ಜನರಲ್ ನಾಲೆಜ್ ರಸಪ್ರಶ್ನೆ



ಚಕ್ರವರ್ತಿ ಷಹಜಹಾನ್‌ ಆಸ್ಥಾನಕ್ಕೆ ಭೇಟಿ ನೀಡಿ ತಖ್‌-ಇ-ತೌಸ್ (ನವಿಲು ಸಿಂಹಾಸನ) ದ ವಿವರವಾದ ವಿವರಣೆಯನ್ನು ನೀಡಿದ ಫ್ರೆಂಚ್ ಪರಿಶೋಧಕ ಯಾರು?


A. ಗೆರೊನಿಮೊ ವೆರೊನಿಯೊ

B. ಜೀನ್-ಬ್ಯಾಪ್ಟಿಸ್ಟ್ ಟಾವೆರ್ನಿಯ‌ರ್

C. ಪಿಯರ್-ಜೀನ್ ಗ್ರೂಸ್ಲಿ

D. ಜೀನ್-ಪಾಲ್ ಡುಬೊಯಿಸ್

ಉತ್ತರ:-  B. ಜೀನ್-ಬ್ಯಾಪ್ಟಿಸ್ಟ್ ಟಾವೆರ್ನಿಯ‌ರ್


ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, 'ಕೇಸರಿ' ಪತ್ರಿಕೆಯನ್ನು ಪ್ರಕಟಿಸಿದವರು ಯಾರು?

A. ಸುಭಾಷ್ ಚಂದ್ರ ಬೋಸ್

B. ಬಾಲಗಂಗಾಧರ ತಿಲಕ್

C. ಲಾಲಾ ಲಜಪತ್ ರಾಯ್

D. ಮೊಹಮ್ಮದ್ ಅಲಿ ಜಿನ್ನಾ

ಉತ್ತರ: B. ಬಾಲಗಂಗಾಧರ ತಿಲಕ್

ಈ ಕೆಳಗಿನವರಲ್ಲಿ ಯಾರು 1916 ರಲ್ಲಿ ಹೋಮ್ ರೂಲ್ ಲೀಗ್ ಚಳುವಳಿಯನ್ನು ಪ್ರಾರಂಭಿಸಿದರು?

A. ಫ್ರಾಂಕ್ ಬೆಸೆಂಟ್

B. ಹೆಲೆನಾ ಬ್ಲಾವಟ್ಟಿ

C. ಚಾರ್ಲ್ಸ್ ನೋಲ್ಡನ್

D. ಆನಿಬೆಸೆಂಟ್

ಉತ್ತರ  D. ಆನಿಬೆಸೆಂಟ್


ಎಂ.ಎನ್.ರಾಯ್ ಅವರು ಅಕ್ಟೋಬ‌ರ್ 17, 1920 ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವನ್ನು ಎಲ್ಲಿ ಸ್ಥಾಪಿಸಿದರು?

A. ಕಲ್ಕತ್ತಾ

B. ಪೇಶಾವರ್

C. ಲಂಡನ್

D. ತಾಸ್ಕೆಂಟ್

ಉತ್ತರ D. ತಾಸ್ಕೆಂಟ್


ಈಸ್ಟ್ ಇಂಡಿಯಾ ಕಂಪನಿಯ ಕೊನೆಯ ಗವರ್ನರ್ ಜನರಲ್ ಯಾರು?

A. ಲಾರ್ಡ್ ಎಲೆನ್‌ಬರೋ

B. ಲಾರ್ಡ್ ಕ್ಯಾನಿಂಗ್

C. ಲಾರ್ಡ್ ಎಲ್ಟಿನ್-1

D. ಲಾರ್ಡ್ ಡಾಲೌಸಿ

ಉತ್ತರ B. ಲಾರ್ಡ್ ಕ್ಯಾನಿಂಗ್


ಯಾವ ವರ್ಷದಲ್ಲಿ ಭಾರತಕ್ಕೆ ಮೊದಲ ಡಚ್ಚರ ನೌಕಾಪಡೆ ಬಂದಿತು?

Α. 1498


Β. 1510


C. 1550

D. 1595

ಉತ್ತರ D. 1595

ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ?

A. 1929 :  ಭಗತ್ ಸಿಂಗ್ ಸೆಂಟ್ರಲ್ ಅಸೆಂಬ್ಲಿ ಹೌಸ್ಮೇಲೆ ಬಾಂಬ್ ಎಸೆದರು.

B. 1930: ಸೈಮನ್ ಆಯೋಗ ಭಾರತಕ್ಕೆ ಬಂದಿತು.

C. 1931: ಎರಡನೇ ದುಂಡು ಮೇಜಿನ ಸಮ್ಮೇಳನ.

D. ಎಲ್ಲವೂ ಸರಿಯಾಗಿವೆ.

ಉತ್ತರ B. 1930: ಸೈಮನ್ ಆಯೋಗ ಭಾರತಕ್ಕೆ ಬಂದಿತು.


 ‌ಸರ್ ಎಲ್ವಿನ್ ಮಾಂಟಾಗು ಮತ್ತು ವೈಸ್ರಾಯ್ ಲಾರ್ಡ್ ಚೆಲ್ಡ್‌ ಫೋರ್ಡ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದಾರೆ?

A. ಭಾರತ ಸರ್ಕಾರ ಕಾಯ್ದೆ 1858

B. ಭಾರತ ಸರ್ಕಾರ ಕಾಯ್ದೆ 1919

C. ಭಾರತ ಸರ್ಕಾರ ಕಾಯ್ದೆ 1909

D. ಭಾರತ ಸರ್ಕಾರ ಕಾಯ್ದೆ 1935

ಉತ್ತರ B. ಭಾರತ ಸರ್ಕಾರ ಕಾಯ್ದೆ 1919


ವಿವರಣೆ: ಭಾರತ ಸರ್ಕಾರದಲ್ಲಿ ಭಾರತೀಯರ ಭಾಗವಹಿಸುವಿಕೆಯನ್ನು ಮತ್ತಷ್ಟು ವಿಸ್ತರಿಸಲು ಬ್ರಿಟಿಷ್ ಸಂಸತ್ತು 1919 ರ ಭಾರತ ಸರ್ಕಾರ ಕಾಯ್ದೆಯನ್ನು ಅಂಗೀಕರಿಸಿತು.

ಎಡ್ರಿನ್ ಮಾಂಟಾಗು (ಭಾರತದ ರಾಜ್ಯ ಕಾರ್ಯದರ್ಶಿ) ಮತ್ತು ಲಾರ್ಡ್ ಚೆಲ್ಡ್‌ ಫೋರ್ಡ್ {ವೈಸ್‌ರಾಯ್ ಮತ್ತು ಗವರ್ನರ್ ಜನರಲ್) ಅವರ ವರದಿಯಿಂದ ಶಿಫಾರಸು ಮಾಡಲಾದ ಸುಧಾರಣೆಗಳನ್ನು ಈ ಕಾಯ್ದೆಯು ಒಳಗೊಂಡಿರುವುದರಿಂದ, ಇದನ್ನು ಮಾಂಟೇಗ್-ಚೆಲ್ಸ್‌ ಫೋರ್ಡ್ ಸುಧಾರಣೆಗಳು ಎಂದೂ ಕರೆಯಲಾಗುತ್ತದೆ.

ಮಹಾತ್ಮ ಗಾಂಧಿಯವರ ಸಹಚರ ಮತ್ತು ಶಿಷ್ಯಯಾಗಿದ್ದ ಮೀರಾಬೆನ್‌ ಅವರ ಮೂಲ ಹೆಸರೇನು?

A. ಆಲಿವರ್ ಕ್ರೈನರ್

B. ಮಿಲ್ಲಿ ಗ್ರಹಾಂ ಪೊಲಾಕ್

C. ಮ್ಯಾಡೆಲಿನ್ ಸ್ಟೇಡ್

D. ಮಾರ್ಗರೇಟ್ ಕಸಿನ್ಸ್

ಉತ್ತರ C. ಮ್ಯಾಡೆಲಿನ್ ಸ್ಟೇಡ್


ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು