ ಪರಮಾಣು ನಿಗಾ ಏಜೆನ್ಸಿ ಮುಖ್ಯಸ್ಥ ರಾಫೆಲ್ ಗೋಸಿ ಜತೆ ನಡೆಸಿದ ಸಭೆಯಲ್ಲಿ ಇರಾನಿನ ವಿದೇಶಾಂಗ ಸಚಿವ ಅಬ್ದಾಸ್ ಆರಾಷ್ಟ್ರ ಪ್ರಥಮ ಸುತ್ತಿನ ಮಾತುಕತೆಯ ವಿವರ ನೀಡಿದರು. ಜೊತೆಗೆ ಇರಾನಿನ ಶಾಂತಿಯುತ ಪರಮಾಣು ವ್ಯವಸ್ಥೆಗಳ ವಿರುದ್ಧದ ಬೆದರಿಕೆಯ ಬಗ್ಗೆ ಅಂತರಾಷ್ಟ್ರೀಯ ಪರಮಾಣು ಏಜೆನ್ಸಿ (ಐಎಇಎ)ಸ್ಪಷ್ಟ ಮತ್ತು ಪಾರದರ್ಶಕ ನಿಲುವನ್ನು ಅಳವಡಿಸಬೇಕೆಂದು ಒತ್ತಾಯಿಸಿದರು. ಎಂದು ವರದಿ ಹೇಳಿದೆ.
*ಪ್ರಸ್ತುತ ಮಾತುಕತೆಗಳನ್ನು ತಪ್ಪಿಸಲು ಹಲವರು ಪ್ರಯತ್ನಿಸುತ್ತಿರುವುದರಿಂದ ನಮಗೆ ಶಾಂತಿಯ ಮಹಾ ನಿರ್ದೇಶಕರ ಅಗತ್ಯವಿದೆ. ಏಜೆನ್ಸಿಯನ್ನು ರಾಜಕೀಯದಿಂದ ದೂರವಿರಿಸುವ ಉದ್ದೇಶವನ್ನು Agen ಸಾಧಿಸುತ್ತಾರೆ ನಂಬಿಕೆಯಿದೆ. ಪರಮಾಣು ಪುಷ್ಟಿಕರಣ(ಎನ್ರಿಚ್ಚೆಂಟ್) ವಿಷಯದಲ್ಲಿ ಯಾವುದೇ ಚರ್ಚೆಗೆ ಆಸ್ಪದವಿಲ್ಲ ಎಂದು ಆರಾಷ್ಟ್ರ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ఎంబ
*2018ರಲ್ಲಿ ಪರಮಾಣು ಒಪ್ಪಂದ ಪತನಗೊಂಡ ಬಳಿಕ ಇರಾನ್ ತನ್ನ ಕಾರ್ಯಕ್ರಮಗಳ ಮೇಲಿನ ಮಿತಿಯನ್ನು ತ್ಯಜಿಸಿದ್ದು ಯುರೇನಿಯಂ ಅನ್ನು ಶೇಕಡಾ 60ರಷ್ಟು ಶುದ್ದೀಕರಿಸುತ್ತಿದೆ. (ಪರಮಾಣು ಶಸ್ತ್ರಾಸ್ತ್ರಕ್ಕೆ 90% ಮಟ್ಟದ ಶುದ್ಧತೆ ಅಗತ್ಯವಿದೆ), ಇರಾನಿನ ಪರಮಾಣು ಸ್ಥಾವರಗಳಲ್ಲಿ ಐವಿಇಎ ಆಳವಡಿಸಿದ್ದ ಸಿಸಿ ಕ್ಯಾಮೆರಾಗಳಿಗೆ ಅಡ್ಡಿಪಡಿಸಲಾಗಿದೆ ಮತ್ತು ಅಂತರಾಷ್ಟ್ರೀಯ ಪರಮಾಣು ಸಂಸ್ಥೆಯ ಅತ್ಯಂತ ಅನುಭವಿ ಇನ್ನೆ ಕ್ಷರ್ಗಳನ್ನು ನಿರ್ಬಂಧಿಸಿದೆ
10. Equality Act 2010 ಅಡಿ ಮಹಿಳೆಯ ಕಾನೂನು ವ್ಯಾಖ್ಯಾನವು ಜೈವಿಕ ಲೈಂಗಿಕತೆಯನ್ನು ಆಧರಿಸಿದೆ ಎಂದು ಯುಕೆ ಸುಪ್ರೀಂ ಕೋರ್ಟ್
ತೀರ್ಪು ನೀಡಿದೆ.
2010 ರ ಸಮಾನತೆ ಕಾಯ್ದೆಯಲ್ಲಿ ಮಹಿಳೆ ಮತ್ತು ಲಿಂಗ ಎಂಬ ಪದಗಳು ಜೈವಿಕ ಮಹಿಳೆ ಮತ್ತು ಜೈವಿಕ ಲಿಂಗವನ್ನು ಉಲ್ಲೇಖಿಸುತ್ತವೆ" ಎಂದು ಯುಕೆ ಸುಪ್ರೀಂ ಕೋರ್ಟ್ ಸರ್ವಾನುಮತದ ತೀರ್ಪಿನಲ್ಲಿ ನಿರ್ಧರಿಸಿತು.
"ಲೈಂಗಿಕತೆಯ ಪರಿಕಲ್ಪನೆಯು ದ್ವಿಮುಖವಾಗಿದೆ" ಎಂದು ನ್ಯಾಯಾಧೀಶರು ಹೇಳುತ್ತಾರೆ. ಆದರೆ ಈ ಮಹತ್ವದ ತೀರ್ಪನ್ನು ಒಂದು ಕಡೆಯ ಮೇಲೆ ಇನ್ನೊಂದು ಕಡೆಯ ವಿಜಯವೆಂದು ನೋಡಬಾರದು ಎಂದು ಎಚ್ಚರಿಸಿದ್ದಾರೆ.
*ತೃತೀಯ ಲಿಂಗಿಗಳು ಇನ್ನೂ ತಾರತಮ್ಯದಿಂದ ಕಾನೂನು ರಕ್ಷಣೆ ಹೊಂದಿದ್ದಾರೆ ಎಂದು ನ್ಯಾಯಾಲಯ ಹೇಳುತ್ತದೆ.
ಸಾರ್ವಜನಿಕ ವಲಯದ ಮಂಡಳಿಗಳಲ್ಲಿ ಲಿಂಗ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ಸ್ಟಾಟಿಷ್ ಸರ್ಕಾರವು ಟ್ರಾನ್ಸೆಂಡರ್ ಮಹಿಳೆಯರನ್ನು ಕೋಟಾಗಳಲ್ಲಿ ಸೇರಿಸಿದ ನಂತರ ಇದು ಸಂಭವಿಸಿತು.
*ಆ ಕಾನೂನಿನ ಉದ್ದೇಶಗಳಿಗಾಗಿ ಟ್ರಾನ್ಸ್ ಮಹಿಳೆಯರನ್ನು ಮಹಿಳೆಯರು ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತೀರ್ಪು ನೀಡಿದರು.
"ಲಿಂಗ ಗುರುತಿಸುವಿಕೆ ಪ್ರಮಾಣಪತ್ರ Gender Recognition Certificate (GRC) ಹೊಂದಿರುವ ಟ್ರಾನ್ಸೆಂಡರ್ ಜನರು ಲೈಂಗಿಕ ಆಧಾರಿತ ರಕ್ಷಣೆಗೆ ಅರ್ಹರು ಎಂದು ಸ್ಯಾಟಿಷ್ ಸರ್ಕಾರ ವಾದಿಸಿತ್ತು. ಆದರೆ ಕ್ಯಾಂಪೇನ್ ಗ್ರೂಪ್ ಫಾರ್ ವುಮೆನ್ ಸ್ಕಾಟ್ಲಂಡ್ ಲಿಂಗ ಆಧಾರಿತ ರಕ್ಷಣೆಗಳು ಹೆಣ್ಣಾಗಿ ಜನಿಸಿದ ಜನರಿಗೆ ಮಾತ್ರ ಅನ್ವಯಿಸಬೇಕು ಎಂದು ವಾದಿಸಿತು.
ಇಂದಿನ ತೀರ್ಪಿನ ಮೇರೆಗೆ ಸಮಾನತೆ ಮತ್ತು ಮಾನವ ಹಕ್ಕುಗಳ ಆಯೋಗವು ಟ್ರಾನ್ಸ್ ಹಕ್ಕುಗಳ ಕುರಿತಾದ ಮಾರ್ಗಸೂಚಿಗಳನ್ನು ಪರಿಶೀಲಿಸುತ್ತದೆ ಮತ್ತು ಪರಿಷ್ಕರಿಸುತ್ತದೆ ಎಂದು ಸ್ಟಾಟಿಷ್ ಸರ್ಕಾರದ ಹಣಕಾಸು ಸಚಿವೆ ಶೋನಾ ರಾಬಿಸನ್ ತಿಳಿಸಿದರು.
*2010 ರ ಸಮಾನತೆ ಕಾಯ್ದೆಯ ವ್ಯಾಖ್ಯಾನವನ್ನು ಸ್ಕಾಟಿಷ್ ಸರ್ಕಾರ ಮತ್ತು EHRC 'ಸದ್ಭಾವನೆಯಿಂದ ಮಾಡಿದೆ ಆದರೆ 2010 ರ ಕಾಯ್ದೆ ಮತ್ತು 2004 ರ ಲಿಂಗ ಗುರುತಿಸುವಿಕೆ ಮಸೂದೆಯ ನಡುವೆ ಆಸಂಗತತೆ" ಇತ್ತು. ಇಂದಿನ ತೀರ್ಪು ಈ ವಿಷಯಕ್ಕೆ ಸ್ಪಷ್ಟತೆ" ತರಬಹುದು ಎಂದು ಅವರು ಹೇಳಿದರು. ಟ್ರಾನ್ಸ್ ಹಕ್ಕುಗಳು ಇನ್ನೂ "ರಕ್ಷಿತವಾಗಿವೆ" ಎಂದು ರಾಬಿಸನ್ ಹೇಳಿದರು.